Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಂ ಇಂಡಿಯಾದಿಂದ ಕಡೆಗಣಿಸ್ಪಲ್ಪಟ್ಟ ಸರ್ಫರಾಜ್ ಖಾನ್‌ಗೆ ಅತ್ಯುತ್ತಮ ಸಲಹೆ ನೀಡಿದ ಕನ್ನಡಿಗ ದೊಡ್ಡ ಗಣೇಶ್

ಜುಲೈ 12ರಿಂದ ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಸಿಗದ ಕಾರಣ ಸರ್ಫರಾಜ್ ಖಾನ್ ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

25 ವರ್ಷದ ಈ ಆಟಗಾರ ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ದೇಶೀಯ ಟೂರ್ನಿಯಲ್ಲಿ ಹೆಚ್ಚಿನ ರನ್ ಗಳಿಸಿದ್ದರೂ ಬಿಸಿಸಿಐ ಆಯ್ಕೆ ಸಮಿತಿಯ ಆಯ್ಕೆಗಾರರು ನಿರಂತರವಾಗಿ ನಿರ್ಲಕ್ಷಿಸಿದ್ದಾರೆ.

Former Cricketer Dodda Ganesh Gives Advice To Sarfaraz Khan Who Was Ignored By Team India

ಮುಂಬೈ ಬ್ಯಾಟರ್ ಸರ್ಫರಾಜ್ ಖಾನ್ ಅವರನ್ನು ಮೊದಲು ಡಿಸೆಂಬರ್ 2022ರಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಮತ್ತು ನಂತರ ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2023ರ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿಯೂ ಕಡೆಗಣಿಸಲಾಯಿತು.

ತಮ್ಮ ಕಡಗಣನೆಗೆ ಯುವ ಆಟಗಾರ ಸರ್ಫರಾಜ್ ಖಾನ್ ತನ್ನ ಹತಾಶೆಯನ್ನು ವ್ಯಕ್ತಪಡಿಸಲು ಇನ್‌ಸ್ಟಾಗ್ರಾಮ್‌ನಲ್ಲಿ 2022-23ರ ರಣಜಿ ಟ್ರೋಫಿ ಋತುವಿನಿಂದ ಮೂರು ಶತಕಗಳನ್ನು ಗಳಿಸಿದ ಹೈಲೈಟ್ಸ್ ವಿಡಿಯೋವನ್ನು ಹಂಚಿಕೊಂಡಿದ್ದರು.

ಸರ್ಫರಾಜ್ ಖಾನ್ ಅವರ ಇನ್‌ಸ್ಟಾಗ್ರಾಮ್ ಸ್ಟೋರಿ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕನ್ನಡಿಗ ದೊಡ್ಡ ಗಣೇಶ್ ಅವರ ಗಮನ ಸೆಳೆದಿದ್ದು, ನಿಮ್ಮ ಹತಾಶೆಯನ್ನು ದೊಡ್ಡದಾಗಿಸಲು ಬಿಡಬೇಡಿ ಎಂದು ಸಲಹೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್, "ಯುವಕರಿಗೆ ನನ್ನ ಏಕೈಕ ಸಲಹೆ ಎಂದರೆ, ನಿಮ್ಮನ್ನು ನಿರ್ಲಕ್ಷಿಸಿದಾಗ ಹತಾಶೆಯನ್ನು ನಿಮ್ಮಿಂದ ದೊಡ್ಡದಾಗಿಸಲು ದಯವಿಟ್ಟು ಅನುಮತಿಸಬೇಡಿ. ಸೋಷಿಯಲ್ ಮೀಡಿಯಾ ಎರಡು ಅಲುಗಿನ ಕತ್ತಿ ಇದ್ದಂತೆ. ಅದನ್ನು ಬುದ್ಧಿವಂತಿಕೆಯಿಂದ ಬಳಸಿ," ಎಂದು ಬರೆದುಕೊಂಡಿದ್ದಾರೆ.

ಡಾನ್ ಬ್ರಾಡ್ಮನ್ ನಂತರ 2ನೇ ಅತ್ಯುತ್ತಮ ಪ್ರಥಮ ದರ್ಜೆ ಸರಾಸರಿ ಹೊಂದಿರುವ ಸರ್ಫರಾಜ್
ಯುವ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಕಳೆದ ಮೂರು ರಣಜಿ ಟೂರ್ನಿಗಳಲ್ಲಿ 2566 ರನ್‌ಗಳನ್ನು ಬಾರಿಸಿ ಅದ್ಭುತ ಫಾರ್ಮ್‌ನಲ್ಲಿದ್ದೇನೆ ಎಂದು ಸಾಬೀತುಪಡಿಸಿದ್ದಾರೆ. 2019-20 ಋತುವಿನಲ್ಲಿ 154.66 ಸರಾಸರಿಯೊಂದಿಗೆ 928 ರನ್ ಗಳಿಸಿ, ಮುಂಬೈ ತಂಡದ ಪ್ರಮುಖ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದರು ಮತ್ತು ಒಟ್ಟಾರೆಯಾಗಿ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು.

2021-22ರ ರಣಜಿ ಋತುವಿನಲ್ಲಿ ಸರ್ಫರಾಜ್ ಖಾನ್ 122.75 ಸರಾಸರಿಯಲ್ಲಿ 982 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಸೀಸನ್ ಮುಗಿಸಿದರು.

2022-23ರ ಋತುವಿನಲ್ಲಿ 92.66ರ ಸರಾಸರಿಯಲ್ಲಿ 656 ರನ್ ಗಳಿಸಿದ ಸರ್ಫರಾಜ್ ಖಾನ್ ಮತ್ತೊಂದು ಗಮನಾರ್ಹ ಋತುವನ್ನು ಹೊಂದಿದ್ದರು. ಸರ್ಫರಾಜ್ ಖಾನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 79.65ರ ಸರಾಸರಿ ಹೊಂದಿದ್ದಾರೆ, ಇದು 37 ಪಂದ್ಯಗಳಲ್ಲಿ ಬ್ಯಾಟಿಂಗ್ ಶ್ರೇಷ್ಠ ಡಾನ್ ಬ್ರಾಡ್‌ಮನ್ (ಕನಿಷ್ಠ 50 ಇನ್ನಿಂಗ್ಸ್) ನಂತರ ಎರಡನೇ ಸ್ಥಾನದಲ್ಲಿದ್ದಾರೆ.

ಎಲ್ಲರ ಗಮನ ಸೆಳೆಯುವ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಸರ್ಫರಾಜ್ ಖಾನ್ ಅವರನ್ನು ಕಡಗಣಿಸಲಾಗಿದೆ. ರುತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆ.

Story first published: Monday, June 26, 2023, 22:42 [IST]
Other articles published on Jun 26, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+