ದುಬೈ, ಫೆ.8: ವಿಶ್ವಕಪ್ ಟೂರ್ನಿಗೆ ಭಾನುವಾರದಿಂದಲೇ ಒಂದು ರೀತಿ ಆರಂಭ ಸಿಕ್ಕಿದೆ. ಅಭ್ಯಾಸ ಪಂದ್ಯಗಳಿಗೆ ಅಧಿಕೃತ ಮಾನ್ಯತೆ ಇಲ್ಲದಿದ್ದರೂ ವೀಕ್ಷಕ ವಿವರಣೆಯಿಂದ ಹಿಡಿದು ಈ ಬಾರಿ ಟೂರ್ನಿಯ ಕವರೇಜ್ ಹೇಗಿರುತ್ತೆ? ಎಂಬ ಝಲಕ್ ಅಭಿಮಾನಿಗಳಿಗೆ ಇಂದೇ ಸಿಕ್ಕಿದೆ.
ಸ್ಟಾರ್ ಸ್ಪೋರ್ಟ್ಸ್ ನ ಹರ್ಷ ಭೋಂಗ್ಲೆ ಅವರ ಜೊತೆಗೆ ಮಾಜಿ ಕ್ರಿಕೆಟರ್ ಗಳು ವಿಶ್ವಕಪ್ ಚಾಂಪಿಯನ್ ಆಗಿ ಮೆರೆದ ಕ್ರಿಕೆಟರ್ ಗಳು ವೀಕ್ಷಕ ವಿವರಣೆ ನೀಡಲಿದ್ದಾರೆ.
ಕನ್ನಡದಲ್ಲಿ ವೀಕ್ಷಕ ವಿವರಣೆ ಕೇಳಬೇಕಾದರೆ ಸುವರ್ಣ ಪ್ಲಸ್ ಚಾನೆಲ್ ಆನ್ ಮಾಡಿದರೆ ಸಾಕು, ಶಂಕರ್ ಪ್ರಕಾಶ್, ಚಂದ್ರಮೌಲಿ ಕಣವಿ ಮಾಜಿ ಕ್ರಿಕೆಟರ್ ಗಳಾದ ಸುಜಿತ್ ಸೋಮಸುಂದರ್, ಜೆಸ್ವಂತ್ ಸೇರಿದಂತೆ ಕ್ರಿಕೆಟ್ ತಜ್ಞರು ಕನ್ನಡದಲ್ಲಿ ಕ್ರಿಕೆಟ್ ಮಜಾ ನೀಡುತ್ತಿದ್ದಾರೆ.[ವೀಕ್ಷಕ ವಿವರಣೆ ಕಸ್ತೂರಿ ಕನ್ನಡದಲ್ಲಿ!]

ಸ್ಟಾರ್ ವಾಹಿನಿಯಲ್ಲಿ ಕ್ರಿಕೆಟ್ ನೋಡುವವರಿಗೆ ಈ ಬಾರಿ 32 ಜನ ಕಾಮೆಂಟರಿ ನೀಡಲಿದ್ದಾರೆ. ಈ ಪೈಕಿ ಟೀಂ ಇಂಡಿಯಾದಿಂದ ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಸುನಿಲ್ ಗವಾಸ್ಕರ್ ಹಾಗೂ ಸಂಜಯ್ ಮಂಜೇಕ್ರರ್ ಇದ್ದಾರೆ. ಅದರೆ, ಕಾಮೆಂಟರಿ ತಂಡದಲ್ಲಿ ಅಸ್ಟ್ರೇಲಿಯನ್ನರೇ ಹೆಚ್ಚಾಗಿದ್ದಾರೆ.
ಹರ್ಷ ಭೋಗ್ಲೆ, ಮಾರ್ಕ್ ನಿಕೋಲಸ್, ಅಲಾನ್ ವಿಲ್ಕಿನ್ಸ್ ಜೊತೆಗೆ 10ಕ್ಕೂ ಅಧಿಕ ಮಾಜಿ ಕ್ರಿಕೆಟರ್ ಗಳು ವಿಶ್ವಕಪ್ ಗೆದ್ದ ತಂಡದಲ್ಲಿದ್ದವರು ಎಂಬುದು ವಿಶೇಷ.ಫೆ.14 ರಿಂದ ಮಾ.29ರ ತನಕ ಒಟ್ಟು 49 ಪಂದ್ಯಗಳನ್ನು ಅಂಕಿ ಅಂಶ ಸಮೇತ ರಸಭರಿತವಾಗಿ ನಿಮ್ಮ ಮುಂದಿಡಲು ಎಲ್ಲರೂ ಸಿದ್ದರಾಗಿದ್ದಾರೆ.
ವಿಶ್ವಕಪ್ 2015: ಟಿವಿ ಕಾಮೆಂಟೆಟರ್ಸ್ ಪಟ್ಟಿ
1. ವಾಸೀಂ ಅಕ್ರಂ (ಪಾಕಿಸ್ತಾನ) -ವಿಶ್ವಕಪ್ ವಿಜೇತ
2. ರಸೆಲ್ ಅರ್ನಾಲ್ಡ್ (ಶ್ರೀಲಂಕಾ)
3. ಮೈಕಲ್ ಅಥರ್ಟನ್ (ಇಂಗ್ಲೆಂಡ್)
4. ಇಯಾನ್ ಬಿಷಪ್ (ವೆಸ್ಟ್ ಇಂಡೀಸ್)
5. ಅಲಾನ್ ಬಾರ್ಡರ್ (ಆಸ್ಟ್ರೇಲಿಯಾ) -ವಿಶ್ವಕಪ್ ವಿಜೇತ
6. ಇಯಾನ್ ಬೋಥಂ (ಇಂಗ್ಲೆಂಡ್)
7. ಸೈಮನ್ ಡೌಲ್ (ನ್ಯೂಜಿಲೆಂಡ್)
8. ರಾಹುಲ್ ದ್ರಾವಿಡ್ (ಭಾರತ)
9. ಡೇಮಿಯನ್ ಫ್ಲೆಮಿಂಗ್ (ಆಸ್ಟ್ರೇಲಿಯಾ) -ವಿಶ್ವಕಪ್ ವಿಜೇತ
10. ಸೌರವ್ ಗಂಗೂಲಿ (ಭಾರತ)
11. ಸುನಿಲ್ ಗವಾಸ್ಕರ್ (ಭಾರತ)- ವಿಶ್ವಕಪ್ ವಿಜೇತ
12. ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ) -ವಿಶ್ವಕಪ್ ವಿಜೇತ
13. ಮೈಕಲ್ ಹಸ್ಸಿ (ಆಸ್ಟ್ರೇಲಿಯಾ) -ವಿಶ್ವಕಪ್ ವಿಜೇತ
14. ಡೀನ್ ಜೋನ್ಸ್ (ಆಸ್ಟ್ರೇಲಿಯಾ) - ವಿಶ್ವಕಪ್ ವಿಜೇತ
15. ನಾಸೀರ್ ಹುಸೇನ್ (ಇಂಗ್ಲೆಂಡ್)
16. ಬ್ರೆಂಡನ್ ಜೂಲಿಯನ್ (ಆಸ್ಟ್ರೇಲಿಯಾ)
17. ನಿಕ್ ನೈಟ್ (ಇಂಗ್ಲೆಂಡ್)
18. ಬ್ರೆಟ್ ಲೀ (ಆಸ್ಟ್ರೇಲಿಯಾ) -ವಿಶ್ವಕಪ್ ವಿಜೇತ
19. ಡೇವಿಡ್ ಲಾಯ್ಡ್ (ಇಂಗ್ಲೆಂಡ್)
20. ಸಂಜಯ್ ಮಂಜ್ರೇಕರ್ (ಭಾರತ)
21. ಡೇಮಿಯನ್ ಮಾರ್ಟಿನ್ (ಆಸ್ಟ್ರೇಲಿಯಾ) -ವಿಶ್ವಕಪ್ ವಿಜೇತ
22. ಪುಮೆಲೆಲೋ ಬಾಂಗ್ವಾ (ಜಿಂಬಾಬ್ವೆ)
23. ಟಾಮ್ ಮೂಡಿ (ಆಸ್ಟ್ರೇಲಿಯಾ) -ವಿಶ್ವಕಪ್ ವಿಜೇತ
24. ಶಾನ್ ಪೊಲ್ಲಾಕ್ (ದಕ್ಷಿಣ ಆಫ್ರಿಕಾ)
25. ರಮೀಜ್ ರಾಜಾ (ಪಾಕಿಸ್ತಾನ)
26. ಮಾರ್ಕ್ ರಿಚರ್ಡ್ಸನ್ (ನ್ಯೂಜಿಲೆಂಡ್)
27. ಮೈಕಲ್ ಸ್ಲೇಟರ್ (ಆಸ್ಟ್ರೇಲಿಯಾ)
28. ಇಯಾನ್ ಸ್ಮಿತ್ (ನ್ಯೂಜಿಲೆಂಡ್)
29. ಸ್ಟಾರ್ ಸ್ಟೈರಿಸ್ (ನ್ಯೂಜಿಲೆಂಡ್)
30. ಮಾರ್ಕ್ ಟೇಲರ್ (ಆಸ್ಟ್ರೇಲಿಯಾ)
31. ಸ್ಟೀವ್ ವಾ (ಆಸ್ಟ್ರೇಲಿಯಾ)- ವಿಶ್ವಕಪ್ ವಿಜೇತ
32. ಮಾರ್ಕ್ ವಾ (ಆಸ್ಟ್ರೇಲಿಯಾ)- ವಿಶ್ವಕಪ್ ವಿಜೇತ
ಒನ್ ಇಂಡಿಯಾ ಸುದ್ದಿ