ಕನ್ನಡ ಕಾಮೆಂಟರಿ ಕೊಡಲು ಬರ್ತಿದ್ದಾರೆ ಅನಿಲ್ ಕುಂಬ್ಳೆ

ಬೆಂಗಳೂರು, ಮೇ 24: ಐಪಿಎಲ್ ಆವೃತ್ತಿಯ ಮನರಂಜನೆ ಕೊನೆಯ ಹಂತಕ್ಕೆ ತಲುಪಿದೆ. ಇನ್ನೆರಡು ಪಂದ್ಯಗಳು ಮುಗಿದರೆ ಒಂದು ಸುದೀರ್ಘ ಕ್ರಿಕೆಟ್ ಹಬ್ಬ ಅಂತ್ಯಗೊಂಡಂತಾಗಲಿದೆ.
ಈ ಬಾರಿಯ ಐಪಿಎಲ್, ಟಿವಿ ಮುಂದೆ ಕುಳಿತ ಅಭಿಮಾನಿಗಳಿಗೆ ಹೊಸ ಅನುಭವ ನೀಡಿದೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಸೀಮಿತವಾಗಿದ್ದ ವೀಕ್ಷಕ ವಿವರಣೆ, ಪ್ರಾದೇಶಿಕ ಭಾಷೆಗಳಲ್ಲಿಯೂ ಪ್ರಸಾರವಾಗಿದೆ. ಕನ್ನಡದಲ್ಲಿಯೂ ವೀಕ್ಷಕ ವಿವರಣೆ ಕೇಳಿ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾಷೆಯ ಪ್ರೀತಿಯೂ ಹೆಚ್ಚಿದೆ.
ಕ್ರಿಕೆಟ್ ಪ್ರಿಯರಿಗೆ ಮತ್ತಷ್ಟು ಖುಷಿ ನೀಡಲು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಮುಂದಾಗಿದ್ದಾರೆ. ಕ್ರಿಕೆಟಿಗ ಕುಂಬ್ಳೆ, ಕನ್ನಡದ ಅಭಿಮಾನಿಗಳ ಎದುರು ಕಾಣಿಸಿಕೊಳ್ಳುತ್ತಿದ್ದಾರೆ.
ಮೇ 25ರಂದು ನಡೆಯಲಿರುವ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಣ ಪಂದ್ಯದಲ್ಲಿ ನಮ್ಮ ಕನ್ನಡದ ಹುಡುಗರಿಗೆ ಫನ್ ಚಾಲೆಂಜ್ ಕೊಡಲು ಬರುತ್ತಿರುವುದಾಗಿ ಕುಂಬ್ಳೆ ಹೇಳಿದ್ದಾರೆ.
ಮಾತ್ರವಲ್ಲ, ಕನ್ನಡದಲ್ಲಿ ಕಾಮೆಂಟರಿ ಕೂಡ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications