ಶೋಯಿಬ್ ಅಖ್ತರ್ ಗೆ ಶಾದಿ ಮುಬಾರಕ್ !
ಕರಾಚಿ, ಜೂ.26: ರಾವಲ್ಪಿಂಡಿ ಎಕ್ಸ್ ಪ್ರೆಸ್ ಎಂದೇ ಖ್ಯಾತಿ ಗಳಿಸಿರುವ ಪಾಕಿಸ್ತಾನ ಮಾಜಿ ಕ್ರಿಕೆಟರ್ ಶೋಯಿಬ್ ಅಖ್ತರ್ ಅವರು ಅಧಿಕೃತವಾಗಿ ಮದುವೆಯಾಗಿರುವ ಸುದ್ದಿ ಬಂದಿದೆ. ಹರಿಪುರದಲ್ಲಿ 38 ವರ್ಷದ ಪ್ರಾಯದ ಮಾಜಿ ಕ್ರಿಕೆಟಿಗ ಅಖ್ತರ್, 20 ವರ್ಷ ವಯಸ್ಸಿನ ಯುವತಿಯನ್ನು ವರಿಸಿದ್ದಾರೆ.
'ತಮಗಿಂತಲೂ ಚಿಕ್ಕ ವಯಸ್ಸಿನ ಅದರಲ್ಲಿಯೂ 17 ವರ್ಷ ಅಪ್ರಾಪ್ತೆಯನ್ನು ಮದುವೆಯಾಗುತ್ತಿದ್ದಾರೆ' ಎಂಬ ಸುದ್ದಿಯ ಬಗ್ಗೆ ಸ್ವತಃ ಅಖ್ತರ್ ಅವರೇ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ್ದರು. ಆದರೆ, ವಿವಾದಕ್ಕೆ ಕಾರಣವಾಗಿದ್ದ ಯುವತಿ ರುಬಾಬ್ ಳನ್ನೆ ಅಖ್ತರ್ ಜೂ.25ರಂದು ವರಿಸಿದ್ದಾರೆ ಎಂದು ಪಾಕಿಸ್ತಾನದ ದುನಿಯಾ ಟಿವಿ ಪ್ರಸಾರ ಮಾಡಿದೆ.
ಹರಿಪುರದಲ್ಲಿ ವಾಸವಾಗಿರುವ ಉದ್ಯಮಿ ಮುಷ್ತಾಖ್ ಖಾನ್ ಅವರ ಪುತ್ರಿಯನ್ನು ಶೋಯಿಬ್ ವರಿಸಲಿದ್ದಾರೆ. ಜೂನ್ 3ನೇ ವಾರದಲ್ಲಿ ಮದುವೆ ಸಮಾರಂಭ ನಡೆಯಲಿದೆ. ಜೂನ್ 19ರಂದು ಮೆಹಂದಿ ಕಾರ್ಯಕ್ರಮ, ಜೂನ್ 20ರಂದು ರುಖ್ಸಾತಿ ಕಾರ್ಯಕ್ರಮ ಮತ್ತು ರಾವಲ್ಪಿಂಡಿಯ ಹರಿಪುರದಲ್ಲಿರುವ ಬಿಲಾವಲ್ ಹಾಲ್ ನಲ್ಲಿ ಜೂನ್ 22ರಂದು ವಲೀಮಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗಿತ್ತು. [ಈ ಬಗ್ಗೆ ಶೋಯಿಬ್ ಸ್ಪಷ್ಟನೆ ಓದಿ]
ಶೋಯಿಬ್ ಅಖ್ತರ್ ಗೆ ಶಾದಿ ಮುಬಾರಕ್ ಎಂದು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ವಿಶ್ ಮಾಡಿದ್ದಾರೆ. ಆದರೆ, ಕೆಲವರು ವಧುವಿನ ವಯಸ್ಸಿನ ಬಗ್ಗೆ ಇನ್ನೂ ಅನುಮಾನ ವ್ಯಕ್ತಪಡಿಸಿದ್ದಾರೆ. ಅದೇ ಹುಡುಗಿಯಾದರೆ ಅಪ್ರಾಪ್ತೆ ವಯಸ್ಸು 20 ಹೇಗೆ ಆಯ್ತು ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಟ್ವೀಟ್ ಸರಣಿ ಮುಂದಿದೆ ಓದಿ...

ರಾವಲ್ಪಿಂಡಿ ಎಕ್ಸ್ ಪ್ರೆಸ್ ಮದ್ವೆಯಾಗಿದ್ದಾರೆ
ರಾವಲ್ಪಿಂಡಿ ಎಕ್ಸ್ ಪ್ರೆಸ್ ಎಂದೇ ಖ್ಯಾತಿ ಗಳಿಸಿರುವ ಪಾಕಿಸ್ತಾನ ಮಾಜಿ ಕ್ರಿಕೆಟರ್ ಶೋಯೆಬ್ ಅಖ್ತರ್ ಅವರು ಅಧಿಕೃತವಾಗಿ ಮದುವೆಯಾಗಿರುವ ಸುದ್ದಿ ಬಂದಿದೆ. ಹರಿಪುರದಲ್ಲಿ 38 ವರ್ಷದ ಪ್ರಾಯದ ಮಾಜಿ ಕ್ರಿಕೆಟಿಗ ಅಖ್ತರ್, 20 ವರ್ಷ ವಯಸ್ಸಿನ ಯುವತಿ ರುಬಾಬ್ ರನ್ನು ವರಿಸಿದ್ದಾರೆ.

ಜೂನ್ .7 : ಟ್ವಿಟ್ಟರ್ ನಲ್ಲಿ ಶೋಯಿಬ್ ಸಮರ್ಥನೆ
ತಮಗಿಂತಲೂ ಚಿಕ್ಕ ವಯಸ್ಸಿನ ಅದರಲ್ಲಿಯೂ 17 ವರ್ಷ ಅಪ್ರಾಪ್ತೆಯನ್ನು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯ ಬಗ್ಗೆ ಸ್ವತಃ ಅಖ್ತರ್ ಅವರೇ ಜೂನ್.7ರಂದು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ್ದರು.
ಚಿಕ್ಕ ವಯಸ್ಸಿನ ವಧು ವರಿಸುವುದರಲ್ಲಿ ತಪ್ಪೇನಿಲ್ಲ
ಚಿಕ್ಕ ವಯಸ್ಸಿನ ವಧು ವರಿಸುವುದರಲ್ಲಿ ತಪ್ಪೇನಿಲ್ಲ ಎಂದು ಅಭಿಮಾನಿಗಳಿಂದ ಸಮರ್ಥನೆ
ಶೋಯಿಬ್ ನಿಜವಾಗ್ಲೂ ಅಪ್ರಾಪ್ತೆಯನ್ನು ವರಿಸಿದ್ರಾ?
ಶೋಯಿಬ್ ನಿಜವಾಗ್ಲೂ ಅಪ್ರಾಪ್ತೆಯನ್ನು ವರಿಸಿದ್ರಾ?
ಯಾಕೆ ಈ ವಿಷ್ಯಕ್ಕೆ ಇಷ್ಟು ಮಹತ್ವ
ಯಾಕೆ ಈ ವಿಷ್ಯಕ್ಕೆ ಇಷ್ಟು ಮಹತ್ವ ನೀಡುತ್ತಿದ್ದೀರಿ
ರುಬಾಬ್ ಮದುವೆ ಸುದ್ದಿ ತಳ್ಳಿ ಹಾಕಿದ್ದ
ರುಬಾಬ್ ಮದುವೆ ಸುದ್ದಿ ತಳ್ಳಿ ಹಾಕಿದ್ದ ಶೋಯಿಬ್ ಅಖ್ತರ್, 17 ವರ್ಷದ ವಧುವಲ್ಲ ಎಂದಿದ್ದರು. ಅದರೆ, ಇದೇ ವಧುವಿನ ವಯಸ್ಸು 20 ವರ್ಷ ಎಂದು ಹೇಳಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications