Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗ್ರಹಾಂ ಗೂಚ್ ಸಾರ್ವಕಾಲಿಕ XI ನಲ್ಲಿ ಸಚಿನ್, ಅಕ್ರಂ

Graham Goochs All Time XI include Sachin, Wasim Akram

ಲಂಡನ್, ಆಗಸ್ಟ್ 29: ಇಂಗ್ಲೆಂಡಿನ ಮಾಜಿ ಆಟಗಾರ, 65 ವರ್ಷ ವಯಸ್ಸಿನ ಗ್ರಹಾಂ ಗೂಚ್ ಅವರು ತಮ್ಮ ಆಯ್ಕೆಯ ಸಾರ್ವಕಾಲಿಕ XI ಘೋಷಿಸಿದ್ದಾರೆ. ಲಾರ್ಡ್ಸ್ ಮೈದಾನದ ಅಧಿಕೃತ ಯೂಟ್ಯೂಬ್ ಖಾತೆಯಲ್ಲಿ ತಮ್ಮ ಆಯ್ಕೆಯನ್ನು ವಿಡಿಯೋ ಮೂಲಕ ಹೇಳಿದ್ದಾರೆ.

ಹೆಚ್ಚಾಗಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಆಟಗಾರರನ್ನು ಹೊಂದಿರುವ ಈ ತಂಡದಲ್ಲಿ ಏಷ್ಯಾದಿಂದ ಭಾರತದ ಸಚಿನ್ ತೆಂಡೂಲ್ಕರ್ ಹಾಗೂ ಪಾಕಿಸ್ತಾನ ವಾಸೀಂ ಆಕ್ರಂ ಅವರನ್ನು ಆಯ್ಕೆ ಮಾಡಿದ್ದಾರೆ.

ಆರಂಭಿಕ ಆಟಗಾರರಾಗಿ ದಕ್ಷಿಣ ಆಫ್ರಿಕಾದ ಬ್ಯಾರಿ ರಿಚರ್ಡ್ಸ್ ಹಾಗೂ ಇಂಗ್ಲೆಂಡಿನ ಜೆಫ್ರಿ ಬಾಯ್ಕಾಟ್ ಅವರನ್ನು ಕಣಕ್ಕಿಳಿಸುತ್ತಿದ್ದಾರೆ. ಮೂರನೇ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಮಾಸ್ಟರ್ ಬ್ಲಾಸ್ಟರ್ ಗಳಾದ ವಿವ್ ರಿಚರ್ಡ್ಸ್ ಹಾಗೂ ಸಚಿನ್ ತೆಂಡೂಲ್ಕರ್ ಇದ್ದಾರೆ.

ಆದರೆ, ನಂತರದ ಆಯ್ಕೆ ಕುತೂಹಲಕಾರಿಯಾಗಿದೆ. ತಮ್ಮ ಗೆಳೆಯರಾದ ಅಲಾನ್ ಬಾರ್ಡರ್, ಸರ್ ಇಯಾನ್ ಬೋಥಮ್ ರನ್ನು ಸೇರಿಕೊಂಡಿದ್ದು, ವಿಕೆಟ್ ಕೀಪರ್ ಆಗಿ ಇಂಗ್ಲೆಂಡಿನ ಅಲಾನ್ ನಾಟ್ ಅವರನ್ನು ಸೇರಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಒಟ್ಟಾರೆ, ಮೂವರು ಇಂಗ್ಲೆಂಡಿನವರು, ಮೂರು ಆಸ್ಟ್ರೇಲಿಯನ್ನರು, ಇಬ್ಬರು ವೆಸ್ಟ್ ಇಂಡೀಸ್ ನವರು, ಭಾರತ, ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನದಿಂದ ಒಬ್ಬರನ್ನು ಆಯ್ಕೆ ಮಾಡಿದ್ದಾರೆ.

ಗ್ರಹಾಂ ಗೂಚ್ ಅವರ ಆಯ್ಕೆಯ XI : ಬ್ಯಾರಿ ರಿಚರ್ಡ್ಸ್ (ದಕ್ಷಿಣ ಆಫ್ರಿಕಾ), ಜೆಫ್ರಿ ಬಾಯ್ಕಾಟ್( ಇಂಗ್ಲೆಂಡ್), ಸರ್ ವಿವಿಯನ್ ರಿಚರ್ಡ್ಸ್ (ವೆಸ್ಟ್ ಇಂಡೀಸ್), ಸಚಿನ್ ತೆಂಡೂಲ್ಕರ್ (ಭಾರತ), ಅಲಾನ್ ಬಾರ್ಡರ್ (ಆಸ್ಟ್ರೇಲಿಯಾ), ಸರ್ ಇಯಾನ್ ಬೋಥಮ್(ಇಂಗ್ಲೆಂಡ್), ಅಲಾನ್ ನಾಟ್ (ವಿಕೆಟ್ ಕೀಪರ್, ಇಂಗ್ಲೆಂಡ್), ಶೇನ್ ವಾರ್ನ್ (ಆಸ್ಟ್ರೇಲಿಯಾ), ವಾಸೀಂ ಅಕ್ರಂ (ಪಾಕಿಸ್ತಾನ), ಮಾಲ್ಕಮ್ ಮಾರ್ಷಮ್ (ವೆಸ್ಟ್ ಇಂಡೀಸ್) ಹಾಗೂ ಡೆನ್ನಿಸ್ ಲಿಲ್ಲಿ (ಆಸ್ಟ್ರೇಲಿಯಾ).

Story first published: Wednesday, August 29, 2018, 17:27 [IST]
Other articles published on Aug 29, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+