Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಂ ಇಂಡಿಯಾ ಭೇಟಿ ಮಾಡಲಿರುವ ಸೌರವ್ ಗಂಗೂಲಿ

ಮುಂಬೈ, ಜೂನ್ 2: ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಹಾಗೂ ಹಾಲಿ ನಾಯಕ ವಿರಾಟ್ ಕೊಹ್ಲಿ ನಡುವೆ ಭಿನ್ನಾಭಿಪ್ರಾಯಗಳಿರುವ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಬ್ಬ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರು ತಂಡವನ್ನು ಭೇಟಿ ಮಾಡಲಿದ್ದಾರೆ.

ಸದ್ಯಕ್ಕೀಗ, ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಲಂಡನ್ ನಲ್ಲಿದೆ. ಹಾಗಾಗಿ, ಲಂಡನ್ ಗೇ ಪ್ರಯಾಣ ಬೆಳೆಸಲಿರುವ ಸೌರವ್, ಅಲ್ಲಿ ಟೀಂ ಇಂಡಿಯಾ ಉಳಿದುಕೊಂಡಿರುವ ಹೋಟೆಲ್ ನಲ್ಲೇ ತಂಡದ ಪ್ರತಿಯೊಬ್ಬ ಆಟಗಾರನನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ.[ರಾಹುಲ್ ದ್ರಾವಿಡ್ ವಿರುದ್ಧ ಗುಹಾರಿಂದ ಪರೋಕ್ಷ ದಾಳಿ]

Former Cricketer Sourav Ganguly plans to meet Team India

ಟೀಂ ಇಂಡಿಯಾಕ್ಕೆ ಹೊಸ ಕೋಚ್ ಆಯ್ಕೆ ಹಿನ್ನೆಲೆಯಲ್ಲಿ ಬಿಸಿಸಿಐ ಈಗಾಗಲೇ ಅರ್ಜಿಗಳನ್ನು ಕರೆದಿದೆ. ಆ ಅರ್ಜಿಗಳನ್ನು ಪರಿಶೀಲಿಸಿ, ಸೂಕ್ತ ವ್ಯಕ್ತಿಯನ್ನು ತಂಡದ ಕೋಚ್ ಆಗಿ ನೇಮಿಸುವ ಜವಾಬ್ದಾರಿ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಮೇಲಿದೆ.[ಕ್ರಿಕೆಟ್ ಸಮಿತಿಯಲ್ಲಿ ಜಾವಗಲ್ ಸಮಿತಿಯಲ್ಲಿರಬೇಕು : ಗುಹಾ]

ಈ ಹಿನ್ನೆಲೆಯಲ್ಲಿ, ಸೌರವ್ ಗಂಗೂಲಿ ಅವರು, ತಂಡವನ್ನು ಪ್ರತ್ಯೇಕವಾಗಿ ಭೇಟಿಯಾಗಲಿದ್ದಾರೆಂದು ಹೇಳಲಾಗಿದೆ. ಅಲ್ಲಿ ಆಟಗಾರರಿಂದ ಪಡೆಯುವ ಫೀಡ್ ಬ್ಯಾಕ್, ಮುಂದಿನ ಕೋಚ್ ಆಯ್ಕೆಗೆ ಸಹಕಾರಿಯಾಗುವುದು ಎಂದು ಹೇಳಲಾಗಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+