ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಬ್ಬ ರಾಹುಲ್ ಉದಯ: ಟ್ವೀಟ್ ಹೊಗಳಿಕೆ
ಸಿಡ್ನಿ, ಜ.8: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ದಾಖಲಿಸಿದ ಕರ್ನಾಟಕದ ಯುವ ಪ್ರತಿಭೆ ಕೆಎಲ್ ರಾಹುಲ್ ಅವರಿಗೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಮೊದಲ ಟೆಸ್ಟ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ರಾಹುಲ್ ಈ ಟೆಸ್ಟ್ ನಲ್ಲಿ ತಮ್ಮ ಪ್ರತಿಭೆಯನ್ನು ಪಣಕ್ಕಿಟ್ಟಂತೆ ಆಡಿದ್ದು ಫಲ ನೀಡಿದೆ.
ಎರಡನೇ ಟೆಸ್ಟ್ ಪಂದ್ಯದಲ್ಲೇ ಶತಕ ಗಳಿಸಿ ಈಗ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರ ಸಮಕ್ಕೆ ನಿಂತಿರುವ 22 ವರ್ಷ ವಯಸ್ಸಿನ ರಾಹುಲ್ ಅವರಿಗೆ ಲಕ್ ಕೂಡ ಸಾಥ್ ನೀಡಿತ್ತು. ವಿರಾಟ್ ಕೊಹ್ಲಿಯಂಥ ಅನುಭವಿ ಮತ್ತೊಂದು ತುದಿಯಲ್ಲಿದ್ದಿದ್ದು ರಾಹುಲ್ ತಾಳ್ಮೆ ಕಾಯಲು ನೆರವಾಯಿತು. [ಗವಾಸ್ಕರ್ ಸಮಕ್ಕೆ ನಿಂತ ಚೊಚ್ಚಲ ಶತಕ ಸಿಡಿಸಿದ ರಾಹುಲ್]
ಕ್ರಿಕೆಟ್ ಜಗತ್ತು ಕಂಡ ಅದ್ಭುತ ಪ್ರತಿಭೆ ರಾಹುಲ್ ದ್ರಾವಿಡ್ ರಂತೆ ಲೋಕೇಶ್ ರಾಹುಲ್ ಕೂಡಾ ಬೆಳಗಲಿ, ಕರ್ನಾಟಕ ಹಾಗೂ ಟೀಂ ಇಂಡಿಯಾದ ಕೀರ್ತಿ ಹೆಚ್ಚಿಸಲಿ ಎಂದು ಅಭಿಮಾನಿಗಳು, ಮಾಜಿ ಕ್ರಿಕೆಟರ್ ಗಳು, ಮಾಧ್ಯಮ ಲೋಕದ ದಿಗ್ಗಜರು ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ.

2ನೇ ಪಂದ್ಯದಲ್ಲೇ ಶತಕ ಬಾರಿಸಿದ ಆಟಗಾರ
2ನೇ ಪಂದ್ಯದಲ್ಲೇ ಶತಕ ಬಾರಿಸಿದ ಆಟಗಾರರ ಪೈಕಿ 4ನೇ ಆಟಗಾರರಾಗಿ ರಾಹುಲ್ ಸೇರ್ಪಡೆಯಾಗಿದ್ದಾರೆ. ಪಂಕಜ್ ರಾಯ್, ಸುನಿಲ್ ಗವಾಸ್ಕರ್ ಹಾಗೂ ಸಂಜಯ್ ಬಂಗಾರ್(ಈಗಿನ ಸಹಾಯಕ ಕೋಚ್ ಆಗಿದ್ದಾರೆ) ಈ ಮುಂಚೆ ಈ ಸಾಧನೆ ಮಾಡಿದ್ದರು.
ಮಾಜಿ ನಾಯಕ ಅನಿಲ್ ಕುಂಬ್ಳೆಯಿಂದ ಶುಭ ಹಾರೈಕೆ
ಮಾಜಿ ನಾಯಕ, ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆಯಿಂದ ಅವರು ತಮ್ಮ ರಾಜ್ಯದ ಯುವ ಪ್ರತಿಭೆಗೆ ಶುಭ ಹಾರೈಸಿದ್ದಾರೆ.
ಬಿಷನ್ ಸಿಂಗ್ ಬೇಡಿ ಟ್ವೀಟ್
ಅಪರೂಪಕ್ಕೆ ಸ್ಪಿನ್ ದಿಗ್ಗಜ ಬಿಷನ್ ಸಿಂಗ್ ಬೇಡಿ ಕೂಡಾ ಹೊಗಳಿದ್ದಾರೆ
ಕೆಎಲ್ ರಾಹುಲ್ ಶತಕದ ನಂತರ
ಕೆಎಲ್ ರಾಹುಲ್ ಶತಕದ ನಂತರ ಹೇಳಿದ್ದು ಹೀಗೆ
ಕನ್ನಡ ನಟ, ಸಿಸಿಎಲ್ ಕ್ರಿಕೆಟರ್ ಪ್ರದೀಪ್ ಬೋಗಾದಿ
ಕನ್ನಡ ನಟ, ಸಿಸಿಎಲ್ ಕ್ರಿಕೆಟರ್ ಪ್ರದೀಪ್ ಬೋಗಾದಿ ಶುಭಹಾರೈಸಿದ್ದಾರೆ
ರಾಜ್ ದೀಪ್ ಸರ್ದೇಸಾಯಿ ಟ್ವೀಟ್
ರಾಜ್ ದೀಪ್ ಸರ್ದೇಸಾಯಿ ಟ್ವೀಟ್ ಮಾಡಿ ಯುವ ಆಟಗಾರನನ್ನು ಹೊಗಳಿ ಮತ್ತೊಬ್ಬ ರಾಹುಲ್ ಉದಯವಾಗಿದ್ದಾನೆ ಎಂದಿದ್ದಾರೆ.
ಡ್ಯಾನಿಯಲ್ ಖಾನ್ ಟ್ವೀಟ್
ಡ್ಯಾನಿಯಲ್ ಖಾನ್ ಎಂಬ ಕ್ರಿಕೆಟ್ ಅಭಿಮಾನಿ ಸ್ಪೈಡರ್ ಕ್ಯಾಮ್ ಲಕ್ ಬಗ್ಗೆ ಉಲ್ಲೇಖಿಸಿದ್ದಾರೆ.
ಮತ್ತೊಬ್ಬ ರಾಹುಲ್ ಉದಯ
ಮತ್ತೊಬ್ಬ ರಾಹುಲ್ ಉದಯ ಎಂದು ಮತ್ತೊಬ್ಬರಿಂದ ಟ್ವೀಟ್
ಸೆಂಥಿಲ್ ಕುಮಾರ್ ಎಂಬುವರಿಂದ ಟ್ವೀಟ್
ಸೆಂಥಿಲ್ ಕುಮಾರ್ ಎಂಬುವರು ಟ್ವೀಟ್ ಮಾಡಿ ಆಸ್ಟ್ರೇಲಿಯಾದಲ್ಲಿ ಶತಕ ಬಾರಿಸಿದ್ದು ಅದ್ಭುತ ಎಂದಿದ್ದಾರೆ
ನಟ ಶರತ್ ಕುಮಾರ್ ಟ್ವೀಟ್
ನಟ ಶರತ್ ಕುಮಾರ್ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications