'ಬೇರೆ ಯಾರಾದರೂ ಔಟ್ ಆಫ್ ಫಾರ್ಮ್ ಆಟಗಾರನಾಗಿದ್ದರೆ...': ಕೊಹ್ಲಿ ಬಗ್ಗೆ ಸೈಯದ್ ಕಿರ್ಮಾನಿ ಮಾತು

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳೆದ ಎರಡೂವರೆ ವರ್ಷಗಳಿಂದ ಶತಕ ಗಳಿಸದೆ ಕಳಪೆ ಫಾರ್ಮ್ ಮುಂದುವರೆಸಿರುವುದು ಪ್ರಸ್ತುತ ಭಾರತೀಯ ಕ್ರಿಕೆಟ್‌ನಲ್ಲಿ ಹೆಚ್ಚು ಚರ್ಚಿತ ವಿಷಯಗಳಲ್ಲಿ ಒಂದಾಗಿದೆ.
ವಿರಾಟ್ ಕೊಹ್ಲಿ ಕಳೆದ ಹಲವು ಪಂದ್ಯಗಳಲ್ಲಿ ಕೆಟ್ಟ ರೀತಿಯಲ್ಲಿ ಔಟಾಗುತ್ತಿದ್ದಾರೆ. ಇದರಿಂದ ವಿರಾಟ್ ಕೊಹ್ಲಿ ಅಭಿಮಾನಿಗಳೂ ಸಹ ಬೇಸರಗೊಂಡಿದ್ದು, ಇದೇ ವೇಳೆ ಹಲವು ಮಾಜಿ ಆಟಗಾರರು ಕೊಹ್ಲಿ ಬೆಂಬಲಕ್ಕೆ ನಿಂತಿದ್ದರೆ, ಕೆಲವರು ಕೊಹ್ಲಿಗೆ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ.
IND vs WI: ಶಿಖರ್ ಧವನ್ ಜೊತೆಗೂಡಿ ಈತ ODI ಕ್ರಿಕೆಟ್‌ಗೆ ಪದಾರ್ಪಣೆ ಮಾಡಬೇಕು: ವಾಸಿಂ ಜಾಫರ್
ಕೆಲವು ಮಾಜಿ ಭಾರತೀಯ ಆಟಗಾರರೇ ಭಾರತೀಯ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿಯ ಸ್ಥಾನವನ್ನು ಪ್ರಶ್ನಿಸಲು ಪ್ರಾರಂಭಿಸಿದರೆ, ಇತರರು ಅವರಿಗೆ ನೀಡಲಾದ ಅವಕಾಶವನ್ನು ಬೆಂಬಲಿಸಿದ್ದಾರೆ. ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ವಿರಾಟ್ ಕೊಹ್ಲಿ ಏಕದಿನ ಮತ್ತು ಟಿ20 ತಂಡದ ಭಾಗವಾಗಿಲ್ಲ. ಪ್ರಸ್ತುತ ಫಾರ್ಮ್‌ನ ಆಧಾರದ ಮೇಲೆ 2022ರ ಟಿ20 ವಿಶ್ವಕಪ್‌ಗೆ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಬೇಕೇ ಅಥವಾ ಬೇಡವೇ ಎಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ.

ವಿರಾಟ್ ಕೊಹ್ಲಿ ಒಬ್ಬ ರೋಲ್ ಮಾಡೆಲ್
ಇದೀಗ ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಸೈಯದ್ ಕಿರ್ಮಾನಿ ದೈನಿಕ್ ಜಾಗರಣ್‌ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದು, "ವಿರಾಟ್ ಕೊಹ್ಲಿ ಒಬ್ಬ ರೋಲ್ ಮಾಡೆಲ್, ಅವರು ಅಂತಹ ಅನುಭವಿ ಆಟಗಾರರಾಗಿದ್ದಾರೆ. ಅವರು ಪ್ರತಿಯೊಂದು ಅಂಶದಿಂದ ಅವರು ರೋಲ್ ಮಾಡೆಲ್ ಆಗಿದ್ದಾರೆ. ಕೊಹ್ಲಿ ಟಿ20 ತಂಡದ ಭಾಗವಾಗಿರಬೇಕು".
"ವಿರಾಟ್ ಕೊಹ್ಲಿ ಖಂಡಿತವಾಗಿಯೂ ಟಿ20 ತಂಡದ ಭಾಗವಾಗಿರಬೇಕು. ಒಂದು ಉತ್ತಮ ಆ ದಿನ ಅವರು ಫಾರ್ಮ್‌ಗೆ ಮರಳುತ್ತಾರೆ ಮತ್ತು ಆಟ ಬದಲಾಯಿಸುವವರಾಗುತ್ತಾರೆ. ಅಂತಹ ಅನುಭವಿ ಆಟಗಾರರು ತಂಡದ ಭಾಗವಾಗಿರಬೇಕು ಇದರಿಂದ ಕಿರಿಯ ಆಟಗಾರರು ಅವರಿಂದ ಕಲಿಯುತ್ತಾರೆ," ಎಂದು 1983ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಸೈಯದ್ ಕಿರ್ಮಾನಿ ಹೇಳಿದರು.

ಟಿ20 ವಿಶ್ವಕಪ್ ತಂಡದಲ್ಲಿ 50-50 ಅನುಪಾತವಿರಬೇಕು
ಅನುಭವಿ ಹಾಗೂ ಯುವ ಆಟಗಾರರಿಬ್ಬರೂ ಇರುವಂತೆ ತಂಡದ ಸಮತೋಲನದಿಂದ ಇರಬೇಕು. ಟಿ20 ವಿಶ್ವಕಪ್ ತಂಡದಲ್ಲಿ ಶೇ.50 ಹಿರಿಯರು ಮತ್ತು ಶೇ.50 ಯುವ ಆಟಗಾರರಿರಬೇಕು. ಅನುಪಾತ 50-50ರಷ್ಟಿರುವ ತಂಡದ ಆಯ್ಕೆ ನಡೆಯಬೇಕು ಎಂದು ಸೈಯದ್ ಕಿರ್ಮಾನಿ ತಿಳಿಸಿದರು.
"ಸದ್ಯ ಭಾರತೀಯ ಆಟಗಾರರ ನಡುವೆ ತೀವ್ರ ಪೈಪೋಟಿ ಇದೆ. ನೋಡಿ, ವಿರಾಟ್ ಕೊಹ್ಲಿಯ ಸ್ಥಾನದಲ್ಲಿ ಬೇರೆ ಯಾರಾದರೂ ಔಟ್ ಆಫ್ ಫಾರ್ಮ್ ಆಟಗಾರನಿದ್ದರೆ, ಅವರು ಇಷ್ಟೊತ್ತಿಗೆ ತಂಡದಿಂದ ಹೊರಗುಳಿಯುತ್ತಿದ್ದರು. ಆದರೆ ನನ್ನ ಪ್ರಕಾರ, ವಿರಾಟ್‌ನಂತಹ ಸ್ಥಾಪಿತ ಆಟಗಾರ ತಂಡದ ಭಾಗವಾಗಿರಬೇಕು," ಎಂದು ಮಾಜಿ ಭಾರತದ ಆಟಗಾರ ಹೇಳಿದ್ದಾರೆ.

ಐಪಿಎಲ್ 2022ರಲ್ಲಿ 115.98ರ ಸ್ಟ್ರೈಕ್ ರೇಟ್‌ನಲ್ಲಿ 341 ರನ್
ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಕೇವಲ 11 ಮತ್ತು 20 ರನ್ ಮಾತ್ರ ಗಳಿಸಿದರು. ಅದೇ ರೀತಿ ಟಿ20 ಪಂದ್ಯಗಳಲ್ಲಿಯೂ ತಮ್ಮ ಕೆಟ್ಟ ಪ್ರದರ್ಶನವನ್ನು ಮುಂದುವರೆಸಿದರು, ಅಲ್ಲಿ ಅವರು ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 12 ರನ್ ಗಳಿಸಲು ಸಾಧ್ಯವಾಯಿತು.
ಇದಲ್ಲದೇ ನಂತರ ನಡೆದ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಿದ ಎರಡು ಮತ್ತು ಮೂರನೇ ಪಂದ್ಯದಲ್ಲಿ ಕ್ರಮವಾಗಿ 17 ಮತ್ತು 16 ರನ್ ಗಳಿಸಿ, ನಿರಾಸೆ ಮೂಡಿಸಿದರು.
ಅಲ್ಲದೆ, ವಿರಾಟ್ ಕೊಹ್ಲಿ ಇದಕ್ಕೂ ಮುನ್ನ ನಡೆದ ಐಪಿಎಲ್ 2022ರಲ್ಲಿ ಸಾಧಾರಣ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇದರಲ್ಲಿ ಅವರು 16 ಪಂದ್ಯಗಳಲ್ಲಿ 22.73 ಸರಾಸರಿಯಲ್ಲಿ ಮತ್ತು 115.98ರ ಸ್ಟ್ರೈಕ್ ರೇಟ್‌ನಲ್ಲಿ 341 ರನ್‌ಗಳನ್ನು ಮಾತ್ರ ಗಳಿಸಿದರು. ಐಪಿಎಲ್ ಪಂದ್ಯಾವಳಿಯಲ್ಲಿ ಅವರು ಕೇವಲ ಎರಡು ಅರ್ಧಶತಕಗಳನ್ನು ಗಳಿಸಲು ಸಾಧ್ಯವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications