ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ನ್ಯೂಜಿಲೆಂಡ್‌ಗೆ ಲಾಭ, ಭಾರತಕ್ಕೆ ನಷ್ಟ; ಯುವರಾಜ್ ಸಿಂಗ್ ಅಸಮಾಧಾನ

WTC Final Should Have Been A Best of Three Tests says Yuvraj Singh
ರೋಹಿತ್, ಶುಭ್ಮನ್ ಗಿಲ್ ಇಬ್ಬರಿಗೂ ಇದು ಕಷ್ಟ ಆಗುತ್ತೆ ಎಂದ ಯುವಿ | Oneindia Kannada

ಜೂನ್ 18-22ರವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ನಡೆಯಲಿದ್ದು ಟೀಮ್ ಇಂಡಿಯಾ ತಂಡ ಈಗಾಗಲೇ ಸೌತಂಪ್ಟನ್ ತಲುಪಿ ಕ್ವಾರಂಟೈನ್ ನಿಯಮವನ್ನು ಅನುಸರಿಸುತ್ತಿದೆ.

ಕೊಹ್ಲಿ, ರೋಹಿತ್ ಅಲ್ಲ ಈತನನ್ನು ಅನುಸರಿಸಿ; ಆಂಗ್ಲ ಕ್ರಿಕೆಟಿಗರಿಗೆ ಪೀಟರ್ಸನ್ ಸಲಹೆ!

ಈ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳಿಗೂ ಸಹ ಪ್ರತಿಷ್ಟಿತ ಪಂದ್ಯವಾಗಿದ್ದು, ಎರಡೂ ತಂಡಗಳು ಸಹ ಫೈನಲ್ ಪಂದ್ಯದಲ್ಲಿ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲು ಕಾಯುತ್ತಿವೆ. ಆದರೆ ಇತ್ತೀಚಿಗಷ್ಟೆ ಈ ಟ್ರೋಫಿಯ ಕುರಿತು ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿ ಇಂತಹ ಟ್ರೋಫಿಯ ಫೈನಲ್‌ನ್ನು ಒಂದೇ ಪಂದ್ಯದಲ್ಲಿ ಮುಗಿಸುವ ಬದಲು 3 ಪಂದ್ಯಗಳ ಸರಣಿ ಆಡಿಸಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್; ಕೊಹ್ಲಿ ಬೇಡ ಎಂದಿದ್ದ ವಿಷಯವನ್ನೇ ಕೆದಕಿದ ಲಕ್ಷ್ಮಣ್

ಇದೀಗ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ರವಿಶಾಸ್ತ್ರಿ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಟ್ರೋಫಿಯ ವಿಜೇತರನ್ನು ಒಂದೇ ಪಂದ್ಯದ ಫೈನಲ್ ಆಡಿಸುವ ಬದಲು 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿಸಿ ನಿರ್ಧರಿಸಬಹುದಿತ್ತು ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ನ್ಯೂಜಿಲೆಂಡ್‌ಗೆ ತೊಂದರೆಯಾಗುವುದಿಲ್ಲ

ನ್ಯೂಜಿಲೆಂಡ್‌ಗೆ ತೊಂದರೆಯಾಗುವುದಿಲ್ಲ

ಭಾರತದ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಆಡುವ ಮುನ್ನ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ 2 ಟೆಸ್ಟ್ ಪಂದ್ಯಗಳನ್ನು ಆಡುವುದರಿಂದ ನ್ಯೂಜಿಲೆಂಡ್ ಆಟಗಾರರಿಗೆ ಇಂಗ್ಲೆಂಡ್ ಪಿಚ್‌ನ ಅನುಭವವಾಗಲಿದೆ. ಹೀಗಾಗಿ ನ್ಯೂಜಿಲೆಂಡ್ ತಂಡಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಭಾರತೀಯರಿಗೆ ಬಲುಕಷ್ಟ

ಭಾರತೀಯರಿಗೆ ಬಲುಕಷ್ಟ

ಟೀಮ್ ಇಂಡಿಯಾ ಆಟಗಾರರು ಯಾವುದೇ ಪಂದ್ಯವನ್ನು ಆಡದೆ ನ್ಯೂಜಿಲೆಂಡ್ ತಂಡದ ವಿರುದ್ಧ ನೇರವಾಗಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವನ್ನು ಆಡಲಿದ್ದು ಕಷ್ಟವನ್ನು ಎದುರಿಸುವುದು ಖಚಿತ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಅದರಲ್ಲಿಯೂ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಇಂಗ್ಲೆಂಡ್ ನೆಲದಲ್ಲಿ ಆರಂಭಿಕ ಆಟಗಾರರಾಗಿ ಯಾವುದೇ ಟೆಸ್ಟ್ ಪಂದ್ಯವನ್ನಾಡಿಲ್ಲ. ಹೀಗಾಗಿ ಟೀಮ್ ಇಂಡಿಯಾ ಸಂಕಷ್ಟಕ್ಕೆ ಒಳಗಾಗಲಿದೆ ಎಂದು ಯುವರಾಜ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

3 ಪಂದ್ಯಗಳಾಗಿದ್ದರೆ ಸರಿಯಾಗಿರುತ್ತಿತ್ತು

3 ಪಂದ್ಯಗಳಾಗಿದ್ದರೆ ಸರಿಯಾಗಿರುತ್ತಿತ್ತು

ಅತ್ತ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳನ್ನಾಡಿ ಅನುಭವ ಹೊಂದಿರುತ್ತದೆ, ಆದರೆ ಭಾರತ ತಂಡ ಯಾವುದೇ ಅನುಭವವನ್ನು ಹೊಂದಿರದೆ ಫೈನಲ್ ಪಂದ್ಯವನ್ನಾಡಲಿದೆ. ಹೀಗಾಗಿ ಒಂದೇ ಒಂದು ಫೈನಲ್ ಪಂದ್ಯವನ್ನು ಆಡಿಸುವ ಬದಲು 3 ಪಂದ್ಯಗಳ ಸರಣಿಗಳನ್ನಾಡಿಸಿ ಸರಣಿಯಲ್ಲಿ ಜಯಗಳಿಸಿದವರನ್ನು ವಿಜೇತರೆಂದು ಘೋಷಿಸಬಹುದಿತ್ತು. ಈ ರೀತಿ 3 ಪಂದ್ಯಗಳ ಸರಣಿ ಆಯೋಜನೆ ಮಾಡಿದ್ದರೆ ಎರಡೂ ತಂಡಗಳಿಗೂ ಸರಿಸಮನಾದ ಅನುಕೂಲವಾಗುತ್ತಿತ್ತು ಎಂದು ಯುವರಾಜ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Story first published: Sunday, June 6, 2021, 19:42 [IST]
Other articles published on Jun 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X