
ಶ್ರೇಯಸ್ ಅಯ್ಯರ್- 1489 ರನ್
ಇದೀಗ ಟೆಸ್ಟ್ ತಂಡದಲ್ಲಿಯೂ ನಿಯಮಿತವಾಗಿ ಆಯ್ಕೆಯಾಗುತ್ತಿರುವ ಶ್ರೇಯಸ್ ಅಯ್ಯರ್, 2022ರಲ್ಲಿ ಗಳಿಸಿರುವ 1489 ರನ್‌ಗಳಲ್ಲಿ 55ರ ಸರಾಸರಿಯಲ್ಲಿ ಅರ್ಧದಷ್ಟು 724 ರನ್‌ಗಳು ಏಕದಿನ ಪಂದ್ಯಗಳಲ್ಲಿ ಬಂದಿವೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಶತಕ ಸೇರಿದಂತೆ 6 ಅರ್ಧಶತಕಗಳೊಂದಿಗೆ ಳನ್ನು ಬಾರಿಸಿದ್ದಾರೆ.
ಈ ವರ್ಷದಲ್ಲಿ ಶ್ರೇಯಸ್ ಅಯ್ಯರ್ ಆಡಿದ 17 ಟಿ20 ಪಂದ್ಯಗಳಲ್ಲಿ 35ರ ಸರಾಸರಿಯಲ್ಲಿ 463 ರನ್ ಗಳಿಸಿದ್ದಾರೆ ಮತ್ತು 141 ಸ್ಟ್ರೈಕ್ ರೇಟ್ 4 ಅರ್ಧಶತಕಗಳನ್ನು ದಾಖಲಿಸಿದರು ಮತ್ತು 6 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 60ರ ಸರಾಸರಿಯಲ್ಲಿ ಶ್ರೇಯಸ್ ಅಯ್ಯರ್ 3 ಅರ್ಧಶತಕಗಳನ್ನು ಬಾರಿಸಿದರು.

ಸೂರ್ಯಕುಮಾರ್ ಯಾದವ್- 1424 ರನ್
ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರನ್ನು ಭಾರತೀಯ ಅಭಿಮಾನಿಗಳು SKY ಎಂದು ಪ್ರೀತಿಯಿಂದ ಕರೆಯುತ್ತಾರೆ. ಭಾರತ ತಂಡಕ್ಕಾಗಿ ಈ ವರ್ಷ ಮೂರು ಸ್ವರೂಪದ ಕ್ರಿಕೆಟ್‌ನಲ್ಲಿ 43 ಇನ್ನಿಂಗ್ಸ್‌ಗಳಿಂದ ಒಟ್ಟು 1424 ರನ್ ಗಳಿಸಿದ್ದಾರೆ.
ಈ ಮೂಲಕ 2022ರಲ್ಲಿ ಭಾರತದ ಪರ ಎಲ್ಲ ಸ್ವರೂಪದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ- 1304 ರನ್
ಭಾರತದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 2022ರಲ್ಲಿ ಆಡಿದ 39 ಇನ್ನಿಂಗ್ಸ್‌ಗಳಿಂದ 1304 ರನ್‌ಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಅವರು ಈ ವರ್ಷ ಅಜೇಯ 122 ರನ್ ಗಳಿಸಿರುವುದು ಈ ವರ್ಷದ ಅತ್ಯಧಿಕ ಸ್ಕೋರ್ ಆಗಿದೆ.
ಈ ಮೂಲಕ ವಿರಾಟ್ ಕೊಹ್ಲಿ 2022ರಲ್ಲಿ ಭಾರತದ ಪರ ಎಲ್ಲ ಸ್ವರೂಪದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ರಿಷಭ್ ಪಂತ್- 1278 ರನ್
ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ 2022ರಲ್ಲಿ ಆಡಿದ 41 ಇನ್ನಿಂಗ್ಸ್‌ಗಳಲ್ಲಿ 1278 ರನ್ ಗಳಿಸಿದ್ದಾರೆ. ಈ ವೇಳೆ 146 ರನ್ ಅತ್ಯಧಿಕ ಸ್ಕೋರ್ ಗಳಿಸಿದ್ದಾರೆ.
ಈ ಮೂಲಕ ರಿಷಭ್ ಪಂತ್ 2022ರಲ್ಲಿ ಭಾರತದ ಪರ ಎಲ್ಲ ಸ್ವರೂಪದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ರೋಹಿತ್ ಶರ್ಮಾ- 995 ರನ್
ಭಾರತ ತಂಡದ ನಾಯಕ ರೋಹಿತ್ ಶರ್ಮಾ 2022ರಲ್ಲಿ ಆಡಿದ 40 ಇನ್ನಿಂಗ್ಸ್‌ಗಳಲ್ಲಿ 995 ರನ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಯಾವುದೇ ಶತಕ ಗಳಿಸದ ರೋಹಿತ್ ಶರ್ಮಾ ಅಜೇಯ 76 ರನ್ ಅತ್ಯಧಿಕವಾಗಿದೆ.
ಈ ಮೂಲಕ ರೋಹಿತ್ ಶರ್ಮಾ 2022ರಲ್ಲಿ ಭಾರತದ ಪರ ಎಲ್ಲ ಸ್ವರೂಪದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಗಾಯದ ಸಮಸ್ಯೆಯಿಂದ ಸದ್ಯ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಆಡದಿರುವ ರೋಹಿತ್ ಶರ್ಮಾ, ಎರಡನೇ ಪಂದ್ಯದ ವೇಳೆ ತಂಡಕ್ಕೆ ಮರಳುವ ಸಾಧ್ಯತೆ ಇದೆ.


Click it and Unblock the Notifications












