Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜೇಮ್ಸ್ ಆಂಡರ್ಸನ್ ಮುಂದಿನ ಜೀವನಕ್ಕೆ ಶುಭ ಹಾರೈಸಿದ ಟೀಮ್‌ ಇಂಡಿಯಾ ದಿಗ್ಗಜರು; ಜಿಮ್ಮಿ ಬೌಲಿಂಗ್‌ನಲ್ಲಿ ಸಚಿನ್ ಎಷ್ಟು ಬಾರಿ ಔಟ್‌

ಜುಲೈ 13 ಶನಿವಾರ, ಇಂಗ್ಲೆಂಡ್‌ನ ದಿಗ್ಗಜ ವೇಗದ ಬೌಲರ್‌ ಜೇಮ್ಸ್ ಆಂಡರ್ಸನ್ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ಅಂತ್ಯ ಹಾಡಿದ್ದಾರೆ. ಆಂಡರ್ಸನ್‌ ಅವರು ವೆಸ್ಟ್ ಇಂಡೀಸ್ ವಿರುದ್ಧ ಲಾರ್ಡ್ಸ್‌ನಲ್ಲಿ ವಿದಾಯ ಪಂದ್ಯವನ್ನು ಆಡಿದ್ದಾರೆ.

ಈ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಗೆಲುವಿನೊಂದಿಗೆ ಆಂಡರ್ಸನ್‌ ಅವರಿಗೆ ಬೀಳ್ಕೊಟ್ಟಿದೆ. ಲಾರ್ಡ್‌ನಲ್ಲಿ ಆಂಡರ್ಸನ್ ಅವರನ್ನು ಅಭಿನಂದನೆಗಳೊಂದಿಗೆ ಸ್ವಾಗತಿಸಲಾಯಿತು. ಇದರಲ್ಲಿ ಹಲವು ಟೀಮ್‌ ಇಂಡಿಯಾ ದಿಗ್ಗಜರು ಭಾಗಿಯಾಗಿದ್ದಾರೆ.

Former Team India players wished James Anderson good luck in his future life

ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಭಾವನಾತ್ಮಾಕ ಫೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಆಂಡರ್ಸನ್ ನಿವೃತ್ತಿಗಾಗಿ ಅವರನ್ನು ಸಚಿನ್‌ ಅಭಿನಂದಿಸಿದ್ದಾರೆ.

"ನೀವು ಬೌಲ್ ಮಾಡುವುದನ್ನು ನೋಡುವುದು ತುಂಬಾ ಸಂತೋಷವನ್ನು ನೀಡುತ್ತದೆ. ನೀವು ವೇಗ, ನಿಖರತೆ, ಸ್ವಿಂಗ್ ಮತ್ತು ಫಿಟ್‌ನೆಸ್‌ನೊಂದಿಗೆ ಬೌಲಿಂಗ್ ಮಾಡುವುದನ್ನು ನೋಡುವುದು ಅದ್ಭುತವಾಗಿದೆ. ನಿಮ್ಮ ಆಟದಿಂದ ನೀವು ಅನೇಕ ತಲೆಮಾರುಗಳಿಗೆ ಸ್ಫೂರ್ತಿ ನೀಡಿದ್ದೀರಿ ಎಂದು ಆಂಡರ್ಸನ್‌ ಫೋಟೋದೊಂದಿಗೆ ಸಚಿನ್‌ ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ನ ಹೊರತಾಗಿ, ಮಾಸ್ಟರ್ ಬ್ಲಾಸ್ಟರ್ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಆಂಡರ್ಸನ್‌ ಅವರಿಗೆ ವಿಶೇಷವಾಗಿ ಅಭಿನಂದಿಸಿದ್ದಾರೆ. ನಿಮ್ಮ ಕುಟುಂಬಕ್ಕೆ ಸಮಯ ನೀಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಯುವರಾಜ್ ಸಿಂಗ್ ಹೇಳಿದ್ದೇನು?

ಸಚಿನ್ ತೆಂಡೂಲ್ಕರ್ ಹೊರತುಪಡಿಸಿ, ಟೀಮ್ ಇಂಡಿಯಾ ಮಾಜಿ ದಿಗ್ಗಜ ಆಲ್‌ರೌಂಡರ್‌ ಯುವರಾಜ್ ಸಿಂಗ್ ಕೂಡ
ಜೇಮ್ಸ್ ಆಂಡರ್ಸನ್ ಅವರ ನೀವೃತ್ತಿ ಕುರಿತು ಪೋಸ್ಟ್ ಮಾಡಿದ್ದಾರೆ. 'ಜೇಮ್ಸ್ ಆಂಡರ್ಸನ್ ಅವರಂತಹ ಆಟಗಾರ ಪ್ರತಿದಿನ ಬರುವುದಿಲ್ಲ. ನಿಮ್ಮ ನಿವೃತ್ತಿಯೊಂದಿಗೆ, ವಿಶ್ವ ಕ್ರಿಕೆಟ್ ತನ್ನ ಅತ್ಯುತ್ತಮ ಆಟಗಾರರನ್ನು ಕಳೆದುಕೊಂಡಿದೆ.

ಚೆಂಡನ್ನು ಎರಡೂ ರೀತಿಯಲ್ಲಿ ಸ್ವಿಂಗ್ ಮಾಡುವ ಸಾಮರ್ಥ್ಯ, ನಿಖರತೆ ಮತ್ತು ಕಠಿಣ ಪರಿಶ್ರಮವು ನಿಮ್ಮನ್ನು ನಮ್ಮ ಕಾಲದ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರನ್ನಾಗಿ ಮಾಡಿದೆ. ನಿಮ್ಮ ಕೈಯಲ್ಲಿ ಚೆಂಡನ್ನು ಹಿಡಿದು ಓಡುವುದನ್ನು ಎಲ್ಲರೂ ತಪ್ಪಿಸಿಕೊಳ್ಳುತ್ತಾರೆ.

ನಿಮ್ಮ ಮುಂದಿನ ಅಧ್ಯಾಯಕ್ಕೆ ನೀವು ಹೆಜ್ಜೆ ಹಾಕಲಿದ್ದೀರಿ ಮತ್ತು ನಾನು ನಿಮಗೆ ಶುಭ ಹಾರೈಸುತ್ತೇನೆ. ನಿಮ್ಮೊಂದಿಗೆ ಮೈದಾನವನ್ನು ಹಂಚಿಕೊಳ್ಳುವುದು ಸಂತೋಷವಾಗಿದೆ. ಆಟವು ಖಂಡಿತವಾಗಿಯೂ ನಿಮ್ಮ ಉಪಸ್ಥಿತಿಯನ್ನು ಕಳೆದುಕೊಳ್ಳುತ್ತದೆ. ಜಿಮ್ಮಿ, ನಿಮ್ಮ ಅದ್ಭುತ ವೃತ್ತಿಜೀವನಕ್ಕೆ ಶುಭಾಶಯಗಳು' ಎಂದು ಯುವಿ ಬರೆದುಕೊಂಡಿದ್ದಾರೆ.

ಆಂಡರ್ಸನ್‌ ಬೌಲಿಂಗ್‌ನಲ್ಲಿ ಸಚಿನ್ ಎಷ್ಟು ಬಾರಿ ಔಟ್‌?

ಇತ್ತೀಚೆಗೆ ಜೇಮ್ಸ್ ಆಂಡರ್ಸನ್ ಅವರು ಸಚಿನ್ ತೆಂಡೂಲ್ಕರ್ ಅವರಿಗೆ ಅತ್ಯಂತ ಕಷ್ಟಕರವಾದ ಬ್ಯಾಟರ್‌ ಎಂದು ಹೇಳಿದ್ದರು. ಈ ಇಬ್ಬರು ದಿಗ್ಗಜರು ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಹಲವು ದಾಖಲೆಗಳನ್ನು ಮಾಡಿದ್ದಾರೆ.

ಸಚಿನ್‌ ಅವರು ವಿಶ್ವದ ಶ್ರೇಷ್ಠ ಬೌಲರ್‌ಗಳನ್ನು ತಮ್ಮ ಬ್ಯಾಟ್‌ ಮೂಲಕ ದಂಡಿಸಿದ್ದಾರೆ. ಇಂತಹ ದಿಗ್ಗಜ ಬ್ಯಾಟರ್‌ನನ್ನು
ಆಂಡರ್ಸನ್‌ ತಮ್ಮ ವೃತ್ತಿಜೀವನದಲ್ಲಿ 12 ಬಾರಿ ಔಟ್‌ ಮಾಡಿರುವ ಸಾಧನೆ ಮಾಡಿದ್ದಾರೆ.

2003ರಲ್ಲಿ ಆಂಡರ್ಸನ್ ಲಾರ್ಡ್ಸ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದು, ಇದೇ ಮೈದಾನದಲ್ಲಿ ವಿದಾಯ ಹೇಳಿದ್ದಾರೆ. ಆಂಡರ್ಸನ್ 188 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 704 ವಿಕೆಟ್‌ಗಳನ್ನು ಕಬಳಿಸಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ವೇಗದ ಬೌಲರ್ ಆಗಿದ್ದಾರೆ.

Story first published: Saturday, July 13, 2024, 7:12 [IST]
Other articles published on Jul 13, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+