ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಕ್ರಿಕೆಟ್ ವೀಕ್ಷಕ ವಿವರಣೆ ಕಸ್ತೂರಿ ಕನ್ನಡದಲ್ಲಿ!

By Prasad

ನವದೆಹಲಿ, ಜ. 24 : ಕ್ರಿಕೆಟನ್ನು ಅತಿಯಾಗಿ ಪ್ರೀತಿಸುವ ಕನ್ನಡಿಗರಿಗೊಂದು ಸಂತಸದ ಸುದ್ದಿ ಇಲ್ಲಿದೆ. ಅದೇನೆಂದರೆ, ಫೆಬ್ರವರಿ 14ರಿಂದ ಆರಂಭವಾಗಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2015ರ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್, ಕಸ್ತೂರಿ ಕನ್ನಡವೂ ಸೇರಿದಂತೆ 6 ಭಾರತೀಯ ಭಾಷೆಯಲ್ಲಿ ಪ್ರಸಾರವಾಗಲಿದೆ.

"ಪೆವಿಲಿಯನ್ ತುದಿಯಿಂದ ವೇಗವೇಗಿ ಓಡಿಬಂದ ಭುವನೇಶ್ವರ ಕುಮಾರ್ ಎಸೆದ ಚೆಂಡು, ಮಿಸ್ಬಾ ಉಲ್ ಹಕ್ ಕೈಗವಸು ಸವರಿಕೊಂಡು, ನಂತರ ಶಿರಸ್ತ್ರಾಣಕ್ಕೆ ಅಪ್ಪಳಿಸಿ, ಶಾರ್ಟ್ ಫೈನ್ ಲೆಗ್ ನಲ್ಲಿ ನಿಂತಿದ್ದ ಆಟಗಾರನ ಕೈಸೇರಿದೆ. ಔಟ್ ನೀಡಬೇಕೆಂದು ಎಲ್ಲ ಆಟಗಾರರ ಒಕ್ಕೊರಲ ಅಪೀಲ್..." ಹೀಗೆ ಕಾಮೆಂಟರಿ ಕೇಳಿಬರುತ್ತಿದ್ದರೆ ಎಂಥಾ ಖುಷಿ ಅಲ್ವಾ?

ಸ್ಪಷ್ಟ ಕನ್ನಡದಲ್ಲಿ ಪಂದ್ಯದ ವೀಕ್ಷಕ ವಿವರಣೆಯನ್ನು ಯಾರು ಕೊಡುತ್ತಾರೋ ಇನ್ನೂ ತಿಳಿದುಬಂದಿಲ್ಲ. ನೀಡುವವರು ಯಾರೇ ಇರಲಿ, ಕನ್ನಡ ಕಲಬೆರಕೆ ಮಾಡದಂತೆ ಸ್ಪಷ್ಟವಾದ ಕನ್ನಡದಲ್ಲಿ ನೀಡಲಿ ಎಂಬುದು ಕನ್ನಡಿಗರ ಆಶಯ. ಕನ್ನಡದ ಜೊತೆ ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಭಾಷೆಗಳಲ್ಲಿಯೂ ವೀಕ್ಷಕ ವಿವರಣೆ ದೊರೆಯಲಿದೆ. [ಸಂಪೂರ್ಣ ವೇಳಾಪಟ್ಟಿ]

ICC World Cup 2015 to be broadcast in Kannada

ಟಿವಿ ಇನ್ನೂ ಇರದಿದ್ದ ಕಾಲದಲ್ಲಿ ಕಿವಿಗೆ ಟಾರ್ನ್ಸಿಸ್ಟರ್ ಇಟ್ಟುಕೊಂಡು ವೀಕ್ಷಕ ವಿವರಣೆ ಕೇಳುತ್ತಿದ್ದವರಿಗೆ ಇದರ ಆನಂದ ಏನೆಂದು ಗೊತ್ತಿರುತ್ತದೆ. ಏನೇ ಆಗಲಿ, ತನ್ನಲ್ಲಿ ಇರಿಸಿಕೊಂಡಿರುವ ವಿಶ್ವಕಪ್ ಅನ್ನು ಉಳಿಸಿಕೊಳ್ಳಲು ಭಾರತ ಫೆಬ್ರವರಿ 15ರಿಂದ ಪಾಕಿಸ್ತಾನದ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ.

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವಿಶ್ವಕಪ್ ಈ ಬಾರಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ನಡೆಯಲಿದ್ದು, ಮಾರ್ಚ್ 29ರಂದು ಮೆಲ್ಬೋರ್ನ್ ನಲ್ಲಿ ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಕೊನೆಯಾಗಲಿದೆ. ಭಾರತದ ಪ್ರಮುಖ ಸ್ಪೋರ್ಟ್ಸ್ ಬ್ರಾಡ್‌ಕಾಸ್ಟರ್ ಆಗಿರುವ ಸ್ಟಾರ್ ಸ್ಪೋರ್ಟ್ಸ್ ಶನಿವಾರ ಯುವಕರನ್ನು ಸೆಳೆಯಲು #wontgiveitback ಎಂಬ ಅಭಿಯಾನವನ್ನು ಆರಂಭಿಸಿದೆ.

"ಭಾರತದಲ್ಲಿ ಕ್ರಿಕೆಟ್ ಬಗ್ಗೆ ಜನರಿಗಿರುವ ಆಕರ್ಷಣೆ ಎಂಥದ್ದೆಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಸ್ಟಾರ್ ಚಾನಲ್ ಯುವಜನತೆಯನ್ನು ಇನ್ನಷ್ಟು ಸೆಳೆಯಲು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಬರಲಿರುವ ದಿನಗಳಲ್ಲಿ ಒಂದೊಂದಾಗಿ ಬಿಡುಗಡೆ ಮಾಡಲಿದೆ" ಎಂದು ಸ್ಟಾರ್ ಇಂಡಿಯಾದ ವಕ್ತಾರ ಹೇಳಿದ್ದಾರೆ. (ಪಿಟಿಐ)

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X