ಆ ಮೂವರು ಸ್ಟಾರ್ ಆಟಗಾರರನ್ನು ಕ್ಲೀನ್ ಬೌಲ್ಡ್ ಮಾಡಿದ್ದೇ ನನ್ನ ಮಹಾ ಸಾಧನೆ ಎಂದ ರಶೀದ್ ಖಾನ್

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಟವಾಡುವ ಅಫ್ಘಾನಿಸ್ತಾನದ ಬೌಲರ್ ರಶೀದ್ ಖಾನ್ ಸದ್ಯ ಅಬುಧಾಬಿಯಲ್ಲಿ ಬೀಡುಬಿಟ್ಟಿದ್ದಾರೆ. ಜೂನ್ 9ರಿಂದ 2021ರ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿ ಮುಂದುವರಿಯುತ್ತಿದ್ದು ರಶೀದ್ ಖಾನ್ ಭಾಗವಹಿಸುತ್ತಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್; ಕೊಹ್ಲಿ ಬೇಡ ಎಂದಿದ್ದ ವಿಷಯವನ್ನೇ ಕೆದಕಿದ ಲಕ್ಷ್ಮಣ್
ಸದ್ಯ ಪಿಎಸ್ಎಲ್ ಟೂರ್ನಿಯ ತಯಾರಿಯಲ್ಲಿರುವ ರಶೀದ್ ಖಾನ್ ತಮ್ಮ ವೃತ್ತಿ ಜೀವನದಲ್ಲಿ ಪಡೆದ ಅತ್ಯುತ್ತಮ ವಿಕೆಟ್‍ಗಳ ಕುರಿತು ಮೆಲುಕು ಹಾಕಿದ್ದಾರೆ. ತಮ್ಮ ಜೀವನದಲ್ಲಿಯೇ ಮರೆಯಲಾಗದಂತಹ ವಿಕೆಟ್‍ಗಳು ಯಾವುವು ಎಂಬುದನ್ನು ರಶೀದ್ ಖಾನ್ ಬಿಚ್ಚಿಟ್ಟಿದ್ದಾರೆ.
WTC Final: ನ್ಯೂಜಿಲೆಂಡ್‌ಗೆ ಲಾಭ, ಭಾರತಕ್ಕೆ ನಷ್ಟ; ಯುವರಾಜ್ ಸಿಂಗ್ ಅಸಮಾಧಾನ
'ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ನೆನಪಿಟ್ಟುಕೊಳ್ಳುವಂತಹ ಹಲವಾರು ವಿಕೆಟ್‍ಗಳಿವೆ. ಆದರೆ ಅವುಗಳ ಪೈಕಿ ಜೀವನಪೂರ್ತಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತಹ ಮೂರು ವಿಕೆಟ್‍ಗಳೆಂದರೆ ಎಂಎಸ್ ಧೋನಿ, ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿಯವರದ್ದು. ಈ ಮೂವರು ಮಹಾನ್ ಕ್ರಿಕೆಟಿಗರನ್ನು ಕ್ಲೀನ್ ಬೌಲ್ಡ್ ಮಾಡಿದ್ದನ್ನು ಎಂದಿಗೂ ಮರೆಯಲಾಗುವುದಿಲ್ಲ ಏಕೆಂದರೆ ಓರ್ವ ಸ್ಪಿನ್ನರ್ ಆಗಿ ಇಂತಹ ಘಟಾನುಘಟಿ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆಯುವುದು ಸುಲಭದ ಮಾತಲ್ಲ' ಎಂದು ರಶೀದ್ ಖಾನ್ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications