Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಕೊಹ್ಲಿಯಿಂದ ನನಗೆ ನೋವಾಗಿದೆ; ಹೀಗಂದಿದ್ದೇಕೆ ಮಾಜಿ ನಾಯಕ ಕಪಿಲ್ ದೇವ್‌?

Former Indian Captain Kapil Dev React On Virat Kohlis Century Drought

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯಂತಹ ಕ್ಲಾಸ್‌ ಆಟಗಾರನೊಬ್ಬ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಲ್ಲಿ ಶತಕ ಗಳಿಸದೆ ಇಷ್ಟು ದೂರ ಸಾಗುತ್ತಿರುವುದನ್ನು ನೋಡಿ ನನಗೆ ನೋವಾಗಿದೆ ಎಂದು ಭಾರತ ತಂಡದ ಮತ್ತೊಬ್ಬ ಮಾಜಿ ನಾಯಕ ಕಪಿಲ್ ದೇವ್ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಮಾಜಿ ಆಟಗಾರನಾಗಿ, ಹಾಲಿ ಆಟಗಾರನ ಪ್ರದರ್ಶನವು ಉತ್ತಮವಾಗಿರದಿದ್ದರೆ ಅದನ್ನು ಪ್ರಶ್ನಿಸುವ ಹಕ್ಕಿದೆ ಎಂದು ಕಪಿಲ್ ದೇವ್ ಹೇಳಿದರು. 2019ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಭಾರತದ ಹೊನಲು ಬೆಳಕಿನ ಟೆಸ್ಟ್‌ನಲ್ಲಿ ಅಂತರರಾಷ್ಟ್ರೀಯ ಶತಕವನ್ನು ಗಳಿಸಿದ್ದು ಬಿಟ್ಟರೆ, ಅಲ್ಲಿಂದ ಈವರೆಗೆ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಶತಕ ಬಂದಿಲ್ಲ.

ಶತಕ ಬಾರಿಸದಿರುವುದು ನನಗೆ ನೋವಾಗಿದೆ

ಶತಕ ಬಾರಿಸದಿರುವುದು ನನಗೆ ನೋವಾಗಿದೆ

"ಇಂತಹ ದೊಡ್ಡ ಆಟಗಾರ ಶತಕ ಬಾರಿಸದೆ ಇಷ್ಟು ದೀರ್ಘ ಅಂತರವನ್ನು ಹಾದುಹೋಗುವುದನ್ನು ನೋಡಲು ನನಗೆ ನೋವಾಗಿದೆ, ಅವರು ನಮಗೆ ಹೀರೋ ಇದ್ದಂತೆ. ನಾವು ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್‌ ಅಥವಾ ವೀರೇಂದ್ರ ಸೆಹ್ವಾಗ್ಗೆ ಹೋಲಿಸಬಹುದಾದ ಆಟಗಾರನಿಗೆ ನಾವು ಸಾಕ್ಷಿಯಾಗುತ್ತೇವೆ ಎಂದು ನಾವು ಎಂದಿಗೂ ಯೋಚಿಸಲಿಲ್ಲ".

"ಆದರೆ ನಂತರ ವಿರಾಟ್ ಕೊಹ್ಲಿ ನೀಡಿದ ಪ್ರದರ್ಶನಗಳು ಮತ್ತು ಶತಕಗಳು ನಮ್ಮನ್ನು ಹೋಲಿಸಲು ಒತ್ತಾಯಿಸಿದವು. ಆದರೆ ಈಗ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ಶತಕ ಗಳಿಸದಿರುವುದು, ಇದು ನನಗೆ ಮತ್ತು ನಮಗೆಲ್ಲರಿಗೂ ತೊಂದರೆಯಾಗುತ್ತಿದೆ,"ಎಂದು ಕಪಿಲ್ ದೇವ್ ಮಾತನಾಡುತ್ತಾ ಹೇಳಿದರು.

ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ

ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ

ವಿರಾಟ್ ಕೊಹ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ತಮ್ಮ ಲೀನ್ ಪ್ಯಾಚ್‌ ಅನ್ನು ಎದುರಿಸುತ್ತಿದ್ದಾರೆ. ನಾಯಕತ್ವವನ್ನು ತ್ಯಜಿಸಿದ ನಂತರ ಮಾಜಿ ನಾಯಕ ಐಪಿಎಲ್ 2022ರಲ್ಲಿ ಆಡಿದರು. ಅಲ್ಲಿ ವಿರಾಟ್ ಕೊಹ್ಲಿಯಿಂದ ಉತ್ತಮ ಪ್ರದರ್ಶನ ಹಾಗೂ ಶತಕ ನಿರೀಕ್ಷಿಸಲಾಗಿತ್ತು. ಆದಾಗ್ಯೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಲಯಕ್ಕಾಗಿ ಹೆಣಗಾಡಿದರು. 16 ಪಂದ್ಯಗಳಲ್ಲಿ 23ಕ್ಕಿಂತ ಕಡಿಮೆ ಸರಾಸರಿಯಲ್ಲಿ 341 ರನ್ ಗಳಿಸಿದರು.

ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರೊಂದಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ 5 ಪಂದ್ಯಗಳ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಜುಲೈನಲ್ಲಿ ನಡೆಯಲಿರುವ ಭಾರತದ ಇಂಗ್ಲೆಂಡ್ ಪ್ರವಾಸಕ್ಕೆ ವಿರಾಟ್ ಕೊಹ್ಲಿ ಮತ್ತೆ ಆಟಕ್ಕೆ ಮರಳಲಿದ್ದಾರೆ.

ನಿಮ್ಮ ಬ್ಯಾಟ್ ಮತ್ತು ನಿಮ್ಮ ಪ್ರದರ್ಶನವು ಮಾತನಾಡಬೇಕು

ನಿಮ್ಮ ಬ್ಯಾಟ್ ಮತ್ತು ನಿಮ್ಮ ಪ್ರದರ್ಶನವು ಮಾತನಾಡಬೇಕು

"ನಾನು ವಿರಾಟ್ ಕೊಹ್ಲಿಯಷ್ಟು ಕ್ರಿಕೆಟ್ ಆಡಿಲ್ಲ. ಕೆಲವೊಮ್ಮೆ ನೀವು ಸಾಕಷ್ಟು ಕ್ರಿಕೆಟ್ ಆಡದೇ ಇರಬಹುದು, ಆದರೆ ನೀವು ವಿಷಯಗಳನ್ನು ಲೆಕ್ಕಾಚಾರ ಮಾಡಬಹುದು. ಒಂದೋ ನಾವು ಅಂತಹ ಶ್ರೇಷ್ಠ ಆಟಗಾರರನ್ನು ಟೀಕಿಸಲು ಸಾಧ್ಯವಿಲ್ಲ ಅಥವಾ ನಾವು ಕ್ರಿಕೆಟ್ ಆಡಿದ್ದೇವೆ ಮತ್ತು ನಾವು ಆಟವನ್ನು ಅರ್ಥಮಾಡಿಕೊಂಡಿದ್ದೇವೆ ಎಂದರೆ ಮಾತನಾಡಬಹುದು''.

"ಆಟದ ಮೂಲಕ ತಮ್ಮ ಚಿಂತನೆಯ ಪ್ರಕ್ರಿಯೆಯನ್ನು ಸುಧಾರಿಸಬೇಕು, ನಮ್ಮದಲ್ಲ. ಅದು ನಿಮ್ಮ ಕಾರ್ಯಕ್ಷಮತೆ. ನಿಮ್ಮ ಬ್ಯಾಟ್‌ನಿಂದ ಸ್ಥಿರ ಹಾಗೂ ಉತ್ತಮ ಪ್ರದರ್ಶನ ಇಲ್ಲದಿದ್ದರೆ ಜನರು ಮೌನವಾಗಿರುತ್ತಾರೆ ಎಂದು ನಿರೀಕ್ಷಿಸಬೇಡಿ. ನಿಮ್ಮ ಬ್ಯಾಟ್ ಮತ್ತು ನಿಮ್ಮ ಪ್ರದರ್ಶನವು ಮಾತನಾಡಬೇಕು, ಬೇರೇನೂ ಅಲ್ಲ,'' ಎಂದು ಮಾಜಿ ಭಾರತ ಕ್ರಿಕೆಟ್ ನಾಯಕ ಕಪಿಲ್ ದೇವ್ ಹೇಳಿದ್ದಾರೆ.

Kapil Dev ನಿರೀಕ್ಷೆಯನ್ನು ಹುಸಿ ಮಾಡಿದ Virat Kohli:ನೋವಿನಲ್ಲಿ ಕಪಿಲ್ ಹೇಳಿದ್ದೇನು? | *Cricket | OneIndia
ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ಗೆ ಭಾರತ ತಂಡ

ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್(ಗಾಯಗೊಂಡಿದ್ದು ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕಿದೆ), ಶುಭ್‌ನನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ.

Story first published: Friday, June 24, 2022, 10:32 [IST]
Other articles published on Jun 24, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+