ಜಸ್ಪ್ರೀತ್ ಬುಮ್ರಾ ಬೌಲಿಂಗ್ ಆ್ಯಕ್ಷನ್ ಅನುಕರಿಸಿದ ಹಾರ್ದಿಕ್ ಪಾಂಡ್ಯ: ಬುಮ್ರಾ ಪ್ರತಿಕ್ರಿಯೆ

ಭಾರತದ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಹಾರ್ದಿಕ್ ಪಾಂಡ್ಯ ಏಷ್ಯಾಕಪ್‌ಗೆ ತಯಾರಿ ನಡೆಸುತ್ತಿದ್ದಾರೆ. ಜಿಂಬಾಬ್ವೆ ಪ್ರವಾಸದ ವೇಳೆ ಹಾರ್ದಿಕ್‌ಗೆ ವಿಶ್ರಾಂತಿ ನೀಡಲಾಗಿತ್ತು. ಹಲವು ದಿನಗಳ ಕಾಲ ವಿಶ್ರಾಂತಿ ಪಡೆದ ಈ ಸ್ಟಾರ್ ಆಲ್ ರೌಂಡರ್ ಏಷ್ಯಾಕಪ್ ಗೂ ಮುನ್ನ ತಯಾರಿ ಆರಂಭಿಸಿದ್ದಾರೆ.
ಆಗಸ್ಟ್ 27ರಿಂದ ಆರಂಭಗೊಳ್ಳಲಿರುವ ಏಷ್ಯಾಕಪ್ ಟೂರ್ನಮೆಂಟ್‌ಗೆ ಈಗಾಗಲೇ ಎಲ್ಲಾ ತಂಡಗಳು ಸಿದ್ಧಗೊಂಡಿವೆ. ಅದೇ ರೀತಿಯಲ್ಲಿ ಭಾರತ ಕೂಡ 16 ಸದಸ್ಯರ ಆಟಗಾರರನ್ನ ಆಯ್ಕೆಮಾಡಿದ್ದು, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಇದರಲ್ಲಿ ಒಬ್ಬರಾಗಿದ್ದಾರೆ. ತಂಡವನ್ನ ತನ್ನ ಆಲ್‌ರೌಂಡರ್ ಸಾಮರ್ಥ್ಯದ ಮೂಲಕ ಬ್ಯಾಲೆನ್ಸ್ ಮಾಡಿರುವ ಪಾಂಡ್ಯ ಟೀಂ ಇಂಡಿಯಾದ ಪ್ರಮುಖ ಆಟಗಾರನಾಗಿದ್ದಾರೆ.

ಜಿಂಬಾಬ್ವೆ ಸರಣಿಯಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ
ಇತರ ಹಿರಿಯ ಕ್ರಿಕೆಟಿಗರಂತೆ ಹಾರ್ದಿಕ್ ಪಾಂಡ್ಯ ಕೂಡ ಇತ್ತೀಚೆಗೆ ಮುಕ್ತಾಯಗೊಂಡ ಜಿಂಬಾಬ್ವೆ ಪ್ರವಾಸದಿಂದ ವಿಶ್ರಾಂತಿ ಪಡೆದಿದ್ದಾರೆ. ಟಿ20 ವಿಶ್ವಕಪ್‌ಗೂ ಮುನ್ನ ನಡೆಯಲಿರುವ ಏಷ್ಯಾಕಪ್‌ಗೆ ಪ್ರಮುಖ ಆಟಗಾರರು ಫಿಟ್ ಆಗಿರಲು ಆಯ್ಕೆ ಸಮಿತಿಯು ಕೆಲವರಿಗೆ ವಿಶ್ರಾಂತಿ ನೀಡಿತ್ತು.
ಏಷ್ಯಾ ಕಪ್ ಆರಂಭವಾಗಲು ಹೆಚ್ಚು ಸಮಯವಿಲ್ಲ. ಅದಕ್ಕೂ ಮುನ್ನ ಹಾರ್ದಿಕ್ ಅಭ್ಯಾಸಕ್ಕೆ ಮರಳಿದ್ದರು. ಹಾರ್ದಿಕ್ ತನ್ನ ಮನೆಯ ಒಳಾಂಗಣ ವಿಭಾಗದಲ್ಲಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿರುವುದನ್ನು ಕಾಣಬಹುದು.
ಬುಮ್ರಾ ಬೌಲಿಂಗ್ ಅನ್ನು ಅನುಕರಿಸಿದ ಹಾರ್ದಿಕ್
ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಭಾರತ ತಂಡದ ಸಮಕಾಲೀನರು. ಬುಮ್ರಾ ಅವರ ಬೌಲಿಂಗ್ ಕ್ರಮವು ಆರಂಭದಿಂದಲೂ ಅಸಾಂಪ್ರದಾಯಿಕವಾಗಿದೆ. ಅವರು ವಿಭಿನ್ನವಾದ ರೀತಿಯಲ್ಲಿ ಬೌಲಿಂಗ್ ಆಕ್ಷನ್ ಹೊಂದಿದ್ದಾರೆ. ಜೊತೆಗೆ ವಿಶ್ವದ ಬೆಸ್ಟ್ ಬೌಲರ್‌ಗಳಲ್ಲಿ ಅವರು ಕೂಡ ಒಬ್ಬರು.
ಬುಮ್ರಾನ ಉತ್ತಮ ಸ್ನೇಹಿತರಲ್ಲಿ ಒಬ್ಬರಾದ ಪಾಂಡ್ಯ ನೆಟ್ಸ್ ಅಭ್ಯಾಸದಲ್ಲಿ ಬುಮ್ರಾ ಅವರ ಬೌಲಿಂಗ್ ಕ್ರಮವನ್ನು ಅನುಕರಿಸಿದರು. ಹಾರ್ದಿಕ್ ಅವರು ಬುಮ್ರಾ ಅವರ ಬೌಲಿಂಗ್ ಆಕ್ಷನ್ ಅನ್ನು ಅನುಕರಿಸುವ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಹೇಗಿದೆ ಫಾರ್ಮ್ ಬೂಮ್ ಎಂದು ಬುಮ್ರಾಗೆ ಟ್ಯಾಗ್ ಮಾಡಿದ್ದಾರೆ.
Ind vs Pak: ಭಾರತ-ಪಾಕ್ ಮುಖಾಮುಖಿಯಲ್ಲಿ ಆಟಗಾರರ ನಡುವೆ ನಡೆದ 3 ಪ್ರಮುಖ ಕಿರಿಕ್

ಹಾರ್ದಿಕ್ ಪೋಸ್ಟ್‌ಗೆ ಬುಮ್ರಾ ಪ್ರತಿಕ್ರಿಯೆ
ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಆಕ್ಷನ್ ಅನ್ನು ಹಾರ್ದಿಕ್ ಅನುಕರಿಸಿರುವ ವೀಡಿಯೋಗೆ ಸ್ವತಃ ಬುಮ್ರಾ ಕಾಮೆಂಟ್ ಮಾಡಿದ್ದಾರೆ. ಅವರು ಕಾಮೆಂಟ್‌ಗಳಲ್ಲಿ ಬುಮ್ರಾ ಅವರ ಆಕ್ಷನ್ ಅನುಕರಣೆ ಮತ್ತು ವಿಕೆಟ್ ಪಡೆದ ಬಳಿಕ ಮಾಡುವ ಸೆಲೆಬ್ರೇಷನ್ ಎರಡನ್ನೂ ಹೊಗಳಿದರು. ಹಾರ್ದಿಕ್ ಪಾಂಡ್ಯ ತನ್ನ ಅನುಕರಣೆಯನ್ನ ತುಂಬಾ ಚೆನ್ನಾಗಿ ಮಾಡಿದ್ದಾನೆ ಎಂಬಂತೆ ಜಸ್ಪ್ರೀತ್ ಬುಮ್ರಾ ಕಾಮೆಂಟ್ ಮಾಡಿದ್ದಾರೆ.
ಏಷ್ಯಾಕಪ್: ಪಂದ್ಯವೊಂದರಲ್ಲಿ ಅತಿಹೆಚ್ಚು ರನ್ ಬಾರಿಸಿದ ಆಟಗಾರರ ಟಾಪ್ 5 ಪಟ್ಟಿ; ನಂಬರ್ 1 ಯಾರು?
ಹಾರ್ದಿಕ್ ಪಾಂಡ್ಯರ ಈ ವೀಡಿಯೋಗೆ ಸಾಕಷ್ಟು ಕಾಮೆಂಟ್ಸ್ ಬಂದಿದ್ದು, ಲಕ್ಷಾಂತರ ಲೈಕ್ಸ್ ಕೂಡ ಇದೆ. ಹಾರ್ದಿಕ್ ಪಾಂಡ್ಯ ಸ್ವಾಭಾವಿಕ ಪ್ರತಿಭೆ ಆಗಿದ್ದು, ಇದೀಗ ಅನುಕರಣೆಯಲ್ಲೂ ಚೆನ್ನಾಗಿ ನಟಿಸಬಲ್ಲರು ಎಂಬಂತೆ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ಏಷ್ಯಾಕಪ್‌ನಲ್ಲಿ ಅತ್ಯಂತ ಯಶಸ್ವಿ ತಂಡ ಭಾರತ
ಏಷ್ಯಾಕಪ್‌ನಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವಾಗಿದೆ. ಕಳೆದ 14 ಆವೃತ್ತಿಗಳಲ್ಲಿ ಭಾರತ ಏಳರಲ್ಲಿ ಗೆದ್ದಿದೆ. ಭಾರತವು 1984 ರಲ್ಲಿ ಮೊದಲ ಆವೃತ್ತಿಯನ್ನು ಗೆದ್ದಿತು ಮತ್ತು ಭಾರತವು ಕೊನೆಯ ಎರಡು ಆವೃತ್ತಿಯನ್ನು 2016, 2018 ರಲ್ಲಿ ಗೆದ್ದುಕೊಂಡಿತು. ಆಗಸ್ಟ್ 28 ರಂದು ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಟೀಂ ಇಂಡಿಯಾ ಏಷ್ಯಾ ಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.

ಏಷ್ಯಾಕಪ್‌ಗೆ ಟೀಂ ಇಂಡಿಯಾ ಸ್ಕ್ವಾಡ್
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್, ಅವೇಶ್ ಖಾನ್.
ಸ್ಟ್ಯಾಂಡ್ ಬೈ ಆಟಗಾರರು: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಹಾರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications