Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದ.ಆಫ್ರಿಕಾ ವಿರುದ್ಧ ಟಿ20 ಸರಣಿ ಮಿಸ್ ಮಾಡಿಕೊಂಡ ಕೆ.ಎಲ್ ರಾಹುಲ್: ಒಪ್ಪಿಕೊಳ್ಳುವುದು ಕಷ್ಟಸಾಧ್ಯ ಎಂದ ಕನ್ನಡಿಗ

KL RAHUL

ಪಂದ್ಯ ಪೂರ್ವ ಪತ್ರಿಕಾಗೋಷ್ಠಿಗೆ ಕೆಲ ನಿಮಿಷಗಳು ಬಾಕಿ ಇರುವಂತೆ ಟೀಂ ಇಂಡಿಯಾದಿಂದ ಗಾಯಗೊಂಡು ಹೊರಬಿದ್ದ ಕನ್ನಡಿಗ ಕೆ.ಎಲ್ ರಾಹುಲ್‌ ಅತ್ಯಂತ ಬೇಸರದಿಂದ ಟ್ವೀಟ್ ಮಾಡಿದ್ದಾರೆ. ಕೊಹ್ಲಿ, ರೋಹಿತ್ ಅನುಪಸ್ಥಿತಿಯಲ್ಲಿ ತವರಿನಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸುವ ಮಹಾದಾಸೆ ಹೊತ್ತಿದ್ದ ರಾಹುಲ್‌ ಇಡೀ ಟಿ20 ಸರಣಿಯಿಂದಲೇ ಹೊರಬಿದ್ದಿರುವುದು ವಿಪರ್ಯಾಸ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಗುರುವಾರ(ಜೂ. 09) ಮೊದಲ ಟಿ20 ಪಂದ್ಯ ನಡೆಯಲಿದ್ದು, ಐದು ಪಂದ್ಯಗಳ ಟಿ20 ಸರಣಿಗೆ ಚಾಲನೆ ಸಿಗಲಿದೆ. ಎಲ್ಲವೂ ಸರಿ ಇದ್ದಿದ್ರೆ ಗುರುವಾರ ರಾಹುಲ್ ತಂಡವನ್ನ ಮುನ್ನಡೆಸಬೇಕಾಗಿತ್ತು. ಆದ್ರೆ ತೊಡೆಸಂದು ನೋವಿನಿಂದ ರಾಹುಲ್ ದಕ್ಷಿಣ ಆಫ್ರಿಕಾ ಟಿ20 ಸರಣಿಯಿಂದ ಹೊರಬಿದ್ದಿದ್ದು ಒಂದು ಅದ್ಭುತ ಅವಕಾಶವನ್ನ ಮಿಸ್ ಮಾಡಿಕೊಂಡಿದ್ದಾರೆ.

ತವರಿನಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಮುನ್ನಡೆಸುವ ಅವಕಾಶವಿತ್ತು!

ತವರಿನಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಮುನ್ನಡೆಸುವ ಅವಕಾಶವಿತ್ತು!

ಕೆ.ಎಲ್ ರಾಹುಲ್ ಈ ಹಿಂದೆ ಇಂಗ್ಲೆಂಡ್‌ನಲ್ಲಿ ಕೊಹ್ಲಿ ಹಾಗೂ ರೋಹಿತ್ ಅನುಪಸ್ಥಿತಿಯಲ್ಲಿ ಟೆಸ್ಟ್ ತಂಡವನ್ನ ಮುನ್ನಡೆಸಿದ್ರು. ಆದ್ರೆ ಇದೇ ಮೊದಲ ಬಾರಿಗೆ ತವರಿನಲ್ಲಿ ಭಾರತ ತಂಡವನ್ನ ಮುನ್ನಡೆಸುವ ಸುವರ್ಣಾವಕಾಶ ಎದುರಿಗಿತ್ತು. ಏಕೆಂದರೆ ಈ ಸರಣಿಯಲ್ಲಿ ಪೂರ್ಣ ಪ್ರಮಾಣದ ನಾಯಕ ರೋಹಿತ್ ಹಾಗೂ ಮಾಜಿ ನಾಯಕ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.

ಹೀಗಾಗಿ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನ ಗೆಲ್ಲಿಸಿ, ಭವಿಷ್ಯದ ನಾಯಕನಾಗುವ ಹೆಜ್ಜೆ ಇಡಬೇಕಾಗಿತ್ತು. ಆದ್ರೆ ದುರದೃಷ್ಟವಶಾತ್‌ ರಾಹುಲ್‌ಗೆ ಆ ಅದೃಷ್ಟ ಒಲಿದು ಬರಲಿಲ್ಲ. ಪಂದ್ಯಕ್ಕೂ ಮೊದಲೇ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಜೊತೆಗೆ ತಂಡಕ್ಕೆ ಕಂಬ್ಯಾಕ್ ಕನಸು ಕಾಣುತ್ತಿದ್ದ ಚೈನಾಮೆನ್ ಸ್ಪಿನ್ನರ್ ಕುಲ್‌ದೀಪ್ ಯಾದವ್ ಕೂಡ ಗಾಯಗೊಂಡು ಭಾರೀ ನಿರಾಸೆ ಅನುಭವಿಸಿದ್ದಾರೆ.

ಬೇಸರದಿಂದ ಟ್ವೀಟ್ ಮಾಡಿದ ಕೆ.ಎಲ್ ರಾಹುಲ್

ತಾನು ಟೀಂ ಇಂಡಿಯಾವನ್ನ ಮುನ್ನಡೆಸುತ್ತಿಲ್ಲ ಎಂದು ಖಚಿತವಾದ ಬಳಿಕ ಕೆ.ಎಲ್ ರಾಹುಲ್ ಸಾಕಷ್ಟು ನೊಂದಿದ್ದಾರೆ. ಟೀಂ ಇಂಡಿಯಾವನ್ನ ಮುನ್ನಡೆಸುವ ಅದ್ಭುತ ಅವಕಾಶ ಕೈ ತಪ್ಪಿತಲ್ಲ ಎಂದು ಪರಿತಪಿಸಿದ್ದಾರೆ. ಹೀಗಾಗಿ ಬುಧವಾರ ರಾತ್ರಿ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಬೇಸರದಿಂದ ಟ್ವೀಟ್ ಮಾಡಿದ್ದಾರೆ.

"ನಿಜ್ಕಕೂ ಒಪ್ಪಿಕೊಳ್ಳುವುದು ಕಷ್ಟ ಆದರೆ ನಾನು ಇಂದು ಮತ್ತೊಂದು ಸವಾಲನ್ನು ಪ್ರಾರಂಭಿಸುತ್ತೇನೆ. ತವರಿನಲ್ಲಿ ಮೊದಲ ಬಾರಿಗೆ ತಂಡವನ್ನು ಮುನ್ನಡೆಸುತ್ತಿಲ್ಲ ಎಂಬ ಬೇಸರವಿದೆ, ಆದರೆ ಹುಡುಗರಿಗೆ ನನ್ನ ಬೆಂಬಲವಿದೆ. ನಿಮ್ಮ ಬೆಂಬಲಕ್ಕಾಗಿ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ರಿಷಭ್ ಮತ್ತು ತಂಡದ ಸದಸ್ಯರಿಗೆ ಸರಣಿಗಾಗಿ ಶುಭ ಹಾರೈಸುತ್ತೇನೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇವೆ, "ಎಂದು ರಾಹುಲ್‌ ಟ್ವೀಟ್‌ನಲ್ಲಿ ಬರೆದಿದ್ದಾರೆ.

Ind vs SA: ಅಂತಿಮ ಕ್ಷಣದಲ್ಲಿ ಪ್ರಮುಖ ಬದಲಾವಣೆ: ಗೊಂದಲಮಯವಾಗಿದೆ ಭಾರತದ ಆಡುವ ಬಳಗ!

ಕೆ.ಎಲ್ ರಾಹುಲ್ ಜೊತೆಗೆ ಹೊರಬಿದ್ದ ಕುಲ್‌ದೀಪ್ ಯಾದವ್

ಕಳಪೆ ಫಾರ್ಮ್‌ನಿಂದಾಗಿ ತಂಡದಿಂದ ಹೊರಬಿದ್ದಿದ್ದ ಕುಲ್‌ದೀಪ್ ಯಾದವ್ ಐಪಿಎಲ್ 2022ರ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾಕ್ಕೆ ಮತ್ತೆ ಕಂಬ್ಯಾಕ್ ಮಾಡಿದ್ದರು. ಆದ್ರೆ ರಾಹುಲ್ ಜೊತೆಗೆ ಕುಲ್‌ದೀಪ್ ಕೂಡ ಗಾಯಗೊಂಡು ಟಿ20 ಸರಣಿಯಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ.

ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ವೇಳೆಯಲ್ಲಿ ಕುಲ್‌ದೀಪ್‌ ಬಲಗೈಗೆ ಚೆಂಡು ಬಡಿದ ಪರಿಣಾಮ ಗಾಯಗೊಂಡು ಪೂರ್ಣ ಟಿ20 ಸರಣಿಗೆ ಅಲಭ್ಯರಾಗಿದ್ದಾರೆ. ಇನ್ನು ಈ ಇಬ್ಬರು ಕ್ರಿಕೆಟಿಗರು ಬೆಂಗಳೂರಿನ ಎನ್‌ಸಿಎ ಅಕಾಡೆಮಿಗೆ ಬರಲಿದ್ದು, ಗಾಯದಿಂದ ಚೇತರಿಸಿಕೊಳ್ಳಲಿದ್ದಾರೆ.

IND vs SA: ಟಿ20 ಮುಖಾಮುಖಿಯಲ್ಲಿ ಹೆಚ್ಚು ವಿಕೆಟ್ ಪಡೆದ 5 ಬೌಲರ್‌ಗಳ ಪಟ್ಟಿ; ಯಾವ ತಂಡ ಟಾಪ್?

Kl Rahul OUT.... ಪಂತ್ & ಪಾಂಡ್ಯಾಗೆ ಹೊಡೀತು ಲಕ್!!! | *Cricket | OneIndia Kannada
ರಾಹುಲ್‌ ಇಂಜ್ಯುರಿ, ಪಂತ್‌ಗೆ ಒಲಿದು ಬಂದ ಅದೃಷ್ಟ

ರಾಹುಲ್‌ ಇಂಜ್ಯುರಿ, ಪಂತ್‌ಗೆ ಒಲಿದು ಬಂದ ಅದೃಷ್ಟ

ಅದೃಷ್ಟ ಅಂದ್ರೆ ಹೀಗಿರಬೇಕು, ರಾತ್ರೋ ರಾತ್ರಿ ಸ್ಟಾರ್ ಆಗಿಬಿಟ್ಟರು ಅನ್ನೋ ಹಾಗೆ ರಿಷಭ್ ಪಂತ್ ದಿಢೀರ್ ಎಂದು ಟೀಂ ಇಂಡಿಯಾ ಚುಕ್ಕಾಣಿ ಹಿಡಿಯುವ ಅವಕಾಶ ಪಡೆದಿದ್ದಾರೆ. ನಿನ್ನೆ ನಡೆದ ಪತ್ರಿಕಾಗೋಷ್ಠಿಯ ಕೆಲವೇ ನಿಮಿಷಗಳ ಹಿಂದಷ್ಟೇ ಈತನಿಗೆ ನಾಯಕನಾಗಿ ಆಯ್ಕೆಯಾಗಿರುವ ಕುರಿತು ಹೇಳಲಾಗಿದೆ. ಇದನ್ನ ಸ್ವತಃ ಪತ್ರಿಕಾಗೋಷ್ಠಿಯಲ್ಲಿ ಪಂತ್ ತಿಳಿಸಿದ್ರು.

"ನನಗೆ ಅದನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ಗಂಟೆಯ ಹಿಂದೆ ನನಗೆ ಗೊತ್ತಾಯಿತು" ಎಂದು ಪಂತ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ನಗುತ್ತಾ ಹೇಳಿದರು.

"ಇದು ತುಂಬಾ ಒಳ್ಳೆಯ ಭಾವನೆ, ಆದ್ರೆ ತುಂಬಾ ಒಳ್ಳೆಯ ಸಂದರ್ಭಗಳಲ್ಲಿ ಬಂದಿಲ್ಲ. ಆದ್ರೂ ಕೂಡ ಅದೇ ಸಮಯದಲ್ಲಿ ನನಗೆ ಸಂತೋಷವಾಗಿದೆ. ಭಾರತ ತಂಡವನ್ನು ಮುನ್ನಡೆಸಲು ನನಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ನಾನು ಬಿಸಿಸಿಐಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಕ್ರಿಕೆಟ್ ವೃತ್ತಿಜೀವನದ ಏರಿಳಿತದ ನನ್ನ ಪ್ರಯಾಣದಲ್ಲಿ ನನ್ನನ್ನು ಬೆಂಬಲಿಸಿದ್ದಕ್ಕಾಗಿ ಎಲ್ಲಾ ಹಿತೈಷಿಗಳಿಗೆ ಧನ್ಯವಾದಗಳು'' ಎಂದು ರಿಷಭ್ ಪಂತ್ ಹೇಳಿದ್ದಾರೆ.

ಒಟ್ಟಿನಲ್ಲಿ ಕೆ.ಎಲ್ ರಾಹುಲ್‌ಗೆ ಇಂಜ್ಯುರಿ ಪದೇ ಪದೇ ಕಾಡುತ್ತಿರುವುದು ನಿಜಕ್ಕೂ ಹಿನ್ನಡೆಯಾಗಿದೆ. ಐಪಿಎಲ್‌ 2022ರ ಟೂರ್ನಿಗೂ ಮೊದಲು ಹ್ಯಾಮ್‌ಸ್ಟ್ರಿಂಗ್‌ನಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಮಿಸ್ ಆಗಿದ್ದರು. ಇದೀಗ ಐಪಿಎಲ್ ಬಳಿಕ ಮತ್ತೊಂದು ಅಂತರಾಷ್ಟ್ರೀಯ ಕ್ರಿಕೆಟ್ ಸರಣಿಯಲ್ಲಿ ಆಡುವ ಅವಕಾಶ ವಂಚಿತರಾಗಿದ್ದಾರೆ.

Story first published: Thursday, June 9, 2022, 17:35 [IST]
Other articles published on Jun 9, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+