Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅದೇನು ಕಷ್ಟದ ಸಿಕ್ಸರ್ ಅಲ್ಲ: ಹ್ಯಾರಿಸ್ ರೌಫ್‌ಗೆ ವಿರಾಟ್ ಕೊಹ್ಲಿ ಹೊಡೆದ ಸಿಕ್ಸರ್ ಬಗ್ಗೆ ಮಾಜಿ ಕ್ರಿಕೆಟಿಗನ ಪ್ರತಿಕ್ರಿಯೆ

Former Pakistan Cricketer Sohail Khan Comments On Virat Kohlis Sixes To Haris Rauf

2022ರ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ವಿರಾಟ ರೂಪ ತೋರಿಸಿದ್ದರು. ಪಾಕ್‌ನ ಪ್ರಮುಖ ವೇಗಿ ಹ್ಯಾರಿಸ್ ರೌಫ್‌ನಲ್ಲಿ ಅವರು ಹೊಡೆದ ಸಿಕ್ಸರ್ ದೀರ್ಘಕಾಲ ನೆನಪಿನಲ್ಲಿ ಉಳಿಯುವಂತದ್ದು.

ಐಸಿಸಿ ಕೂಡ ಕೊಹ್ಲಿ ಹೊಡಡೆದ ಸಿಕ್ಸರ್ ಅನ್ನು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠ ಸಿಕ್ಸರ್ ಎಂದು ಹೊಗಳಿದೆ. ರೌಫ್‌ರಂತಹ ಬೌಲರ್ ಗೆ ಆ ರೀತಿ ಸಿಕ್ಸ್ ಹೊಡೆಯಲು ಕೊಹ್ಲಿಗೆ ಮಾತ್ರ ಸಾಧ್ಯ ಎಂದು ಹಲವು ಮಾಜಿ ಕ್ರಿಕೆಟಿಗರು ಕೂಡ ಹೇಳಿದ್ದಾರೆ.

ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 53 ಎಸೆತಗಳಲ್ಲಿ ಔಟಾಗದೆ 82 ರನ್ ಗಳಿಸಿದ ವಿರಾಟ್ ಕೊಹ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಟಿ20 ಮಾದರಿಯಲ್ಲಿ ಇದು ವಿರಾಟ್ ಕೊಹ್ಲಿಯ ಶ್ರೇಷ್ಠ ಇನ್ನಿಂಗ್ಸ್ ಎನಿಸಿಕೊಂಡಿದೆ. ನಾಯಕ ರೋಹಿತ್ ಶರ್ಮಾ ಕೂಡ ಈ ಮಾತನ್ನು ಅಂದಿನ ಪಂದ್ಯದ ಬಳಿಕ ಹೇಳಿದ್ದರು.

ಆದರೆ, ವಿರಾಟ್ ಕೊಹ್ಲಿ ಹೊಡೆದ ಸಿಕ್ಸರ್ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗನಿಗೆ ಮಾತ್ರ ವಿಶೇಷ ಅನಿಸಿಲ್ವಂತೆ. ಪಾಕಿಸ್ತಾನದ ಮಾಜಿ ವೇಗದ ಬೌಲರ್ ಸೋಹೈಲ್ ಖಾನ್ ವಿರಾಟ್ ಕೊಹ್ಲಿ ಹೊಡೆದ ಸಿಕ್ಸರ್ ಏನು ಕಷ್ಟಕರವಾಗಿರಲಿಲ್ಲ ಎಂದು ಹೇಳಿದ್ದಾರೆ.

Former Pakistan Cricketer Sohail Khan Comments On Virat Kohlis Sixes To Haris Rauf

ಎಲ್ಲರೂ ಸಿಕ್ಸರ್ ಹೊಡೆಯುತ್ತಾರೆ

ಪಾಡ್‌ಕ್ಯಾಸ್ಟ್‌ನಲ್ಲಿ ನಾದಿರ್ ಅಲಿಯೊಂದಿಗೆ ಮಾತನಾಡಿರುವ ಸೊಹೈಲ್ ಖಾನ್, "ಎಲ್ಲರೂ ಸಿಕ್ಸ್ ಹೊಡೆಯುತ್ತಾರೆ" ಎಂದು ಹೇಳಿದ್ದಾರೆ. ಆ ಸಿಕ್ಸರ್ ಹೊಡೆಯುವುದು ಎಷ್ಟ ಕಷ್ಟಕರವಾಗಿತ್ತು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸೊಹೈಲ್, "ಅಷ್ಟೊಂದೇನು ಕಷ್ಟವಲ್ಲ, ಸ್ವಲ್ಪ ಜಾಗ ಮಾಡಿಕೊಂಡು ನೇರವಾಗಿ ಹೊಡೆದರು ಅಷ್ಟೇ" ಎಂದು ಹೇಳಿದ್ದಾರೆ.

ಎಲ್ಲಾ ಮಾಧ್ಯಮಗಳು ಮತ್ತು ಕ್ರಿಕೆಟ್ ವಿಶ್ಲೇಷಕರು ಸ್ಮ್ಯಾಕ್ ಮಾಡುವುದು ತುಂಬಾ ಕಷ್ಟ ಎಂದು ಹೇಳುತ್ತಿದ್ದಾರೆ ಎಂದು ಸಂದರ್ಶಕರು ಕೇಳಿದರು. ಇದಕ್ಕೆ ಉತ್ತರಿಸಿದ ಸೊಹೈಲ್, "ವಿರಾಟ್ ಕೊಹ್ಲಿ ಹ್ಯಾರಿಸ್‌ ರೌಫ್‌ಗೆ ಹೊಡೆದ ಸಿಕ್ಸರ್ ಕಷ್ಟವಾದುದ್ದಲ್ಲ. ಸ್ವಲ್ಪ ಜಾಗ ಮಾಡಿಕೊಂಡು ನೇರವಾಗಿ ಹೊಡೆದರು. ಅದನ್ನು ಹಾರ್ಡ್ ಲೆಂತ್‌ನಲ್ಲಿ ಬೌಲ್ ಮಾಡಲಾಗಿತ್ತು, ಅದನ್ನು ಕವರ್ ಕಡೆಗೆ ಹೊಡೆಯಬಹುದಿತ್ತು." ಎಂದು ಹೇಳಿದ್ದಾರೆ.

Former Pakistan Cricketer Sohail Khan Comments On Virat Kohlis Sixes To Haris Rauf

ಕೊಹ್ಲಿ ಆಟವನ್ನು ಹೊಗಳಿದ್ದ ರೌಫ್‌

ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಆಡಿದ ಆ ಇನ್ನಿಂಗ್ಸ್‌ ಬಹಳ ದೀರ್ಘ ಕಾಲದವರೆಗೆ ನೆನಪಿರುತ್ತದೆ. ಅಂದು ವಿರಾಟ್ ಕೊಹ್ಲಿ ಆಟಕ್ಕೆ ಇಡೀ ಕ್ರಿಕೆಟ್ ಜಗತ್ತೇ ನಿಬ್ಬೆರಗಾಗಿತ್ತು. ಅದರಲ್ಲೂ ಹ್ಯಾರಿಸ್ ರೌಫ್‌ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಸಿಡಿಸಿದ ಸಿಕ್ಸರ್ ಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ.

ಸ್ವತಃ ಹ್ಯಾರಿಸ್ ರೌಫ್ ಕೂಡ ಅಂದಿನ ವಿರಾಟ್ ಕೊಹ್ಲಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆ ರೀತಿ ಸಿಕ್ಸರ್ ಹೊಡೆಯುವುದು ಕಷ್ಟ ಎಂದು ಹೇಳಿದ್ದರು.

Story first published: Friday, February 3, 2023, 23:35 [IST]
Other articles published on Feb 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+