ದೀಪಾವಳಿ ಸಂಭ್ರಮ: ಬೆಳಕಿನ ಹಬ್ಬಕ್ಕೆ ಶುಭಕೋರಿದ ಕ್ರೀಡಾತಾರೆಯರು

ದೇಶದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದೆ. ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕ್ರೀಡಾಲೋಕದ ತಾರೆಯರು ಕೂಡ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದು ಅಭಿಮಾನಿಗಳಿಗೆ ಹಾಗೂ ದೇಶದ ಜನರಿಗೆ ಶುಭ ಕೋರಿದ್ದಾರೆ.
ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಪಿವಿ ಸಿಂಧು, ಸೈನಾ ನೆಹ್ವಾಲ್ ಸಾನಿಯಾ ಮಿರ್ಜಾ, ಪಂಕಜ್ ಅಡ್ವಾಣಿ ಸೇರಿದಂತೆ ಅನೇಕ ಕ್ರೀಡಾತಾರೆಯರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಕೋರಿದ್ದಾರೆ. ಸಚಿನ್ ತೆಂಡೂಲ್ಕರ್ ಹಾಗೂ ಸೈನಾ ನೆಹ್ವಾನ್ ತಮ್ಮ ಹಬ್ಬದ ಸಂಭ್ರಮದ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಸೈನಾ ನೆಹ್ವಾಲ್ ಇಬ್ಬರೂ ತವರಿನಿಂದ ಬಹಳ ದೂರದಲ್ಲಿದ್ದಾರೆ. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ದದ ಸರಣಿಗಾಗಿ ಆಸಿಸ್ ನೆಲದಲ್ಲಿದ್ದರೆ ಸೈನಾ ನೆಹ್ವಾಲ್ ಸದ್ಯ ಲಂಡನ್‌ನಲ್ಲಿದ್ದಾರೆ. ಈ ಇಬ್ಬರೂ ತಮ್ಮ ಶುಭಾಶಯಗಳನ್ನು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಶನಿವಾರದಂದಿಂದ ದೀಪಾವಳಿ ಹಬ್ಬ ಶುಭಾಶಗಳ ಮಹಾಪೂರವೇ ಹರಿದು ಬಂದಿದೆ. ಸಚಿನ್ ತೆಂಡೂಲ್ಕರ್ ತಮ್ಮ ನಿವಾಸದಲ್ಲಿ ದೀಪಗಳನ್ನು ಹಚ್ಚಿ ಸಂಭ್ರಮಿಸಿದ್ದಾರೆ. ಇದರ ಜೊತೆಗೆ ಶುಭಾಶಯ ಕೋರಿದ್ದು"ನೀವು ಇನ್ನೊಬ್ಬರ ಬದುಕಿನಲ್ಲಿ ಬೆಳಕು ಹಾಗೂ ಖುಷಿಗೆ ಕಾರಣವಾಗಬಹುದು ಎಂದಿದ್ದಾರೆ.
ವಿರಾಟ್ ಕೊಹ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಶುಭಾಶಯ ಕೋರುವ ಜೊತೆಗೆ ಪಟಾಕಿ ಹಚ್ಚದಂತೆ ಮನವಿ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications