ಮದುವೆಯಾದ ಬಳಿಕ ಮೊದಲ ಬಾರಿಗೆ, ತನ್ನ ಪತ್ನಿ ನತಾಶ ಕುಟುಂಬವನ್ನ ಭೇಟಿ ಮಾಡಿದ ಹಾರ್ದಿಕ್ ಪಾಂಡ್ಯ

ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬುಧವಾರ (ಸೆ.28) ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಟಿ20 ವಿಶ್ವಕಪ್‌ಗೂ ಮುನ್ನ ವಿಶ್ರಾಂತಿ ಬಯಸಿರುವ ಪಾಂಡ್ಯ, ತನ್ನ ಕುಟುಂಬದೊಂದಿಗೆ ಕಾಲ ಕಳೆಯಲು ಸಮಯವನ್ನ ಮೀಸಲಿಟ್ಟಿದ್ದಾರೆ.
ಅಂತೆಯೇ ಹಾರ್ದಿಕ್ ಪಾಂಡ್ಯ ಮದುವೆಯಾದ ಬಳಿಕ ಮೊದಲ ಬಾರಿಗೆ ತನ್ನ ಪತ್ನಿ ನತಾಶ ಸ್ಟ್ಯಾನ್‌ಕೊವಿಚ್ ಕುಟುಂಬವನ್ನ ಬೇಟಿ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಸೋಮವಾರ ವೀಡಿಯೋವನ್ನ ಹರಿಬಿಟ್ಟಿದ್ದು, ತಾನು ಮೊದಲ ಬಾರಿಗೆ ನತಾಶ ಫ್ಯಾಮಿಲಿ (ಈಗ ನನ್ನ ಫ್ಯಾಮಿಲಿ) ಭೇಟಿ ಮಾಡುತ್ತಿದ್ದೇನೆ ಎಂದು ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿದ್ದಾರೆ.
ನತಾಶ ಕುಟುಂಬವನ್ನ ಮೊದಲ ಬಾರಿಗೆ ಬೇಟಿ ಮಾಡಿದ ಹಾರ್ದಿಕ್
ನತಾಶ ಸ್ಟ್ಯಾನ್‌ಕೊವಿಚ್ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿರುವ ವೀಡಿಯೋದಲ್ಲಿ ಹಾರ್ದಿಕ್ ಪಾಂಡ್ಯ ಪತ್ನಿಯ ಕುಟುಂಬ ಸದಸ್ಯರನ್ನ ಬೇಟಿ ಮಾಡುತ್ತಿರುವುದನ್ನ ಕಾಣಬಹುದು. ಹಾರ್ದಿಕ್‌ನನ್ನು ಮೊದಲ ಬಾರಿಗೆ ಬೇಟಿ ಮಾಡಿದ ಸಂತಸಕ್ಕೆ ನತಾಶ ತಾಯಿ ಆತನನ್ನು ಬಿಗಿದಪ್ಪಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ನನಗೆ ಮೊದಲೇ ತಿಳಿದಿತ್ತು ನೀನು ನಮ್ಮನ್ನು ನೋಡಲು ಬರುತ್ತೀಯಾ ಎಂದು ವೀಡಿಯೋದಲ್ಲಿ ನತಾಶ ತಾಯಿ ಹೇಳುವುದನ್ನ ಕಾಣಬಹುದು.
ಟ್ವೀಟ್‌ನಲ್ಲಿ ಶೀರ್ಷಿಕೆ ನೀಡಿರುವ ಹಾರ್ದಿಕ್ '' ಫೋನ್ ಕರೆಗಳು ಮತ್ತು ವೀಡಿಯೋಗಳ ಮೂಲಕ ನೋಡಿದ ಬಳಿಕ ಮೊದಲ ಬಾರಿಗೆ ನತಾಶ ಕುಟುಂಬದವರನ್ನು (ಈಗ ನನ್ನ ಫ್ಯಾಮಿಲಿ) ಭೇಟಿ ಮಾಡಿದ್ದೇನೆ. ಈ ಕ್ಷಣಗಳಿಗಾಗಿ ಕೃತಜ್ಞರಾಗಿರುತ್ತೇನೆ" ಎಂದು ಹಾರ್ದಿಕ್ ತಮ್ಮ ಪೋಸ್ಟ್‌ನಲ್ಲಿ ಹೃದಯದ ಎಮೋಜಿಯನ್ನು ಸೇರಿಸುವ ಮೂಲಕ ಪೋಸ್ಟ್ ಮಾಡಿದ್ದಾರೆ.
Ind vs SA ODI: ಟೀಂ ಇಂಡಿಯಾ ಮುನ್ನಡೆಸಲಿರುವ ಶಿಖರ್ ಧವನ್, ಸಂಜುಗೆ ಉಪನಾಯಕತ್ವ?

ಖಾಸಗಿ ಕಾರ್ಯಕ್ರಮದಲ್ಲಿ ಮದುವೆಯಾಗಿದ್ದ ಹಾರ್ದಿಕ್ ಮತ್ತು ನತಾಶ
ಹಾರ್ದಿಕ್ ಪಾಂಡ್ಯ ಮತ್ತು ನತಾಶ ಅತ್ಯಂತ ಖಾಸಗಿಯಾಗಿ 2020ರಲ್ಲಿ ವಿವಾಹವಾಗಿದ್ದರು. ಈ ಹಿಂದೆ ಕ್ರಿಕ್‌ಬಜ್‌ನ ಹರ್ಷ್‌ಬೋಗ್ಲೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಂಬೈ ಇಂಡಿಯನ್ಸ್ ಆಟಗಾರ, ನತಾಶಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ವಿಷಯ ನನ್ನ ಪೋಷಕರಿಗೂ ತಿಳಿಸಿರಲಿಲ್ಲ ಎಂಬುದನ್ನು ರಿವೀಲ್ ಮಾಡಿದ್ದರು. "ನಾನು ನಿಶ್ಚಿತಾರ್ಥ ಮಾಡಿಕೊಳ್ಳುವ ವಿಚಾರ ನನ್ನ ತಂದೆ ಹಾಗೂ ತಾಯಿಗೆ ಗೊತ್ತಿರಲಿಲ್ಲ. ಆದರೆ, ಎರಡು ದಿನ ಮುಂಚಿತವಾಗಿ ಸಹೋದರ ಕೃನಾಲ್‌ಗೆ ತಿಳಿಸಿದ್ದೆ," ಎಂದು ಹಾರ್ದಿಕ್ ಹೇಳಿಕೊಂಡಿದ್ದರು. ಅಲ್ಲದೆ ಇದೇ ವರ್ಷದಲ್ಲಿ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇನೆ ಎಂದು ಟಿವಿ ಕಾರ್ಯಕ್ರಮದಲ್ಲಿ ತಿಳಿಸಿದ್ದರು.
ದಕ್ಷಿಣ ಆಫ್ರಿಕಾ T20 ಸರಣಿಯಿಂದ ಹಾರ್ದಿಕ್ ಪಾಂಡ್ಯ ಔಟ್, ಶಹಬಾಜ್ ಅಹಮದ್‌ಗೆ ಸ್ಥಾನ!

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಆಡಿದ್ದ ಹಾರ್ದಿಕ್ ಪಾಂಡ್ಯ
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯ, ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಪರ ಆಡಿದ್ರು. ಭಾರತ ಈ ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಬೀಗಿದೆ. ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಿರ್ಣಾಯಕ ಇನ್ನಿಂಗ್ಸ್ ಆಡಿದ್ದು, ಸೂರ್ಯಕುಮಾರ್ ಔಟಾದ ಬಳಿಕ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ 25ರನ್ ಕಲೆಹಾಕಿ ಉತ್ತಮ ಆಟವಾಡಿದ್ರು. ಭಾರತ ಒಂದು ಎಸೆತ ಬಾಕಿ ಇರುವಂತೆ ಗೆಲುವಿನ ದಡ ತಲುಪಿತು.
ಸೆಪ್ಟೆಂಬರ್ 28ರಂದು ಪ್ರಾರಂಭಗೊಳ್ಳಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯಗೆ ಟಿ20 ವಿಶ್ವಕಪ್ ದೃಷ್ಟಿಯಿಂದ ವಿಶ್ರಾಂತಿ ನೀಡಿದ್ರೆ, ದೀಪಕ್ ಹೂಡಾ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದು ಎನ್‌ಸಿಎಗೆ ತೆರಳಲಿದ್ದಾರೆ.
ಇನ್ನು ಹಾರ್ದಿಕ್ ಪಾಂಡ್ಯ ಬದಲು ಆರ್‌ಸಿಬಿಯ ಆಲ್‌ರೌಂಡರ್ ಶಹಬಾಜ್ ಅಹಮದ್‌ಗೆ ಸ್ಥಾನ ನೀಡಲಾಗಿದ್ದು, ದೀಪಕ್ ಹೂಡಾ ಬದಲು ಶ್ರೇಯಸ್ ಅಯ್ಯರ್ ಟೀಂ ಇಂಡಿಯಾ ಸ್ಕ್ವಾಡ್ ಸೇರಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications