ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Flashback 2022: ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್

Flashback 2022: Mohammad Siraj Took Most Wickets In ODI Cricket For India

ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ 2022ರಲ್ಲಿ ಭಾರತದ ಪರ ಅತಿ ಹೆಚ್ಚು ಏಕದಿನ ವಿಕೆಟ್ ಪಡೆದ ಬೌಲರ್ ಆಗುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.

ಭಾರತದ ಈ ಯುವ ವೇಗಿ ಢಾಕಾದ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆರಂಭಿಕ ಎರಡು ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾಗೆ ಮುನ್ನಡೆ ಒದಗಿಸಿದರು.

ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್‌ಮನ್ ಅನಾಮುಲ್ ಹಕ್ ಮತ್ತು ಲಿಟನ್ ದಾಸ್ ಅವರನ್ನು ಔಟ್ ಮಾಡುತ್ತಿದ್ದಂತೆಯೇ ಮೊಹಮ್ಮದ್ ಸಿರಾಜ್ 2022ರಲ್ಲಿ ಭಾರತದ ಪರ ಅತಿ ಹೆಚ್ಚು ಏಕದಿನ ವಿಕೆಟ್‌ ಪಡೆದ ಹೆಗ್ಗಳಿಕೆಗೆ ಪಾತ್ರರಾದರು. ನಂತರ ಮೂರನೇ ಏಕದಿನ ಪಂದ್ಯದಲ್ಲಿ ಒಂದು ವಿಕೆಟ್ ಪಡೆದು ಮಿಂಚಿದರು.

IPL 2023: ಮಿನಿ ಹರಾಜಿನಲ್ಲಿ ಕ್ಯಾಮರೂನ್ ಗ್ರೀನ್‌ಗೆ ಗಾಳ ಹಾಕಲಿದೆ ಈ ಫ್ರಾಂಚೈಸಿ; ಅನಿಲ್ ಕುಂಬ್ಳೆIPL 2023: ಮಿನಿ ಹರಾಜಿನಲ್ಲಿ ಕ್ಯಾಮರೂನ್ ಗ್ರೀನ್‌ಗೆ ಗಾಳ ಹಾಕಲಿದೆ ಈ ಫ್ರಾಂಚೈಸಿ; ಅನಿಲ್ ಕುಂಬ್ಳೆ

ಈ ಮೂಲಕ ಬಲಗೈ ವೇಗಿ ಮೊಹಮ್ಮದ್ ಸಿರಾಜ್ 15 ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಪಡೆಯುವ ಮೂಲಕ 22 ವಿಕೆಟ್‌ ಪಡೆದಿರುವ ಭಾರತದ ಇನ್ನೋರ್ವ ವೇಗಿ ಶಾರ್ದೂಲ್ ಠಾಕೂರ್‌ಗಿಂತ ಒಂದು ವಿಕೆಟ್ ಮೇಲಿದ್ದಾರೆ. ಇನ್ನು ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರು 21 ವಿಕೆಟ್ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.

Flashback 2022: Mohammad Siraj Took Most Wickets In ODI Cricket For India

2022ರಲ್ಲಿ ಏಕದಿನ ಪಂದ್ಯಗಳಲ್ಲಿ ಭಾರತದ ಪರ ಅಗ್ರ ವಿಕೆಟ್ ಟೇಕರ್ಸ್
1) ಮೊಹಮ್ಮದ್ ಸಿರಾಜ್ - 15 ಪಂದ್ಯ 24 ವಿಕೆಟ್‌ಗಳು

2) ಶಾರ್ದೂಲ್ ಠಾಕೂರ್ - 16 ಪಂದ್ಯ 22 ವಿಕೆಟ್‌ಗಳು

3) ಯುಜ್ವೇಂದ್ರ ಚಹಾಲ್- 14 ಪಂದ್ಯ 21 ವಿಕೆಟ್‌ಗಳು

4) ಪ್ರಸಿದ್ಧ್ ಕೃಷ್ಣ: ಪಂದ್ಯಗಳು - 11 ಪಂದ್ಯ 19 ವಿಕೆಟ್‌ಗಳು

ಮೊಹಮ್ಮದ್ ಸಿರಾಜ್ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 3 ವಿಕೆಟ್‌ಗಳೊಂದಿಗೆ ಅತ್ಯುತ್ತಮ ಫಾರ್ಮ್‌ನಲ್ಲಿ ಕಂಡುಬಂದರು. ಆದರೆ ಮೂರು ವಿಕೆಟ್‌ಗಳನ್ನು ಪಡೆದರೂ ಟೀಂ ಇಂಡಿಯಾವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

IPL 2023 Auction: ಈ ಆಲ್‌ರೌಂಡರ್‌ನನ್ನು ಟಾರ್ಗೆಟ್ ಮಾಡಲಿದೆ ಸಿಎಸ್‌ಕೆ; ರಾಬಿನ್ ಉತ್ತಪ್ಪ


ಮೂರು ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡ 1-2 ಅಂತರದಲ್ಲಿ ಸರಣಿ ಸೋತು ಮುಖಭಂಗ ಅನುಭವಿಸಿತು.

ಇದಾದ ನಂತರ ಚಟ್ಟೋಗ್ರಾಮ್‌ನಲ್ಲಿ ಡಿಸೆಂಬರ್ 14ರಿಂದ ಆರಂಭವಾಗಿ ಡಿಸೆಂಬರ್ 18ರಂದು ಮುಗಿದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 188 ರನ್‌ಗಳಿಂದ ಆತಿಥೇಯ ಬಾಂಗ್ಲಾದೇಶವನ್ನು ಮಣಿಸಿತು. ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 22ರಂದು ಢಾಕಾದಲ್ಲಿ ನಡೆಯಲಿದೆ.

Story first published: Tuesday, December 20, 2022, 21:56 [IST]
Other articles published on Dec 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X