ಪಾಕ್ ಟೆಸ್ಟ್ ಸರಣಿ ಮೇಲೆ 500 ವಿಕೆಟ್ ಸರದಾರ ಸ್ಟುವರ್ಟ್ ಬ್ರಾಡ್ ಕಣ್ಣು

ಮ್ಯಾನ್ಚೆಸ್ಟರ್, ಜುಲೈ 29: ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಟೆಸ್ಟ್ ಕ್ರಿಕೆಟ್‌ನ 500 ವಿಕೆಟ್‌ಗಳನ್ನು ಪೂರೈಸಿ ಅಪರೂಪದ ದಾಖಲೆ ನಿರ್ಮಿಸಿರುವ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಮುಂಬರಲಿರುವ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯತ್ತ ಕಣ್ಣಿಟ್ಟಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಅವರನ್ನು ಇಂಗ್ಲೆಂಡ್ ಆಡಿಸಿರಲಿಲ್ಲ. ದ್ವಿತೀಯ ಮತ್ತು ತೃತೀಯ ಪಂದ್ಯದಲ್ಲಿ ಮೈದಾನಕ್ಕಿಳಿದಿದ್ದ ಬ್ರಾಡ್ ಭರ್ಜರಿ 16 ವಿಕೆಟ್‌ಗಳನ್ನು ಪಡೆದಿದ್ದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆದ ವಿಶ್ವದ 4ನೇ ವೇಗಿಯಾಗಿ, ವಿಶ್ವದ 7ನೇ ಬೌಲರ್ ಆಗಿ ಮತ್ತು ಇಂಗ್ಲೆಂಡ್‌ನ 2ನೇ ಆಟಗಾರ (ಜೇಮ್ಸ್ ಆ್ಯಂಡರ್ಸನ್ ಮೊದಲನೆಯವ) ಆಗಿ ಗುರುತಿಸಿಕೊಂಡಿದ್ದರು.
ಬ್ರಾಡ್ ಮಾರಕ ಬೌಲಿಂಗ್ ನೆರವಿನಿಂದಲೇ ಕೊನೇಯ ಟೆಸ್ಟ್‌ನಲ್ಲಿ ಜೋ ರೂಟ್ ಪಡೆ 269 ರನ್ ಗೆಲುವನ್ನಾಚರಿಸಿದೆ. ಇದರೊಂದಿಗೆ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 2-1ರಿಂದ ಗೆದ್ದುಕೊಂಡಿದೆ. ಇನ್ನು ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ರಾಡ್ ಉತ್ತಮ ಪ್ರದರ್ಶನ ನೀಡುವತ್ತ ಕಣ್ಣಿಟ್ಟಿದ್ದಾರೆ. ಇಂಗ್ಲೆಂಡ್-ಪಾಕ್ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 5ರಿಂದ ಆರಂಭಗೊಳ್ಳಲಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆದ ಬೌಲರ್‌ಗಳೆಂದರೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (87 ಪಂದ್ಯಗಳು), ಭಾರತದ ಅನಿಲ್ ಕುಂಬ್ಳೆ (105), ಆಸ್ಟ್ರೇಲಿಯಾದ ಶೇನ್ ವಾರ್ನ್ (108), ಗ್ಲೆನ್ ಮೆಗ್ರಾತ್ (110), ವೆಸ್ಟ್ ಇಂಡೀಸ್‌ನ ಕರ್ಟ್ನಿ ವಾಲ್ಷ್ (129), ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್ (140).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications