ಭಾರತ ತಂಡದ ನಿರಂತರ ಬದಲಾವಣೆ ನೀತಿಯ ಬಗ್ಗೆ ಪಾಕ್ ಮಾಜಿ ನಾಯಕ ಹೇಳಿದ್ದೇನು?

ಭಾರತ ಕ್ರಿಕೆಟ್ ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಕೆಲವು ಉತ್ತಮ ಪ್ರದರ್ಶನಗಳ ನಂತರ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ ಮತ್ತು ಬ್ಯಾಟಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರಂತಹ ಆಟಗಾರರು ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದರು.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು 2022ರ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ತನ್ನ ಪ್ರಯೋಗವನ್ನು ಸತತವಾಗಿ ಮುಂದುವರೆಸುತ್ತಲೇ ಇದೆ. ಮಧ್ಯಮ ಕ್ರಮಾಂಕದ ಆಟಗಾರ ರಿಷಭ್ ಪಂತ್ ಅವರನ್ನು ಆರಂಭಿಕರಾಗಿ ಬಳಸಿಕೊಳ್ಳುವುದು ಅಥವಾ ಆಡುವ 11ರ ಬಳಗದಲ್ಲಿ ಮೂರು-ನಾಲ್ಕು ಬದಲಾವಣೆಗಳನ್ನು ಮಾಡುವುದು ಪ್ರಯೋಗದ ಭಾಗವಾಗಿತ್ತು.

2013ರಿಂದ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ
2013ರಿಂದ ಯಾವುದೇ ಐಸಿಸಿ ಟ್ರೋಫಿಯನ್ನು ಗೆಲ್ಲದ ಬರವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಭಾರತ ತಂಡವು ಇನ್ನೂ ಟಿ20 ವಿಶ್ವಕಪ್‌ಗೆ ಸರಿಯಾದ ಸಂಯೋಜನೆಯನ್ನು ಹುಡುಕುತ್ತಿದೆ. ಆದಾಗ್ಯೂ ಭಾರತ ತಂಡದ ಹೆಚ್ಚಿನ ಪ್ರಯೋಗಗಳು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಅವರನ್ನು ಮೆಚ್ಚಿಸಲಿಲ್ಲ.
"ನೀವು ರಿಷಭ್ ಪಂತ್ ಅವರನ್ನು ಅಗ್ರ ಕ್ರಮಾಂಕದಲ್ಲಿ ಆಡಿಸುತ್ತಿದ್ದೀರಿ, ಆದರೆ ಅವರು ಅಪಾಯಕಾರಿ ಆಟಗಾರರು ಕೆಳ ಕ್ರಮಾಂಕದಲ್ಲಿ ಆಡಬೇಕು. ಪವರ್‌ಪ್ಲೇನಲ್ಲಿ ಯಾರಾದರೂ ಆಡಬಹುದು, ಅಗ್ರ ಹತ್ತರಲ್ಲಿ ಒಂಬತ್ತು ಬ್ಯಾಟರ್‌ಗಳು ಆರಂಭಿಕರಾಗಿದ್ದಾರೆ. ಮ್ಯಾಚ್ ಹೋತಾ ಹೈ ನೀಚೆ ಸೆ (ಆಟವು ಕೆಳ ಮಧ್ಯಮ ಕ್ರಮಾಂಕದಲ್ಲಿ ನಡೆಯುತ್ತದೆ)".

ರಣತಂತ್ರದ ಬದಲಾವಣೆಗಳು ತುಂಬಾ ಹೆಚ್ಚು ನಡೆಯುತ್ತಿವೆ
ಶ್ರೇಯಸ್ ಅಯ್ಯರ್ ಕೆಳ ಕ್ರಮಾಂಕದಲ್ಲಿ 28 ರನ್ ಗಳಿಸಿದರೆ, ಅಗ್ರ ಕ್ರಮಾಂಕದಲ್ಲಿ ಹೋಗಿ 30 ರನ್ ಗಳಿಸುವುದಕ್ಕಿಂತ ಇದು ತುಂಬಾ ಉತ್ತಮವಾಗಿದೆ ಎಂದು ಪಾಕಿಸ್ತಾನ ಮಾಜಿ ಆಟಗಾರ ರಶೀದ್ ಲತೀಫ್ ಯುಟ್ಯೂಬ್ ಚಾನೆಲ್ ಕ್ಯಾಟ್ ಬಿಹೈಂಡ್‌ನಲ್ಲಿ ನಡೆದ ಚರ್ಚೆಯಲ್ಲಿ ಹೇಳಿದರು.
"ಭಾರತ ತಂಡದಲ್ಲಿ ರಣತಂತ್ರದ ಬದಲಾವಣೆಗಳು ತುಂಬಾ ಹೆಚ್ಚು ನಡೆಯುತ್ತಿವೆ ಎಂದು ನಾನು ಭಾವಿಸಿದ್ದೇನೆ. ಅವರು ಸಾಗುತ್ತಿರುವ ಫಾರ್ಮ್ ಅನ್ನು ನೋಡುವಾಗ ಅವರು 3-0 ಗೆಲುವಿರಬೇಕಿತ್ತು. ನೀವು ಸರಣಿಯಲ್ಲಿ ಅಂತಹ ಹಿಡಿತವನ್ನು ಪಡೆದಾಗ, ನೀವು ಅದನ್ನು ಎಂದಿಗೂ ಬಿಡಬಾರದು. ಅದೇ ರೀತಿ ಆಸ್ಟ್ರೇಲಿಯಾದಲ್ಲಿ ಕೂಡಾ," ಎಂದು ಹೇಳಿದರು.

ನಿಮ್ಮ ತಂಡವನ್ನು ಹಾಳು ಮಾಡುತ್ತಿದ್ದೀರಿ
ಆಡುವ 11ರ ಬಳಗ ಸಂಯೋಜನೆಯಲ್ಲಿ ಭಾರತದ ನಿರಂತರ ಬದಲಾವಣೆಗಳ ಕುರಿತು ವಿಭಿನ್ನ ಪ್ರಶ್ನೆಗೆ ಉತ್ತರಿಸಿದ ರಶೀದ್ ಲತೀಫ್ ಮಾತನಾಡಿ, "ಅಪ್ನಿ ಟೀಮ್ ಖರಾಬ್ ಕರ್ ರಹೇ ಹೈ ಯೇ. ನೀವು ರೋಹಿತ್ ಶರ್ಮಾ ಅಥವಾ ಕೆಎಲ್ ರಾಹುಲ್‌ನಂತಹ ಆಟಗಾರರ ಮೇಲೆ ಜವಾಬ್ದಾರಿ ಹೇರಿದಂತೆ ಇತರರ ಮೇಲೆ ಹೇರುವುದಿಲ್ಲ".
"ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಆಧರಿಸಿ ತಂಡವನ್ನು ರಚಿಸಲಾಗಿದೆ. ಕೆಲವೊಮ್ಮೆ ಈ ಆಟಗಾರರು ಫಾರ್ಮ್‌ನಿಂದ ಹೊರಗುಳಿಯುತ್ತಾರೆ. ಈ ಆಟಗಾರರು ಆಫ್ ಫಾರ್ಮ್‌ನಲ್ಲಿದ್ದಾಗ ನೀವು ಇತರರಿಗೆ ಜವಾಬ್ದಾರಿಯನ್ನು ನೀಡಬೇಕಾಗುತ್ತದೆ. ಈಗ ಯಾರೂ ಆ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಈಗ ತಂಡ ಸೋತರೆ ಆ ಜವಾಬ್ದಾರಿಯನ್ನು ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಮೇಲೆ ಹೇರುತ್ತೀರಿ," ಎಂದು ಅಭಿಪ್ರಾಯಪಟ್ಟಟರು.

ಶಿಖರ್ ಧವನ್ ನಾಯಕತ್ವದಲ್ಲಿ ಏಕದಿನ ಮತ್ತು ಟಿ20 ಸರಣಿ
ಭಾರತವು ಇಂಗ್ಲೆಂಡ್ ವಿರುದ್ಧ ಇಂದಿನಿಂದ (ಮಂಗಳವಾರ) ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದು, ಎರಡನೇ ಪಂದ್ಯ ಲಾರ್ಡ್ಸ್ (ಜುಲೈ 14) ಮತ್ತು ಮೂರನೇ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ (ಜುಲೈ 17) ಮುಂದಿನ ಎರಡು ಪಂದ್ಯಗಳು ನಡೆಲಿವೆ. ನಂತರ ವೆಸ್ಟ್ ಇಂಡೀಸ್‌ನಲ್ಲಿ ಶಿಖರ್ ಧವನ್ ನಾಯಕತ್ವದಲ್ಲಿ ಏಕದಿನ ಮತ್ತು ಟಿ20 ಸರಣಿಯನ್ನು ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications