ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023 Auction: ಈ ಆಲ್‌ರೌಂಡರ್‌ನನ್ನು ಟಾರ್ಗೆಟ್ ಮಾಡಲಿದೆ ಸಿಎಸ್‌ಕೆ; ರಾಬಿನ್ ಉತ್ತಪ್ಪ

IPL 2023: CSK To Target All-rounder Sam Curran In Mini Auction Says Robin Uthappa

2023ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ (ಐಪಿಎಲ್) ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 23ರ ಶುಕ್ರವಾರದಂದು ಕೊಚ್ಚಿಯಲ್ಲಿ ನಡೆಯಲಿದೆ.

ಎಂಎಸ್ ಧೋನಿ ನಾಯಕತ್ವದ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 2022ರಲ್ಲಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ತನ್ನ ಅಭಿಯಾನ ಮುಗಿಸಿತು. ಪ್ಲೇಆಫ್ ಹಂತಕ್ಕೆ ಅರ್ಹತೆ ಪಡೆಯಲು ವಿಫಲವಾದ ನಂತರ ತಂಡವನ್ನು ಪುನಃ ಕಟ್ಟುವ ಅಗತ್ಯವಿದೆ. ಆಲ್‌ರೌಂಡರ್ ಡ್ವೇನ್ ಬ್ರಾವೋ ಐಪಿಎಲ್‌ನಿಂದ ನಿವೃತ್ತಿಯಾಗುವುದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಉತ್ತಮ ಆಲ್‌ರೌಂಡರ್ ಕೊರತೆ ಎದುರಿಸುತ್ತಿದೆ.

IPL 2023: ಮಿನಿ ಹರಾಜಿನಲ್ಲಿ ಅತ್ಯಂತ ದುಬಾರಿ ಖರೀದಿಯಾಗುವ 3 ಸಂಭಾವ್ಯ ಭಾರತೀಯ ಆಟಗಾರರುIPL 2023: ಮಿನಿ ಹರಾಜಿನಲ್ಲಿ ಅತ್ಯಂತ ದುಬಾರಿ ಖರೀದಿಯಾಗುವ 3 ಸಂಭಾವ್ಯ ಭಾರತೀಯ ಆಟಗಾರರು

ಡ್ವೇನ್ ಬ್ರಾವೋ ಮತ್ತು ರಾಬಿನ್ ಉತ್ತಪ್ಪ ನಿವೃತ್ತಿಯ ನಂತರ ಐಪಿಎಲ್ 2023ರ ಹರಾಜಿಗೆ ಸಿಎಸ್‌ಕೆ ತನ್ನ ಪರ್ಸ್‌ನಲ್ಲಿ 20.45 ಕೋಟಿ ರೂ. ಹೊಂದಿದೆ. ಮಾಜಿ ಸಿಎಸ್‌ಕೆ ಬ್ಯಾಟರ್ ರಾಬಿನ್ ಉತ್ತಪ್ಪ ಈಗ ಮುಂಬರುವ ಐಪಿಎಲ್ 2023ರ ಹರಾಜಿಗಾಗಿ JioCinema ತಜ್ಞರ ಸಮಿತಿಯ ಭಾಗವಾಗಿದ್ದಾರೆ.

ಅತ್ಯುತ್ತಮ ಪ್ರದರ್ಶನ ನೀಡಿದ್ದ ಸ್ಯಾಮ್ ಕರ್ರಾನ್

ಅತ್ಯುತ್ತಮ ಪ್ರದರ್ಶನ ನೀಡಿದ್ದ ಸ್ಯಾಮ್ ಕರ್ರಾನ್

ಐಪಿಎಲ್ 2021ರಲ್ಲಿ ಸಿಎಸ್‌ಕೆ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರ್ರಾನ್, ಐಪಿಎಲ್ 2023ರ ಹರಾಜಿನಲ್ಲಿ ಎಂಎಸ್ ಧೋನಿಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುತ್ತಾರೆ ಎಂದು ರಾಬಿನ್ ಉತ್ತಪ್ಪ ಹೇಳಿದರು.

ಡಿಸೆಂಬರ್ 23ರಂದು ಐಪಿಎಲ್ 2023 ಆಟಗಾರರ ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನೋಡಲಿರುವ ಆಟಗಾರರ ಪಟ್ಟಿಯ ಕುರಿತು ಉತ್ತಪ್ಪ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

"ಕೆಕೆಆರ್ ಈ ಹರಾಜಿನಲ್ಲಿ ಮೂರು ಆಟಗಾರರನ್ನು ಹುಡುಕುತ್ತಿದೆ. ಒಬ್ಬರು ರಹಮಾನುಲ್ಲಾ ಗುರ್ಬಾಜ್ ಬ್ಯಾಕಪ್ ವಿಕೆಟ್‌ಕೀಪರ್ ಆಗಿರುತ್ತಾರೆ. ಒಂದು ವೇಳೆ ಟಿಮ್ ಸೌಥಿ ಮತ್ತು ಲಾಕಿ ಫರ್ಗುಸನ್ ಇಬ್ಬರನ್ನೂ ಆಡಿಸಲು ಬಯಸಿದರೆ ಮತ್ತು ಸುನಿಲ್ ನರೈನ್ ಮತ್ತು ಆಂಡ್ರೆ ರಸೆಲ್ ಅವರನ್ನು ಕೈಬಿಡಲು ಸಾಧ್ಯವಿಲ್ಲವಾದ್ದರಿಂದ ಗುರ್ಬಾಜ್ ಹೊರಗುಳಿಯಬೇಕಾಗುತ್ತದೆ," ಎಂದರು.

ಕರ್ರಾನ್ ಈಗಾಗಲೇ ಸಿಎಸ್‌ಕೆ ತಂಡಕ್ಕಾಗಿ ಆಡಿದ್ದಾರೆ

ಕರ್ರಾನ್ ಈಗಾಗಲೇ ಸಿಎಸ್‌ಕೆ ತಂಡಕ್ಕಾಗಿ ಆಡಿದ್ದಾರೆ

"ಐಪಿಎಲ್ ಬಹಳ ದೀರ್ಘ ಪ್ರಯಾಣವಾಗಿದೆ, ಕೆಕೆಆರ್ ಹೆಚ್ಚು ಪ್ರಯಾಣಿಸುವ ಅಂತಹ ತಂಡಗಳಲ್ಲಿ ಒಂದಾಗಿದೆ. ಕೋಲ್ಕತ್ತಾ ತಂಡ ಇತರ ಎಲ್ಲ ತಂಡಗಳಿಗಿಂತ ಕನಿಷ್ಠ 2-3 ಸಾವಿರ ಕಿ.ಮೀಗಳಷ್ಟು ದೂರದಲ್ಲಿದೆ. ಆದ್ದರಿಂದ, ಆ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನೀವು ಬ್ಯಾಕ್‌ಅಪ್ ಬ್ಯಾಟರ್‌ಗಳನ್ನು ಹೊಂದಿರಬೇಕು. ಆಂಡ್ರೆ ರಸ್ಸೆಲ್ ಒಬ್ಬರೇ ಪಂದ್ಯವನ್ನು ಮೇಲಕ್ಕೆತ್ತಲು ಸಾಧ್ಯವಿಲ್ಲ," ಎಂದು ಉತ್ತಪ್ಪ ತಿಳಿಸಿದರು.

ರಾಬಿನ್ ಉತ್ತಪ್ಪ ಅವರು ಚೆನ್ನೈ ಸೂಪರ್ ಕಿಂಗ್ಸ್‌ನ ನಿರೀಕ್ಷಿತ ಖರೀದಿಗಳ ಬಗ್ಗೆ ಮಾತನಾಡಿ, "ಸಿಎಸ್‌ಕೆ ಡ್ವೇನ್ ಬ್ರಾವೋ ನಿವೃತ್ತಿಯ ನಂತರ ಆಲ್‌ರೌಂಡರ್ ಅಗತ್ಯವಿದೆ ಮತ್ತು ಅವರು ಈಗಾಗಲೇ ಹೊಂದಿರುವ ಆಟಗಾರರಿಗೆ ಬ್ಯಾಕ್‌ಅಪ್ ಆಗಿ ಅವರಿಗೆ ದೊಡ್ಡ ಮಧ್ಯಮ ಕ್ರಮಾಂಕದ ಬ್ಯಾಟರ್ ಅಗತ್ಯವಿದೆ. ಹಾಗಾಗಿ ಇಂಗ್ಲೆಂಡ್‌ನ ಸ್ಯಾಮ್ ಕರ್ರಾನ್ ಅವರಂತಹವರನ್ನು ಹುಡುಕುತ್ತಾರೆ ಎಂದು ನಾನು ಭಾವಿಸುತ್ತೇನೆ. ಈಗಾಗಲೇ ಕರ್ರಾನ್ ಅವರು ಈಗಾಗಲೇ ಸಿಎಸ್‌ಕೆ ತಂಡಕ್ಕಾಗಿ ಆಡಿದ್ದಾರೆ. ತಂಡವು ಅವರನ್ನು ಖರೀದಿಸಲು ಖಂಡಿತವಾಗಿಯೂ ಪ್ರಯತ್ನಿಸುತ್ತಾರೆ,'' ಎಂದು ರಾಬಿನ್ ಉತ್ತಪ್ಪ ವಿವರಿಸಿದರು.

ಮನೀಶ್ ಪಾಂಡೆ ಮೇಲೆ ಟಾರ್ಗೆಟ್

ಮನೀಶ್ ಪಾಂಡೆ ಮೇಲೆ ಟಾರ್ಗೆಟ್



"ಎರಡನೆಯ ಖರೀದಿಯಲ್ಲಿ ಮಧ್ಯಮ ಕ್ರಮಾಂಕದ ಭಾರತೀಯ ಬ್ಯಾಟರ್ ಆಗಿರುತ್ತಾರೆ. ಈ ಹರಾಜಿನಲ್ಲಿ ಲಭ್ಯವಿರುವ ಮನೀಶ್ ಪಾಂಡೆ ಮೇಲೆ ಟಾರ್ಗೆಟ್ ಮಾಡಲಾಗುತ್ತದೆ. ಅವರು ಐಪಿಎಲ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದಾರೆ ಮತ್ತು ಅನುಭವಿ ಆಟಗಾರನಾಗಿದ್ದಾರೆ. ಈ ಇಬ್ಬರು ಆಟಗಾರರನ್ನು ಪಡೆಯದಿದ್ದರೆ, ಸಿಎಸ್‌ಕೆಗೆ ಇತರ ಆಯ್ಕೆಗಳಿವೆ ಎಂದು ನನಗೆ ಖಚಿತವಾಗಿದೆ," ಎಂದು ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಹೇಳಿದರು.

ಸಿಎಸ್‌ಕೆ ಉಳಿಸಿಕೊಂಡಿರುವ ಆಟಗಾರರು

ಸಿಎಸ್‌ಕೆ ಉಳಿಸಿಕೊಂಡಿರುವ ಆಟಗಾರರು

ಎಂಎಸ್ ಧೋನಿ (ನಾಯಕ), ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಸಿಂಘ್ ಚೌಧರಿ, ಸಿಮ್ ಚೌಧರಿ, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ

Story first published: Tuesday, December 20, 2022, 17:22 [IST]
Other articles published on Dec 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X