For Quick Alerts
ALLOW NOTIFICATIONS  
For Daily Alerts
 

Ind vs Pak: ಭಾರತ-ಪಾಕ್‌ ಮುಖಾಮುಖಿಯಲ್ಲಿ ಆಟಗಾರರ ನಡುವೆ ನಡೆದ 3 ಪ್ರಮುಖ ಕಿರಿಕ್

India vs pakistan

ಟಿ20 ವಿಶ್ವಕಪ್‌ಗೂ ಮುನ್ನ ನಡೆಯಲಿರುವ ಮಿನಿ ವಿಶ್ವಕಪ್ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಟೂರ್ನಮೆಂಟ್ ದೇಶದ ಆಂತರಿಕ ಕಾರಣಗಳಿಂದ ಯುಎಇಗೆ ಶಿಫ್ಟ್‌ ಆಗಿದ್ದು, ಇದೇ ಶನಿವಾರ(ಆ.27) ಟೂರ್ನಿಗೆ ಚಾಲನೆ ಸಿಗಲಿದೆ.

ಟಿ20 ಸ್ವರೂಪದಲ್ಲಿ ನಡೆಯಲಿರುವ ಏಷ್ಯಾಕಪ್‌ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಈ ಮೆಗಾ ಟೂರ್ನಮೆಂಟ್ ಆಗಸ್ಟ್ 27 ರಿಂದ ಯುಎಇನಲ್ಲಿ ಆರಂಭವಾಗಲಿದೆ. ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಅಖಾಡಕ್ಕಿಳಿಯುತ್ತಿದ್ದು, ಗ್ರೂಪ್ ಎನಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿವೆ.

ಭಾನುವಾರ ನಡೆಯಲಿರುವ ಈ ಪಂದ್ಯವನ್ನ ನೋಡಲು ಇಡೀ ಕ್ರಿಕೆಟ್ ಅಭಿಮಾನಿಗಳು ಕಾತುರಾಗಿದ್ದಾರೆ. ಭಾರತ ಪಾಕಿಸ್ತಾನ ಪಂದ್ಯ ಅಂದಕೂಡಲೇ ಹೈವೋಲ್ಟೇಜ್‌ಗೆ ಏನು ಕೊರತೆ ಇರೋದಿಲ್ಲ. ಆಟಗಾರರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನೋಡಲು ಉಭಯ ರಾಷ್ಟ್ರಗಳು ಉತ್ತಮ ವೇದಿಕೆಯಾಗಿವೆ.

ಪಾಕಿಸ್ತಾನ ವಿರುದ್ಧ ಭಾರತದ್ದೇ ಮೇಲುಗೈ

ಪಾಕಿಸ್ತಾನ ವಿರುದ್ಧ ಭಾರತದ್ದೇ ಮೇಲುಗೈ

ಏಷ್ಯಾಕಪ್‌ನಲ್ಲಿ ಇದುವರೆಗೂ 14 ಬಾರಿ ಮುಖಾಮುಖಿಯಾಗಿರುವ ಉಭಯ ತಂಡಗಳಲ್ಲಿ ಪಾಕಿಸ್ತಾನ ಐದು ಬಾರಿಯಷ್ಟೇ ಭಾರತದ ವಿರುದ್ಧ ಯಶಸ್ವಿಯಾಗಿದ್ದು, ಟೀಂ ಇಂಡಿಯಾ 8 ಬಾರಿ ಗೆದ್ದಿದೆ. ಕಳೆದ ಎರಡು ಏಷ್ಯಾಕಪ್ ಚಾಂಪಿಯನ್‌ಶಿಪ್ ಗೆದ್ದಿರುವ ಬ್ಲೂ ಬಾಯ್ಸ್‌ ಮತ್ತೊಂದು ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ. ಪಾಕಿಸ್ತಾನ 2021ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ 10 ವಿಕೆಟ್‌ಗಳ ಗೆಲುವು ಸಾಧಿಸಿತು.

ಹೀಗೆ ಕಠಿಣ ಪಂದ್ಯಗಳಿಗೆ ಹೆಸರುವಾಸಿಯಾಗಿರುವ ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಯೇ ಇರಲಿ, ಐಸಿಸಿ ಟೂರ್ನಮೆಂಟ್ ಆಗಿರಲಿ ಉಭಯ ತಂಡಗಳ ಮುಖಾಮುಖಿಯಲ್ಲಿ ಆಟಗಾರರ ನಡುವೆ ನಡೆದ ಮೂರು ಪ್ರಮುಖ ಕಿರಿಕ್ ಅನ್ನು ಈ ಕೆಳಗೆ ಕಾಣಬಹುದು.

ಗೌತಮ್ ಗಂಭೀರ್ vs ಶಾಹಿದ್ ಅಫ್ರಿದಿ (2007)

ಗೌತಮ್ ಗಂಭೀರ್ vs ಶಾಹಿದ್ ಅಫ್ರಿದಿ (2007)

ಟೀಂ ಇಂಡಿಯಾದ ಅಗ್ರೆಸ್ಸಿವ್ ಕ್ರಿಕೆಟರ್ ಆಗಿದ್ದ ಗೌತಮ್ ಗಂಭೀರ್ ಛಲಬಿಡದೆ ಎದುರಾಳಿಯನ್ನ ದಂಡಿಸುವ ಸಾಮರ್ಥ್ಯವಿದ್ದ ಪ್ಲೇಯರ್. 2007ರ ಟಿ20 ವಿಶ್ವಕಪ್ ಫೈನಲ್, 2011ರ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಚಾಂಪಿಯನ್‌ ಆಗಲು ಗಂಭೀರ್ ಕೊಡುಗೆ ಅಪಾರವಾಗಿದೆ.

ಭಾರತ-ಪಾಕಿಸ್ತಾನ ಮುಖಾಮುಖಿಯಲ್ಲಿ ಗಂಭೀರ್ ತುಂಬಾ ಅಗ್ರೆಸ್ಸಿವ್ ಆಗಿಯೇ ಆಟವಾಡಿರುವ ಉದಾಹರಣೆ ಸಾಕಷ್ಟಿದೆ. ಅದ್ರಲ್ಲಿ ಒಂದು 2007ರ ಟಿ20 ವಿಶ್ವಕಪ್‌ನಲ್ಲಿ ಗಂಭೀರ್ ಮತ್ತು ಪಾಕಿಸ್ತಾನದ ಆಲ್‌ರೌಡರ್ ಶಾಹಿದ್ ಅಫ್ರಿದಿ ನಡುವೆ ನಡೆದ ಕಿರಿಕ್.

ಅಫ್ರಿದಿ ಬೌಲಿಂಗ್‌ನಲ್ಲಿ ಗಂಭೀರ್ ಬೌಂಡರಿ ಸಿಡಿಸುತ್ತಿದ್ದಂತೆ ಪಾಕ್ ಆಲ್‌ರೌಂಡರ್‌ ಕೆಲವು ಶಬ್ದಗಳಿಂದ ನಿಂದಿಸಿದ ಪರಿಣಾಮ ರೊಚ್ಚಿಗೆದ್ದ ಗಂಭೀರ್ ನೇರವಾಗಿ ಅಫ್ರಿದಿ ಬಳಿಗೆ ತೆರಳಿದ್ದೇ ಅಫ್ರಿದಿಗೆ ಎದುರು ನಿಂತು ಗುರಾಯಿಸಿದ್ದರು. ಜೊತೆಗೆ ಇಬ್ಬರ ನಡುವಿನ ಮಾತಿನ ಘರ್ಷಣೆ ತಾರಕ್ಕೇರುವ ಮೊದಲು ಉಭಯ ತಂಡಗಳ ಆಟಗಾರರು ಹಾಗೂ ಅಂಪೈರ್ ಇಯಾ್ ಗೌಲ್ಡ್‌ ತಿಕ್ಕಾಟವನ್ನ ಅಂತ್ಯಗೊಳಿಸಿದರು.

ಎಲ್ಲರ ಬಾಯಿ ಮುಚ್ಚಿಸುತ್ತಾನೆ; IND vs PAK ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಬಗ್ಗೆ ರವಿಶಾಸ್ತ್ರಿ ದೊಡ್ಡ ಹೇಳಿಕೆ

ಗೌತಮ್ ಗಂಭೀರ್ vs ಕಮ್ರಾನ್ ಅಕ್ಮಲ್ (2010)

ಗೌತಮ್ ಗಂಭೀರ್ vs ಕಮ್ರಾನ್ ಅಕ್ಮಲ್ (2010)

ಗೌತಮ್ ಗಂಭೀರ್ ಎಷ್ಟು ಮುಂಗೋಪಿ ಎಂಬುದಕ್ಕೆ ಮತ್ತೊಂದು ಉದಾಹರಣೆ ಇದಾಗಿದೆ. 2010ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕ್ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಮತ್ತು ಗಂಭೀರ್ ಜಗಳವಾಡಿದ್ದ ಘಟನೆಗೆ ಸಾಕ್ಷಿಯಾಗಿತ್ತು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದ ಭಾರತವು ಪಾಕಿಸ್ತಾನ ವಿರುದ್ಧ ಪಂದ್ಯ ಜಯಿಸಿತ್ತು.

ಈ ಪಂದ್ಯದಲ್ಲಿ ಆಫ್ ಸ್ಪಿನ್ನರ್‌ ಬೌಲಿಂಗ್‌ನಲ್ಲಿ ಸ್ಟಂಪ್ ಔಟ್ ಆಗುವ ಪ್ರಯತ್ನ ನಡೆಯಿತು. ಆದ್ರೆ ಗಂಭೀರ್ ಸ್ವಲ್ಪದರಲ್ಲೇ ಪಾರಾಗಿದ್ದರು ಮತ್ತು ಕಮ್ರಾನ್ ಅಕ್ಮಲ್ ಅಪೀಲ್‌ ಅನ್ನು ಅಂಪೈರ್ ಪುರಸ್ಕರಿಸಲಿಲ್ಲ. ಇದಾಗಿ ಡ್ರಿಂಕ್ಸ್‌ ಬ್ರೇಕ್ ವೇಳೆಯಲ್ಲಿ ಈ ರೀತಿಯಾಗಿ ಸುಳ್ಳು ಅಪೀಲ್ ಮಾಡುವುದನ್ನ ನಿಲ್ಲಿಸುವ ಎಂದು ಕಮ್ರಾನ್ ಅಕ್ಮಲ್‌ಗೆ ಗಂಭೀರ್ ಹೇಳಿದಾಗ ಇಬ್ಬರ ನಡುವೆ ಗಲಾಟೆಗೆ ಕಾರಣವಾಗಿತ್ತು. ಈ ವೇಳೆಯಲ್ಲಿ ನಾಯಕ ಧೋನಿ ಸೇರಿದಂತೆ ಅಂಪೈರ್‌ ಗಂಭೀರ್ ಅನ್ನು ಸಮಾಧಾನ ಪಡಿಸಿ ಆಟವಾಡುವಂತೆ ತಿಳಿ ಹೇಳಿದರು.

ಮಹಾರಾಜ ಟ್ರೋಫಿ: 400 ರನ್‌ಗಳ ಹೊಳೆ ಹರಿದ ಪಂದ್ಯ ವೀಕ್ಷಿಸಿ ಖುಷ್ ಆದ ಸಿಂಪಲ್ ಸುನಿ

ಹರ್ಭಜನ್ ಸಿಂಗ್ vs ಶೋಯೆಬ್ ಅಖ್ತರ್ (2010)

ಹರ್ಭಜನ್ ಸಿಂಗ್ vs ಶೋಯೆಬ್ ಅಖ್ತರ್ (2010)

2010ರ ಅದೇ ಏಷ್ಯಾಕಪ್‌ ಟೂರ್ನಮೆಂಟ್‌ನಲ್ಲಿ ಟರ್ಬನೇಟರ್ ಹರ್ಭಜನ್ ಸಿಂಗ್ ಮತ್ತು ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಶೋಯೆಬ್ ಅಖ್ತರ್‌ ನಡುವೆ ಕಿತ್ತಾಟಕ್ಕೆ ಸಾಕ್ಷಿಯಾಗಿತ್ತು. ಭಾರತಕ್ಕೆ ಕೊನೆಯ 4 ಓವರ್‌ಗಳಲ್ಲಿ ಗೆಲುವಿಗೆ 36 ರನ್‌ಗಳು ಬೇಕಿತ್ತು. 47 ಓವರ್‌ನಲ್ಲಿ ಭಾರತ ಉತ್ತಮ ರನ್‌ ಕಲೆಹಾಕಿದ್ದ ವೇಳೆಯಲ್ಲಿ ಶೋಯೆಬ್ ಅಖ್ತರ್ 49ನೇ ಓವರ್ ಬೌಲಿಂಗ್ ಮಾಡಲು ಕಣಕ್ಕಿಳಿದರು.

ಈ ವೇಳೆಯಲ್ಲಿ ಕ್ರೀಸ್‌ನಲ್ಲಿದ್ದ ಹರ್ಭಜನ್ ಸಿಂಗ್‌ಗೆ ಬೌನ್ಸರ್ ಹಾಕುವ ಮೂಲಕ ರನ್‌ಕಲೆಹಾಕಲು ಕಡಿವಾಣ ಹಾಕುವ ಪ್ರಯತ್ನ ನಡೆಸಿದರು. ಆದ್ರೆ ಅಂತಿಮ ಓವರ್‌ನಲ್ಲಿ ಮೊಹಮ್ಮದ್ ಅಮಿರ್‌ಗೆ ಸಿಕ್ಸರ್ ಸಿಡಿಸುವ ಮೂಲಕ ಭಜ್ಜಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಹರ್ಭಜನ್ ಸಿಕ್ಸರ್ ಸಿಡಿಸಿದ ಬಳಿಕ ಶೋಯೆಬ್ ಅಖ್ತರ್‌ ಕಡೆಗೆ ತಿರುಗಿ ಕಿರುಚುತ್ತಾ ಗೆಲುವನ್ನ ಸಂಭ್ರಮಿಸಿದರು. ಈ ವೇಳೆಯಲ್ಲಿ ಹರ್ಭಜನ್ ಹಾಗೂ ಅಖ್ತರ್ ನಡುವೆ ಮಾತಿನ ಸಂಭಾಷಣೆ ತಾರರಕ್ಕೇರಿತು. ಕೊನೆಗೆ ಉಭಯ ತಂಡದ ಆಟಗಾರರು ಇಬ್ಬರನ್ನೂ ಸಮಾಧಾನಪಡಿಸಿದ್ದರು. ಭಾರತ 2010ರ ಚಾಂಪಿಯನ್ ಆಗಿ ಹೊರಹೊಮ್ಮಿತು.

Story first published: Wednesday, August 24, 2022, 14:10 [IST]
Other articles published on Aug 24, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+