IPL 2022: ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಬಲ್ಲ ಇಬ್ಬರು ಆಟಗಾರರನ್ನ ಹೆಸರಿಸಿದ ಹರ್ಷ ಬೋಗ್ಲೆ

ಐಪಿಎಲ್ ಮೆಗಾ ಹರಾಜಿಗೆ ಬೆಂಗಳೂರಿನ ವೇದಿಕೆ ಸಿದ್ಧಗೊಂಡಿದೆ. ಫೆಬ್ರವರಿ 12 ಮತ್ತು 13ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಪಿಎಲ್ 15ನೇ ಸೀಸನ್‌ನ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಬಾರಿ ಎರಡು ಹೊಸ ತಂಡಗಳು ಸೇರ್ಪಡೆಗೊಂಡಿದ್ದು, ಒಟ್ಟು 10 ತಂಡಗಳು ಹರಾಜಿನಲ್ಲಿ ಸ್ಪರ್ಧಿಸಲಿವೆ. ದೇಶೀಯ ಆಟಗಾರರು ಮಾತ್ರವಲ್ಲದೆ ಪ್ರಪಂಚದಾದ್ಯಂತದ ಆಟಗಾರರು ಕ್ಯಾಶ್ ರಿಚ್ ಲೀಗ್ನಲ್ಲಿ ಆಡಲು ಆಸಕ್ತಿ ಹೊಂದಿದ್ದಾರೆ.
ಈಗಾಗಲೇ ಅವರ ಹೆಸರು ನೋಂದಾಯಿಸಲಾಗಿದೆ. ಕ್ರಿಕೆಟ್ ವಿಶ್ಲೇಷಕರು ಮತ್ತು ಕಾಮೆಂಟೇಟರ್‌ಗಳು ಕೂಡ ವಿಶ್ವದ ಅತಿದೊಡ್ಡ ಲೀಗ್ ಐಪಿಎಲ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಮೆಗಾ ಹರಾಜಿನ ಕುರಿತು ಭಾರತದ ಪ್ರಮುಖ ವೀಕ್ಷಕ ವಿವರಣೆಗಾರ ಹರ್ಷಾ ಭೋಗ್ಲೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಅದಕ್ಕೂ ಮೊದಲು ಈ ಬಾರಿ ಹರಾಜಿನಲ್ಲಿ ಎಷ್ಟು ಆಟಗಾರರು ಹೆಸರು ನೋಂದಾಯಿಸಿದ್ದಾರೆ ತಿಳಿದುಕೊಳ್ಳಿ.

ದೇಶೀಯ ಅಥವಾ ವಿದೇಶಿ ಆಟಗಾರರೆಷ್ಟು?
ಹರಾಜು ರಿಜಿಸ್ಟರ್‌ನಲ್ಲಿರುವ 1,214 ಹೆಸರುಗಳಲ್ಲಿ 896 ಭಾರತೀಯ ಆಟಗಾರರು ಮತ್ತು 318 ವಿದೇಶಿ ಆಟಗಾರರಿದ್ದಾರೆ. ಈ ಪಟ್ಟಿಯಲ್ಲಿ ನೇಪಾಳ, ಯುಎಇ, ಓಮನ್, ಸ್ಕಾಟ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್‌ನಂತಹ 270 ಕ್ಯಾಪ್ಡ್, 903 ಅನ್‌ಕ್ಯಾಪ್ಡ್ ಮತ್ತು 41 ಆಟಗಾರರನ್ನು ಒಳಗೊಂಡಿದೆ. ಅಮೆರಿಕದ 14 ಆಟಗಾರರು ಕೂಡ ಇದ್ದಾರೆ.

ಇಶಾನ್ ಕಿಶನ್ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಬಲ್ಲ: ಹರ್ಷ ಬೋಗ್ಲೆ
ಹರಾಜಿನಲ್ಲಿ ಅತಿ ಹೆಚ್ಚು ಬಿಡ್ ಆಗುವ ಇಬ್ಬರು ಭಾರತೀಯ ಆಟಗಾರರನ್ನು ಹರ್ಷ ಬೋಗ್ಲೆ ಅಂದಾಜಿಸಿದ್ದಾರೆ. ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ಜೊತೆಗೆ ದೇಶೀಯ ಹಿಟ್ಟರ್ ಹಾಗೂ ತಮಿಳುನಾಡು ಆಟಗಾರ ಶಾರುಕ್ ಖಾನ್ ಜಾಕ್ ಪಾಟ್ ಗೆ ಬೆಲೆ ಸಿಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟ್ ಬಝ್ ಕಾರ್ಯಕ್ರಮದಲ್ಲಿ ಮಾತನಾಡಿದ ಹರ್ಷಾ ಭೋಗ್ಲೆ, '' ಇಶಾನ್ ಕಿಶನ್ ಗೆ ಒಳ್ಳೆಯ ಬೇಡಿಕೆ ಇದೆ. ಹರಾಜಿನಲ್ಲಿ ಇಶಾನ್ ಕಿಶನ್ ಹಾಟ್ ಕೇಕ್. ಅವರು ಪೂರ್ಣ ಬೇಡಿಕೆಯಲ್ಲಿದ್ದಾರೆ. ಭಾರತೀಯ ಆಟಗಾರ, ಎಡಗೈ ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಹಾಗೂ ಎಡಗೈ ಟಾಪರ್ ಬ್ಯಾಟ್ಸ್‌ಮನ್ ಆಗಿರುವುದರಿಂದ ಫ್ರಾಂಚೈಸಿಗಳು ಅವನ ಮೇಲೆ ಬಿಡ್ ಮಾಡಲಿವೆ. ಅವರು ಅತ್ಯಧಿಕ ಬೆಲೆಯನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ, "ಎಂದು ಹರ್ಷಭೋಗ್ಲೆ ಹೇಳಿದರು.
ಎಂಎಸ್ ಧೋನಿ ನೀಡಿದ ವಿಶೇಷ ಸಲಹೆಯನ್ನು ಹಂಚಿಕೊಂಡ ಭೂತಾನ್ ಕ್ರಿಕೆಟಿಗ

17 ಕೋಟಿ ಗಳಿಸುವ ಸಾಧ್ಯತೆ..!
ಕಳೆದ ಋತುವಿನವರೆಗೂ ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಕನಿಷ್ಠ 2 ಕೋಟಿ ರೂ.ಗೆ ಹರಾಜಿಗೆ ಲಭ್ಯವಾಗಿರುವ ಇಶಾನ್ ಕಿಶನ್ ಭಾರಿ ಬೆಲೆ ಪಡೆಯುವ ಸಾಧ್ಯತೆ ಇದೆ. ವಿಕೆಟ್ ಕೀಪರ್‌ಗಳನ್ನು ಹೊಂದಿರುವ ಚೆನ್ನೈ, ಲಕ್ನೋ ಮತ್ತು ದೆಹಲಿ ಹೊರತುಪಡಿಸಿ ಎಲ್ಲಾ ತಂಡಗಳು ಅವನಿಗಾಗಿ ಪ್ರಯತ್ನಿಸುತ್ತವೆ. ಇಶಾನ್ ತಂಡದ ಭವಿಷ್ಯಕ್ಕಾಗಿ ನಾಯಕನಾಗಿಯೂ ಕಾರ್ಯನಿರ್ವಹಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಇಶಾನ್‌ಗೆ ಫ್ರಾಂಚೈಸಿಗಳು ಹೆಚ್ಚು ಪೈಪೋಟಿಗೆ ಇಳಿಯಲಿವೆ.. ಈ ಕ್ರಮದಲ್ಲಿ ಅವರು 10 ರಿಂದ 17 ಕೋಟಿ ರೂ. ರೂಪಾಯಿವರೆಗೆ ಬಿಡ್ ಆಗಬಹುದು.

ಶಾರೂಕ್ ಖಾನ್
ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ರೀತಿಯಲ್ಲಿ ಒಬ್ಬನೇ ಪಂದ್ಯದ ಸ್ವರೂಪವನ್ನೇ ಬದಲಿಸುವ ಸಾಮರ್ಥ್ಯ ತಮಿಳುನಾಡು ಕ್ರಿಕೆಟಿಗ ಶಾರುಖ್ ಖಾನ್ ಹೊಂದಿದ್ದಾರೆ ಎಂದು ಹರ್ಷ ಬೋಗ್ಲೆ ಹೇಳಿದ್ದಾರೆ. ಅವರನ್ನು ಫಿನಿಶಿಂಗ್ ರೋಲ್‌ಗೆ ತೆಗೆದುಕೊಳ್ಳಲು ತಂಡಗಳು ಸಾಕಷ್ಟು ಪ್ರಯತ್ನಿಸುತ್ತವೆ ಎಂದು ತಿಳಿಸಿದ್ದಾರೆ.
‘ಶಾರುಖ್ ಖಾನ್ ಗೆ ಭಾರಿ ಬೆಲೆ ಇದೆ ಎಂಬುದು ನನ್ನ ಊಹೆ. ಏಕೆಂದರೆ ಟಿ20 ಮಾದರಿಗೆ ಬೇಕಾದ ಹಿಟ್ಟಿಂಗ್ ಸಾಮರ್ಥ್ಯ ಅವರಲ್ಲಿದೆ. ಅವರು ಯೂಸುಫ್ ಪಠಾಣ್ ಅವರಂತೆ ಆಡಬಲ್ಲರು. ಅವರಂತೆ ಶಾರುಖ್ ಖಾನ್ ಸಿಕ್ಸರ್ ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹರ್ಷಾ ಭೋಗ್ಲೆ ಹೇಳಿದ್ದಾರೆ.

ಶಾರೂಕ್ ಖಾನ್ 10 ರಿಂದ 13 ಕೋಟಿ ಗಳಿಸುವ ಸಾಧ್ಯತೆ
ಕಳೆದ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ 5.25 ಕೋಟಿ ರೂ.ಗೆ ಅವರು 11 ಪಂದ್ಯಗಳನ್ನು ಆಡಿದ್ದಾರೆ. 21.85 ಸರಾಸರಿಯಲ್ಲಿ 153 ರನ್ ಗಳಿಸಿದ್ದಾರೆ. ಪಂಜಾಬ್ ಪರವಾಗಿ ಅವರಿಗೆ ಸರಿಯಾದ ಅವಕಾಶಗಳು ಸಿಗಲಿಲ್ಲ. ಫ್ರಾಂಚೈಸಿಗಳನ್ನು ಬದಲಾಯಿಸುವ ಉದ್ದೇಶದಿಂದ ಪಂಜಾಬ್ ಕಿಂಗ್ಸ್ನಲ್ಲಿ ಉಳಿದುಕೊಳ್ಳಲು ಒಪ್ಪದ ಶಾರುಖ್ ಖಾನ್ ಹರಾಜಿಗೆ ಲಭ್ಯವಾಗಿದ್ದಾರೆ. ಶಾರುಖ್ ಖಾನ್ ದೇಶೀಯ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ದೊಡ್ಡ ಮೊತ್ತವನ್ನು ಗಳಿಸುವ ಅವಕಾಶವನ್ನು ಹೊಂದಿದ್ದಾರೆ. ಈ ತಮಿಳುನಾಡಿನ ಕ್ರಿಕೆಟಿಗನಿಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಇತರ ಎಲ್ಲಾ ಫ್ರಾಂಚೈಸಿಗಳು ಸ್ಪರ್ಧಿಸಲಿವೆ. ಈ ಬಾರಿ ಅವರಿಗೆ 10 ರಿಂದ 13 ಕೋಟಿ ಗಳಿಸುವ ಅವಕಾಶವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications