Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗವಾಸ್ಕರ್ ಸಮಕ್ಕೆ ನಿಂತ ಚೊಚ್ಚಲ ಶತಕ ಸಿಡಿಸಿದ ರಾಹುಲ್

ಸಿಡ್ನಿ, ಜ.8: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಶತಕ ದಾಖಲಿಸಿದ ಕರ್ನಾಟಕದ ಯುವ ಪ್ರತಿಭೆ ಕೆಎಲ್ ರಾಹುಲ್ ಅವರು ಈಗ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರ ಸಮಕ್ಕೆ ನಿಂತಿದ್ದಾರೆ.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ಪ್ರಥಮ ಟೆಸ್ಟ್ ಪಂದ್ಯವಾಡಿದ್ದ ಕೆಎಲ್ ರಾಹುಲ್ ಅವರು ಮೊದಲ ಎರಡು ಇನ್ನಿಂಗ್ಸ್ ನಲ್ಲಿ 3 ಹಾಗೂ 1 ರನ್ ಮಾತ್ರ ಗಳಿಸಿ ನಿರಾಶೆ ಮೂಡಿಸಿದ್ದರು. ಅದರೆ, ತನ್ನ ವೃತ್ತಿ ಬದುಕಿನ ಮೂರನೇ ಇನ್ನಿಂಗ್ಸ್ ನಲ್ಲೇ ಶತಕ ಬಾರಿಸುವ ಮೂಲಕ ಕ್ರಿಕೆಟ್ ದಿಗ್ಗಜರ ಸಾಲಿಗೆ ಸೇರ್ಪಡೆಯಾಗಿದ್ದಾರೆ.

ಮಂಗಳೂರು ಮೂಲದ ಕರ್ನಾಟಕ ಪರ ರಣಜಿ ಆಡುವ 22 ವರ್ಷ ವಯಸ್ಸಿನ ಬಲಗೈ ಬ್ಯಾಟ್ಸ್ ಮನ್ ಸಿಡ್ನಿಯಲ್ಲಿ ಶತಕ ಬಾರಿಸುವ ಮೂಲಕ ಮೂರನೇ ಇನ್ನಿಂಗ್ಸ್ ನಲ್ಲೇ ಶತಕ ಬಾರಿಸಿದ 4ನೇ ಆಟಗಾರ ಎನಿಸಿದರು.

KL Rahul joins Sunil Gavaskar in elite list with maiden Test ton

ರಾಹುಲ್ 110(356 ನಿಮಿಷ, 262 ಎಸೆತ, 13x4, 1x6) ಟೀಂ ಇಂಡಿಯಾದ ಮೂರನೇ ದಿನದ ಆಟದ ಮುಖ್ಯಾಂಶವಾಗಿತ್ತು. ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಗಳಿಸುವುದು ಎಲ್ಲಾ ಆಟಗಾರರ ಕನಸಾಗಿರುತ್ತದೆ. [ಸಿಡ್ನಿ ಟೆಸ್ಟ್: ಮೂರನೇ ದಿನದ ವರದಿ]

ರಾಹುಲ್ ಗೂ ಮುನ್ನ ತಮ್ಮ ವೃತ್ತಿ ಬದುಕಿನ ಮೂರನೇ ಇನ್ನಿಂಗ್ಸ್ ನಲ್ಲೇ ಶತಕ ಗಳಿಸಿದವರು ಸುನಿಲ್ ಗವಾಸ್ಕರ್, ಸಂಜಯ್ ಮಂಜೇಕ್ರರ್ ಹಾಗೂ ಆರ್ ಅಶ್ವಿನ್. ಗವಾಸ್ಕರ್ ಅವರು 1971ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ರೀತಿ ಶತಕ ಬಾರಿಸಿದ್ದರು.

ವಿದೇಶದ ನೆಲದಲ್ಲಿ ಚೊಚ್ಚಲ ಶತಕ ದಾಖಲಿಸಿದ ಎರಡನೇ ಆಟಗಾರ ಎಂಬ ಸಾಧನೆಯನ್ನು ರಾಹುಲ್ ಮಾಡಿದ್ದಾರೆ. ಈ ಮುಂಚೆ ಅಜಯ್ ರಾತ್ರ ಎಂಬ ಆಟಗಾರ 20ನೇ ವಯಸ್ಸಿನಲ್ಲಿ ಮೇ 2002ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ದಾಖಲೆ ಬರೆದಿದ್ದರು. [ರಾಹುಲ್ ಅತ್ಯಂತ ಪ್ರಬುದ್ಧ ಆಟಗಾರ: ಸ್ಯಾಮುಯಲ್]

ಇದಲ್ಲದೆ 2ನೇ ಪಂದ್ಯದಲ್ಲೇ ಶತಕ ಬಾರಿಸಿದ ಆಟಗಾರರ ಪೈಕಿ 4ನೇ ಆಟಗಾರರಾಗಿ ರಾಹುಲ್ ಸೇರ್ಪಡೆಯಾಗಿದ್ದಾರೆ. ಪಂಕಜ್ ರಾಯ್, ಸುನಿಲ್ ಗವಾಸ್ಕರ್ ಹಾಗೂ ಸಂಜಯ್ ಬಂಗಾರ್(ಈಗಿನ ಸಹಾಯಕ ಕೋಚ್ ಆಗಿದ್ದಾರೆ) ಈ ಮುಂಚೆ ಈ ಸಾಧನೆ ಮಾಡಿದ್ದರು.

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+