Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

GT vs CSK: ಟಾಪ್‌ ಪ್ರದರ್ಶನ ಮುಂದೆವರಿಸುವ ವಿಶ್ವಾಸದಲ್ಲಿ ಟೈಟಾನ್ಸ್‌

ಇಂಡಿಯನ್ ಪ್ರೀಮಿಯರ್ ಲೀಗ್‌ನ ಲೀಗ್‌ ಹಂತ ಕೊನೆಯ ಹಂತಕ್ಕೆ ಬಂದು ನಿಂತಿದೆ. ಭಾನುವಾರ ನಡೆಯುವ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌ ಹಾಗೂ ಸಿಎಸ್‌ಕೆ ತಂಡಗಳು ಕಾದಾಟ ನಡೆಸಲಿವೆ. ಗುಜರಾತ್‌ ಅಗ್ರ ಎರೆಡು ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದರೆ, ಸಿಎಸ್‌ಕೆ ಪ್ರತಿಷ್ಠೆಗಾಗಿ ಹೋರಾಟ ನಡೆಸಲಿದೆ. ಗುಜರಾತ್‌ ತಂಡ ಬಲಿಷ್ಠವಾಗಿದ್ದು, ಮತ್ತೊಂದು ಗೆಲುವಿನ ಕನಸು ಕಾಣುತ್ತಿದೆ.

ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಚೆನ್ನೈ ಬಲಿಷ್ಠವಾಗಿದೆ. ಸದ್ಯದ ಪರ್ಫಾಮೆನ್ಸ್‌ ಗುರಜಾತ್ ತಂಡ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಎಂದು ತೋರಿಸುತ್ತದೆ. ಆದರೆ ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಲೀಗ್‌ಗೆ ಜಯದ ವಿದಾಯ ಹೇಳುವ ಪ್ಲ್ಯಾನ್‌ ಮಾಡಿಕೊಂಡಿದೆ. ಈ ಅಂಗಳದಲ್ಲಿ ಮೊದಲು ಬ್ಯಾಟ್ ಮಾಡುವ ತಂಡ ಗೆಲುವು ಸಾಧಿಸುವ ಸಾಧ್ಯತೆ ಇದೆ. ಗುಜರಾತ್‌ ಆಡಿದ 13 ಪಂದ್ಯಗಳಲ್ಲಿ 18 ಅಂಕವನ್ನು ಕಲೆ ಹಾಕಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಅಂಕ ಪಟ್ಟಿಯಲ್ಲಿ ಮೊದಲೆರೆಡು ಸ್ಥಾನವನ್ನು ಭಧ್ರ ಪಡಿಸಿಕೊಳ್ಳಲು ಕಾದಾಟ ನಡೆಸಲಿದೆ.

Gujarat Titans Eye Top-Two Finish as They Face CSK in Final League Clash

ಯಂಗ್‌ ಟೀಮ್

ಗುಜರಾತ್‌ ಟೈಟಾನ್ಸ್‌ ತಂಡದ ಬ್ಯಾಟಿಂಗ್‌ಗೆ ಯುವ ಬ್ಯಾಟರ್‌ಗಳೇ ಆಧಾರ. ಗುಜರಾತ್ ಟೈಟಾನ್ಸ್ ತಂಡದ ಪರ ಇನಿಂಗ್ಸ್ ಆರಂಭಿಸುವ ಶುಭಮನ್‌ ಗಿಲ್ ಹಾಗೂ ಸಾಯಿ ಸುದರ್ಶನ್‌ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರಿಬ್ಬರೂ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವ ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್‌ ಬಿಗ್ ಇನಿಂಗ್ಸ್‌ ಕಟ್ಟುವ ಕನಸು ಕಾಣುತ್ತಿದ್ದಾರೆ. ಶೆರ್ಫೇನ್ ರುದರ್ಫೋರ್ಡ್, ಶಾರುಖ್‌ ಖಾನ್‌, ರಾಹುಲ್ ತೆವಾಟಿಯಾ ಸ್ಥಿರ ಪ್ರದರ್ಶನವನ್ನು ನೀಡಿ ತಂಡಕ್ಕೆ ನೆರವಾಗಬೇಕಿದೆ.

Gujarat Titans Eye Top-Two Finish as They Face CSK in Final League Clash

ಟೈಟಾನ್ಸ್ ತಂಡದ ಬೌಲಿಂಗ್ ಸಹ ಉತ್ತಮವಾಗಿದೆ. ಗುಜರಾತ್ ತಂಡದ ಪರ ಹೊಸ ಚೆಂಡಿನೊಂದಿಗೆ ಅರ್ಷದ್ ಖಾನ್, ಮೊಹಮ್ಮದ್ ಸಿರಾಜ್‌ ಕಾಣಿಸಿಕೊಳ್ಳಲಿದ್ದಾರೆ. ಮಿಡ್ಲ್ ಆರ್ಡರ್‌ನಲ್ಲಿ ಕಗಿಸೋ ರಬಾಡ, ಪ್ರಸಿದ್ಧ್ ಕೃಷ್ಣಾ ಬಿಗುವಿನ ದಾಳಿ ನಡೆಸಿ ವಿಕೆಟ್‌ ಕಬಳಿಸಿದರು. ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಸಾಯಿ ಕಿಶೋರ್, ರಾಶಿದ್ ಖಾನ್‌ ತಮ್ಮ ಪಿರ್ಕಿ ಮ್ಯಾಜಿಕ್ ನಡೆಸಬೇಕಿದೆ.

ಗೆಲುವಿನ ವಿದಾಯ

ಚೆನ್ನೈ ಸೂಪರ್‌ ಕಿಂಗ್ಸ್ ಐಪಿಎಲ್‌ನಲ್ಲಿ ಐದು ಬಾರಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಆದರೆ ಈ ಬಾರಿ ಲೀಗ್‌ನಲ್ಲಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಚೆನ್ನೈ ತಂಡದ ಪರ ಆಯುಷ್ ಮಾತ್ರೆ, ಶೇಕ್ ರಶೀದ್ ಬಿಗ್ ಇನಿಂಗ್ಸ್‌ ಕಟ್ಟುವ ಅವಶ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಉರ್ವಿಲ್‌ ಪಟೇಲ್‌, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್‌, ಶಿವಂ ದುಬೆ ಮಧ್ಯಮ ಕ್ರಮಾಂಕದಲ್ಲಿ ರನ್‌ ವೇಗಕ್ಕೆ ಚುರುಕು ಮುಟ್ಟಿಸುವ ಅನಿವಾರ್ಯತೆ ಇದೆ. ಚೆನ್ನೈ ತಂಡದ ಪರ ವೇಗದ ಬೌಲರ್‌ಗಳು ಹಾಗೂ ಸ್ಪಿನ್ ಬೌಲರ್‌ಗಳು ಶಿಸ್ತು ಬದ್‌ಧ ದಾಳಿಯ ನಡೆಸಬೇಕಿದೆ.

Story first published: Saturday, May 24, 2025, 22:45 [IST]
Other articles published on May 24, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+