Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಾಹುಲ್ ದ್ರಾವಿಡ್ ವಿರುದ್ಧ ಗುಹಾರಿಂದ ಪರೋಕ್ಷ ದಾಳಿ

ಬೆಂಗಳೂರು, ಜೂನ್ 02 : ಕ್ರಿಕೆಟ್ ದಿಗ್ಗಜರಾದ ಎಂಎಸ್ ಧೋನಿ, ಸುನಿಲ್ ಗವಾಸ್ಕರ್ ಅವರ ವಿರುದ್ಧ ಕಿಡಿಕಾರಿರುವ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರು ಈಗ ರಾಹುಲ್ ದ್ರಾವಿಡ್ ವಿರುದ್ಧ ಪರೋಕ್ಷ ದಾಳಿ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಹುಳುಕುಗಳನ್ನು ಎಳೆಎಳೆಯಾಗಿ ಗುಹಾ ಅವರು ಹೊರ ಹಾಕುತ್ತಿದ್ದಾರೆ.

ಬಿಸಿಸಿಐನ ಆಡಳಿತ ಸಮಿತಿ(ಸಿಐಎ)ಗೆ ಜೂನ್ 01ರಂದು ರಾಜೀನಾಮೆ ನೀಡಿ ಹೊರ ಬಂದಿರುವ ಗುಹಾ ಅವರು ಬಿಸಿಸಿಐ ಬೆಳೆಸಿರುವ 'ಸೂಪರ್ ಸ್ಟಾರ್' ಸಂಸ್ಕೃತಿಯ ವಿರುದ್ಧ ಕಿಡಿ ಕಾರಿದ್ದಾರೆ.[ಧೋನಿ ಗವಾಸ್ಕರ್ ಜನ್ಮ ಜಾಲಾಡಿದ ರಾಮಚಂದ್ರ ಗುಹಾ]

Ramachandra Guha launches veiled attack on Rahul Dravid over IPL contract

ಎಂಎಸ್ ಧೋನಿ, ಗವಾಸ್ಕರ್ ವಿರುದ್ಧ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿರುವ ಗುಹಾ ಅವರು ಬಿಸಿಸಿಐ ಆಡಳಿತ ಮಂಡಳಿಯಿಂದ ಹೊರ ನಡೆದಿರುವ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರು ಕ್ರಿಕೆಟ್ ಸಮಿತಿ(ಸಿಒಎ) ಯಲ್ಲಿ ಕರ್ನಾಟಕದ ವೇಗಿ, ಮಾಜಿ ಕ್ರಿಕೆಟರ್ ಜಾವಗಲ್ ಶ್ರೀನಾಥ್ ಇರಬೇಕು ಎಂದಿದ್ದಾರೆ.[ಬಿಸಿಸಿಐ ಆಡಳಿತ ಸಮಿತಿಗೆ ರಾಮಚಂದ್ರ ಗುಹಾ ರಾಜೀನಾಮೆ!]

ಒಬ್ಬರಿಗೆ ಎರಡು ಹುದ್ದೆ ಏಕೆ? : ರಾಷ್ಟ್ರೀಯ ತಂಡದ ಕೋಚ್ ಆಗಿರುವವರಿಗೆ ಮತ್ತೊಂದು ಹುದ್ದೆಯನ್ನು ನೀಡುವುದೇಕೆ? ಎಂದು ಬಿಸಿಸಿಐನ ನಿಯಾಮಾವಳಿಯನ್ನು ಪ್ರಶ್ನಿಸಿದ್ದಾರೆ. ಈ ಮೂಲಕ ಅಂಡರ್ 19 ತಂಡ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ರಾಹುಲ್ ದ್ರಾವಿಡ್ ಅವರು ಇತ್ತೀಚೆಗೆ ಮುಕ್ತಾಯವಾಅ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)10 ರಲ್ಲಿ ಡೆಲ್ಲಿ ಡೇರ್ ಡೆವಿಲ್ ಫ್ರಾಂಚೈಸಿಯ ಮುಖ್ಯ ಕೋಚ್/ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಇಂಡಿಯಾ 'ಎ' ಹಾಗೂ ಅಂಡರ್ 19 ತಂಡಗಳ ಹಾಲಿ ಕೋಚ್ ಕೂಡಾ ಆಗಿದ್ದಾರೆ. ಗುತ್ತಿಗೆಯಲ್ಲಿದ್ದು ಕೂಡಾ ಮತ್ತೊಂದು ಹುದ್ದೆಯನ್ನು ನಿಭಾಯಿಸಲು ಬಿಸಿಸಿಐ ಅನುಮತಿ ನೀಡಿದ್ದಾದರೂ ಹೇಗೆ? ಎಂದು ಕೇಳಿದ್ದಾರೆ.[ಕ್ರಿಕೆಟ್ ಸಮಿತಿಯಲ್ಲಿ ಜಾವಗಲ್ ಸಮಿತಿಯಲ್ಲಿರಬೇಕು : ಗುಹಾ]

ಈ ಮೂಲಕ ಕೆಲ ಆಟಗಾರರ ಸೂಪರ್ ಸ್ಟಾರ್ ನಡವಳಿಕೆ ಹಾಗೂ ಕೆಲವರ ಲಾಭದಾಯಕ ಹುದ್ದೆಗಳನ್ನು ನೋಡಿಯೂ ಸುಮ್ಮನಿರುವ ಬಿಸಿಸಿಐಗೆ ಚಾಟಿ ಬೀಸಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+