For Quick Alerts
ALLOW NOTIFICATIONS  
For Daily Alerts
 

Flashback 2022: 2022ರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸೂರ್ಯಕುಮಾರ್ ಯಾದವ್

Flashback 2022: Suryakumar Yadav Is Highest Run Scorer in T20 Cricket 2022

2022ರಲ್ಲಿ ಭಾರತದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್‌ಗೆ ಟಿ20 ಕ್ರಿಕೆಟ್‌ನಲ್ಲಿ ಮುಟ್ಟಿದ್ದೆಲ್ಲ ಚಿನ್ನವಾಗಿದೆ. ಅವರು 2022ರಲ್ಲಿ ಅತಿ ಹೆಚ್ಚು ಟಿ20 ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಈ ಹಿಂದೆ ಯಾವುದೇ ಭಾರತೀಯ ಬ್ಯಾಟರ್ ಮಾಡದ ಸಾಧನೆಯನ್ನು ಚುಟುಕು ಕ್ರಿಕೆಟ್‌ನ ಒಂದು ಕ್ಯಾಲೆಂಡರ್ ವರ್ಷದಲ್ಲಿ ಸೂರ್ಯಕುಮಾರ್ ಯಾದವ್ ಮಾಡಿದ್ದಾರೆ. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಎರಡನೇ ವರ್ಷದಲ್ಲಿ ವರ್ಷವಿಡೀ ಎದುರಾಳಿ ಬೌಲರ್‌ಗಳಿಗೆ ಬೆವರಿಳಿಸಿದರು.

ಟಿ20 ಶ್ರೇಯಾಂಕದಲ್ಲಿ 890 ರೇಟಿಂಗ್‌ನೊಂದಿಗೆ ನಂ.1 ಸ್ಥಾನದಲ್ಲಿರುವ ಸೂರ್ಯಕುಮಾರ್ ಯಾದವ್ ಆಡಿದ 30 ಇನ್ನಿಂಗ್ಸ್‌ಗಳಲ್ಲಿ ಸರಾಸರಿ 47.95 ಮತ್ತು 188.37 ಸ್ಟ್ರೈಕ್‌ರೇಟ್‌ನಲ್ಲಿ 1,151 ರನ್ ಗಳಿಸಿದ್ದಾರೆ.

Flashback 2022: Suryakumar Yadav Is Highest Run Scorer in T20 Cricket 2022

ಈ ವರ್ಷ ಆಡಿದ 30 ಟಿ20 ಪಂದ್ಯಗಳಲ್ಲಿ ಹೆಚ್ಚು 50+ ಸ್ಕೋರ್‌ಗಳನ್ನು ಹೊಂದಿರುವ ಏಕೈಕ ಬ್ಯಾಟರ್ ಆಗಿದ್ದಾರೆ. ಸೂರ್ಯಕುಮಾರ್ ಯಾದವ್ 105 ಬೌಂಡರಿ ಮತ್ತು 67 ಸಿಕ್ಸರ್‌ಗಳನ್ನು ಬಾರಿಸಿದ್ದು, ಎರಡು ಶತಕಗಳು ಮತ್ತು ಒಂಬತ್ತು ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರು ಒಟ್ಟು 172 ಬೌಂಡರಿಗಳು ಮತ್ತು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಪಾಕಿಸ್ತಾನದ ವಿಕೆಟ್ ಕೀಪರ್- ಬ್ಯಾಟರ್ ಮೊಹಮ್ಮದ್ ರಿಜ್ವಾನ್‌ಗಿಂತ (2022ರಲ್ಲಿ 100 ಟಿ20 ಬೌಂಡರಿಗಳೊಂದಿಗೆ ಪಟ್ಟಿಯಲ್ಲಿ ಎರಡನೆಯವರು) 72 ಬೌಂಡರಿಗಳನ್ನು ಹೆಚ್ಚು ಗಳಿಸಿದ್ದಾರೆ.

ಮೊಹಮ್ಮದ್ ರಿಜ್ವಾನ್ (996 ರನ್), ವಿರಾಟ್ ಕೊಹ್ಲಿ (781 ರನ್), ಬಾಬರ್ ಅಜಂ (735 ರನ್) ಮತ್ತು ಸಿಕಂದರ್ ರಾಝಾ (735 ರನ್) ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ನಂತರದ ಸ್ಥಾನದಲ್ಲಿದ್ದಾರೆ.

Flashback 2022: Suryakumar Yadav Is Highest Run Scorer in T20 Cricket 2022

ಮೊಹಮ್ಮದ್ ರಿಜ್ವಾನ್ ಮಾತ್ರ ಸೂರ್ಯಕುಮಾರ್ ಯಾದವ್ ರನ್ ಗಳಿಕೆಗೆ ಹತ್ತಿರುವ ಆಟಗಾರ. ಪಾಕಿಸ್ತಾನವು 2022ರಲ್ಲಿ ಮತ್ತೊಂದು ಟಿ20 ಪಂದ್ಯವನ್ನು ಆಡದ ಕಾರಣ ಸೂರ್ಯಕುಮಾರ್ ಹಿಂದೆ ಹಾಕಲು ಸಾಧ್ಯವಾಗುವುದಿಲ್ಲ.

ಸೂರ್ಯಕುಮಾರ್ ಯಾದವ್ ವೃತ್ತಿಜೀವನ
ಸೂರ್ಯಕುಮಾರ್ ಯಾದವ್ ಈವರೆಗೆ 42 ಟಿ20 ಪಂದ್ಯಗಳನ್ನಾಡಿದ್ದು, 40 ಇನ್ನಿಂಗ್ಸ್‌ನಲ್ಲಿ 1408 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕಗಳು ಸೇರಿದ್ದು, 117 ಅತ್ಯಧಿಕ ಸ್ಕೋರ್ ಆಗಿದೆ. ಇದೇ ವೇಳೆ 12 ಅರ್ಧಶತಕ ಗಳಿಸಿದ್ದಾರೆ.

ಇನ್ನು ಸೂರ್ಯಕುಮಾರ್ 16 ಏಕದಿನ ಪಂದ್ಯಗಳ 15 ಇನ್ನಿಂಗ್ಸ್‌ಗಳಲ್ಲಿ 384 ರನ್ ಬಾರಿಸಿದ್ದಾರೆ. 64 ಅತ್ಯಧಿಕ ಸ್ಕೋರ್ ಆಗಿದ್ದು, 2 ಅರ್ಧಶತಕ ಗಳಿಸಿದ್ದಾರೆ.

123 ಐಪಿಎಲ್ ಪಂದ್ಯಗಳ 108 ಇನ್ನಿಂಗ್ಸ್‌ಗಳಲ್ಲಿ 2644 ರನ್ ಗಳಿಸಿದ್ದಾರೆ. 82 ಅತ್ಯಧಿಕ ಸ್ಕೋರ್‌ನೊಂದಿಗೆ 16 ಅರ್ಧಶತಕ ಬಾರಿಸಿದ್ದಾರೆ.

Story first published: Tuesday, December 13, 2022, 14:44 [IST]
Other articles published on Dec 13, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+