Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಕಾಫೀ ವಿತ್ ಕರಣ್ ವಿವಾದದ ಬಳಿಕ ಹಾರ್ದಿಕ್ ಉತ್ತಮ ಕ್ರಿಕೆಟರ್ ಆಗಿದ್ದಾರೆ'

Hardik Pandya has become a better cricketer after ‘Koffee’ controversy, says Krunal

ಮುಂಬೈ, ಏಪ್ರಿಲ್ 19: ಕಾಫೀ ವಿತ್ ಕರಣ್ ವಿವಾದದಿಂದ ಕೊಂಚ ಕಾಲ ಕ್ರಿಕೆಟ್‌ನಿಂದ ಅಮಾನತಾಗಿದ್ದು ಕಿರಿಯ ಸಹೋದರ ಹಾರ್ದಿಕ್ ಪಾಂಡ್ಯ ಅವರನ್ನು ಈಗ ಉತ್ತಮ ಕ್ರಿಕೆಟರನ್ನಾಗಿಸಿದೆ ಎಂದು ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಕೃನಾಲ್ ಪಾಂಡ್ಯ ಹೇಳಿದ್ದಾರೆ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಬೆನ್ನುನೋವಿನಿಂದ ಚೇತರಿಸಿಕೊಂಡ ಬಳಿಕ ಹಾರ್ದಿಕ್ ಪಾಂಡ್ಯ, ಬಾಲಿವುಡ್ ನಟ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಜನಪ್ರಿಯ ಟಿವಿ ಟಾಕ್ ಶೋ 'ಕಾಫೀ ವಿತ್ ಕರಣ್‌ನಲ್ಲಿ ಪಾಲ್ಗೊಂಡು ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೊಳಗಾಗಿದ್ದರು. ಇದಕ್ಕಾಗಿ ಬಿಸಿಸಿಐ, ಹಾರ್ದಿಕ್ ಮತ್ತು ಕೆಎಲ್ ರಾಹುಲ್‌ಗೆ ಟೂರ್ನಿಯೊಂದರಿಂದ ಅಮಾನತು ಶಿಕ್ಷೆಯನ್ನೂ ವಿಧಿಸಿತ್ತು.

'ಗಾಯ ಮತ್ತು ವಿವಾದದ ಕಾರಣದಿಂದಾಗಿ ಆಟದಿಂದ ದೂರ ಉಳಿಯಬೇಕಾಗಿದ್ದರಿಂದ ಮತ್ತೆ ಫಿಟ್ನೆಸ್ ಕಾಯ್ದುಕೊಳ್ಳುವುದಕ್ಕಾಗಿ ಪಾಂಡ್ಯ ಸಾಕಷ್ಟು ಶ್ರಮ ವಹಿಸಬೇಕಾಗಿತ್ತು. ಆದರೆ ಪಾಂಡ್ಯ, ಕ್ರಿಕೆಟ್‌ಗೆ ಮೊದಲ ಆದ್ಯತೆ ನೀಡುತ್ತಾನೆ ಅನ್ನೋದನ್ನು ನಾನಿಲ್ಲಿ ಹೇಳಲೇಬೇಕು. ಇದೇ ಆತನನ್ನು ಈಗ ಉತ್ತಮ ಕ್ರಿಕೆಟರ್ ಅನ್ನಿಸುವಂತೆ ಮಾಡಿದೆ' ಎಂದು ಕೃನಾಲ್ ಹೇಳಿಕೊಂಡಿದ್ದಾರೆ.

'ನಿಜವಾಗಿ ಹೇಳಬೇಕೆಂದರೆ ಪಾಂಡ್ಯನಂತೆ ಕೆಲಸದ ನಿಷ್ಠೆ ಕೆಲವೇ ಕೆಲವು ಆಟಗಾರರು ಮಾತ್ರ ಹೊಂದಿರುತ್ತಾರೆ. ಆಟದಲ್ಲಿ ಸುಧಾರಣೆ ಕಾಣುವುದೇ ಆತನ ಗುರಿ. ನೀವೂ ಇದೇ ಗುರಿಯನ್ನು ಹೊಂದಿದ್ದರೆ, ನೀವೂ ಕ್ರಿಕೆಟ್‌ನಲ್ಲಿ ಸ್ಥಿರವಾಗಿ ನಿಲ್ಲಬಲ್ಲಿರಿ' ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದೆದುರು ಮುಂಬೈ ಇಂಡಿಯನ್ಸ್ 40 ರನ್ ಜಯ ಸಾಧಿಸಿದ ಬಳಿಕ ಮಾತನಾಡುತ್ತ ಕೃನಾಲ್ ಅಭಿಪ್ರಾಯ ಹಂಚಿಕೊಂಡರು.

Story first published: Friday, April 19, 2019, 15:57 [IST]
Other articles published on Apr 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+