ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್; ಕೊಹ್ಲಿ ಬೇಡ ಎಂದಿದ್ದ ವಿಷಯವನ್ನೇ ಕೆದಕಿದ ಲಕ್ಷ್ಮಣ್

ಜೂನ್ 18-22ರವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ನಡೆಯಲಿದ್ದು ಟೀಮ್ ಇಂಡಿಯಾ ತಂಡ ಈಗಾಗಲೇ ಸೌತಂಪ್ಟನ್ ತಲುಪಿ ಕ್ವಾರಂಟೈನ್ ನಿಯಮವನ್ನು ಅನುಸರಿಸುತ್ತಿದೆ.
ಚೆನ್ನಾಗಿ ಆಡದೇ ಇದ್ರೂ ಈ ಆಟಗಾರನಿಗೆ ಪದೇಪದೆ ಅವಕಾಶ ಕೊಟ್ಟಿತ್ತು ಆರ್‌ಸಿಬಿ!
ಅತ್ತ 2 ವಾರಗಳ ಮುಂಚೆಯೇ ಇಂಗ್ಲೆಂಡ್ ತಲುಪಿರುವ ನ್ಯೂಜಿಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದ್ದು, ಈಗಾಗಲೇ ಮೊದಲನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ತಂಡದ ವಿರುದ್ಧ ಆಡುತ್ತಿರುವ ಈ 2 ಪಂದ್ಯಗಳ ಟೆಸ್ಟ್ ಸರಣಿಯೇ ಇದೀಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಭಾರತ ತಂಡ ಯಾವುದೇ ಪಂದ್ಯವನ್ನು ಆಡದೆ ನೇರವಾಗಿ ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಪಂದ್ಯವನ್ನು ಆಡಲಿದೆ, ಆದರೆ ನ್ಯೂಜಿಲೆಂಡ್ ತಂಡ ಮಾತ್ರ ಇಂಗ್ಲೆಂಡ್ ನೆಲದಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡುವುದರ ಮೂಲಕ ಇಂಗ್ಲೆಂಡ್ ನೆಲದ ಅನುಭವದೊಂದಿಗೆ ಭಾರತದ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಪಂದ್ಯವನ್ನು ಆಡಲಿದ್ದು ನ್ಯೂಜಿಲೆಂಡ್ ತಂಡಕ್ಕೆ ಇದು ಅನುಕೂಲಕರವಾಗಲಿದೆ ಎಂಬ ಚರ್ಚೆಗಳು ಹೆಚ್ಚಾಗಿ ಕೇಳಿಬರುತ್ತಿವೆ.
ಈತ ಸೆಹ್ವಾಗ್ ಹಾಗೂ ಗಿಲ್‌ಕ್ರಿಸ್ಟ್ ರೀತಿ ಎದುರಾಳಿಗಳಲ್ಲಿ ಭಯ ಹುಟ್ಟಿಸಬಲ್ಲ ಎಂದ ದಿನೇಶ್ ಕಾರ್ತಿಕ್
ಇದೀಗ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಕೂಡ ಇದೇ ವಿಷಯವನ್ನು ಚರ್ಚಿಸಿದ್ದು ಈ ಕೆಳಕಂಡಂತೆ ಮಾತನಾಡಿದ್ದಾರೆ.

ಖಂಡಿತವಾಗಿಯೂ ಭಾರತಕ್ಕಿಂತ ನ್ಯೂಜಿಲೆಂಡ್ ತಂಡಕ್ಕೆ ಅನುಕೂಲ ಹೆಚ್ಚು
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ಮಾತನಾಡಿರುವ ವಿವಿಎಸ್ ಲಕ್ಷ್ಮಣ್ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ ಆಡುತ್ತಿರುವ 2 ಟೆಸ್ಟ್ ಪಂದ್ಯಗಳು ನ್ಯೂಜಿಲೆಂಡ್ ತಂಡಕ್ಕೆ ಹೆಚ್ಚು ಅನುಕೂಲಕರವಾಗಿ ಪರಿಣಮಿಸುವುದು ಖಚಿತ ಎಂದಿದ್ದಾರೆ. ಈ 2 ಪಂದ್ಯಗಳ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಇಂಗ್ಲೆಂಡ್ ಪಿಚ್‌ನ ಸ್ಥಿತಿ ಅರ್ಥವಾಗಲಿದ್ದು ಭಾರತಕ್ಕೆ ಈ ಅವಕಾಶ ಇರುವುದಿಲ್ಲ ಎಂದಿದ್ದಾರೆ.

ನಮಗಿಂತ ನ್ಯೂಜಿಲೆಂಡ್ ತಂಡಕ್ಕೆ ಅನುಕೂಲ ಹೆಚ್ಚು ಎನ್ನಲೇಬೇಡಿ ಎಂದಿದ್ರು ವಿರಾಟ್ ಕೊಹ್ಲಿ
ಆದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮಾತ್ರ ಈ ರೀತಿ ಹೇಳಿಕೆ ನೀಡುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಹೌದು ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಮುನ್ನ ಪತ್ರಿಕಾಗೋಷ್ಠಿ ನಡೆಸಿದ್ದ ವಿರಾಟ್ ಭಾರತ ತಂಡಕ್ಕಿಂತ ನ್ಯೂಜಿಲೆಂಡ್ ತಂಡಕ್ಕೆ ಅನುಕೂಲ ಹೆಚ್ಚಿದೆ ಎಂದು ಹೇಳಲೇಬೇಡಿ, ನಮ್ಮ ತಂಡ ಬಲಿಷ್ಠವಾಗಿದ್ದು ಈ ಹಿಂದೆ ಅನೇಕ ಬಾರಿ ಅಭ್ಯಾಸ ಪಂದ್ಯಗಳನ್ನಾಡದೇ ವಿದೇಶಿ ನೆಲದಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ವಿರಾಟ್ ಕೊಹ್ಲಿ ಗರಂ ಆಗಿದ್ದರು.

ಫೈನಲ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಕಠಿಣ ಅಭ್ಯಾಸ ನಡೆಸಬೇಕಿದೆ
ನ್ಯೂಜಿಲೆಂಡ್ ತಂಡಕ್ಕೆ ಅನುಕೂಲ ಹೆಚ್ಚು ಎಂದು ಹೇಳಿರುವ ವಿವಿಎಸ್ ಲಕ್ಷ್ಮಣ್, ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳನ್ನು ಆಡುವುದರ ಮೂಲಕ ಇಂಗ್ಲೆಂಡ್ ಪಿಚ್‌ನ ಸ್ಥಿತಿಯನ್ನು ಅರಿಯಲಿದ್ದು ಭಾರತ ತಂಡ ಕೂಡ ಪಂದ್ಯಕ್ಕೂ ಮುನ್ನ ಕಠಿಣ ಅಭ್ಯಾಸವನ್ನು ನಡೆಸುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications