ಟೆಸ್ಟ್ ವಿಕೆಟ್ : ವಾಸೀಂ ಅಕ್ರಂ ಹಿಂದಿಕ್ಕಿದ ಹರ್ಭಜನ್ ಸಿಂಗ್
ಫಾತುಲ್ಲಾ(ಬಾಂಗ್ಲಾದೇಶ), ಜೂ.14: ಅತಿಥೇಯ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಹಾಗೂ ಹರ್ಭಜನ್ ಸಿಂಗ್ ಉತ್ತಮ ಬೌಲಿಂಗ ಪ್ರದರ್ಶನ ನೀಡಿದ್ದಾರೆ. ಎರಡು ವರ್ಷಗಳ ನಂತರ ಟೆಸ್ಟ್ ತಂಡಕ್ಕೆ ಮರಳಿದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಈ ಪಂದ್ಯದಲ್ಲಿ ಹೊಸ ವೈಯಕ್ತಿಕ ಮೈಲಿಗಲ್ಲು ದಾಟಿದ್ದಾರೆ.
ಪಾಕಿಸ್ತಾನ ಮಾಜಿ ವೇಗಿ ವಾಸೀಂ ಅಕ್ರಂ ಅವರ ದಾಖಲೆಯನ್ನು ಹಿಂದಿಕ್ಕಿರುವ ಹರ್ಭಜನ್ ಸಿಂಗ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 415 ವಿಕೆಟ್ ಪಡೆದ ದಾಖಲೆ ಸರಿಗಟ್ಟಿದರು. ಐದನೇ ದಿನವಾದ ಇಂದು ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್ ನಲ್ಲಿ ಪ್ರಮುಖ ಬ್ಯಾಟ್ಸ್ ಮನ್ ಇಮ್ರುಲ್ ಕೆಯಸ್ ಅವರನ್ನು ವೃದ್ಧಿಮಾನ್ ಸಹಾ ಸ್ಪಂಪ್ ಔಟ್ ಮಾಡುತ್ತಿದ್ದಂತೆ ಭಜ್ಜಿ ಸಾಧನೆ ಮಾಡಿದರು.
| ಚಿತ್ರಗಳು | ಪಂದ್ಯದ 5ನೇ ದಿನದ ವರದಿ
ಖಾನ್ ಶಾಹೆಬ್ ಓಸ್ಮಾನ್ ಅಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿದೆ. ಒಟ್ಟು 3 ವಿಕೆಟ್ ಕಿತ್ತ ಹರ್ಭಜನ್ ಸಿಂಗ್ ಅವರು ಈಗ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಗಳ ಪೈಕಿ 9 ನೇ ಸ್ಥಾನದಲ್ಲಿದ್ದಾರೆ.

ಮಳೆಯ ಕಾಟದ ನಡುವೆ ಭಾನುವಾರ (ಜೂ.13) ನಡೆದ ಟೆಸ್ಟ್ ಪಂದ್ಯದಲ್ಲಿ ಮೊಮಿನುಲ್ ಹಕ್ ವಿಕೆಟ್ ಕಿತ್ತು ಅಕ್ರಂ ದಾಖಲೆ ಸಮಗಟ್ಟಿದ್ದರು. ಆರ್ ಅಶ್ವಿನ್ 5 ವಿಕೆಟ್ ಪಡೆದರೆ, ಭಜ್ಜಿ 3 ವಿಕೆಟ್ ಕಿತ್ತರು ಬಾಂಗ್ಲಾದೇಶ 256ಕ್ಕೆ ಆಲೌಟ್ ಆಗಿ ಫಾಲೋ ಆನ್ ಪಡೆಯಿತು. ಕೊನೆಗೂ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿತು.
34 ವರ್ಷ ವಯಸ್ಸಿನ ಹರ್ಭಜನ್ ಅವರು 1998ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯವಾಡಿದರು. ಇದಲ್ಲದೆ 229 ಏಕದಿನ ಪಂದ್ಯ ಹಾಗೂ 25 ಟಿ20 ಪಂದ್ಯಗಳನ್ನಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications