Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅವರಂತಹ ಕ್ರಿಕೆಟಿಗರು ಹಲವು ವರ್ಷಗಳಿಗೊಮ್ಮೆ ಮಾತ್ರ ಬರುತ್ತಾರೆ: ಟೀಂ ಇಂಡಿಯಾ ಪ್ಲೇಯರ್ ಕುರಿತು ಪೊಲಾರ್ಡ್ ಹೊಗಳಿಕೆ

Hardik pandya and kieron pollard

ವೆಸ್ಟ್‌ ಇಂಡೀಸ್‌ನ ಮಾಜಿ ಕ್ರಿಕೆಟಿಗ ಹಾಗೂ ಸ್ಟಾರ್ ಆಲ್‌ರೌಂಡರ್ ಕಿರಾನ್ ಪೋಲಾರ್ಡ್‌ ತನ್ನ ಸ್ನೇಹಿತ ಹಾಗೂ ಟೀಂ ಇಂಡಿಯಾ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಕುರಿತಾಗಿ ಮೆಚ್ಚುಗೆಯ ಮಾತನಾಡಿದ್ದು, ಆತನಂತಹ ಕ್ರಿಕೆಟಿಗರು ಹಲವು ವರ್ಷಗಳಿಗೊಮ್ಮೆ ಮಾತ್ರ ಬರುತ್ತಾರೆ ಎಂದು ಹೊಗಳಿದ್ದಾರೆ.

ಭಾರತದಲ್ಲಿ ಭಾರೀ ಅಭಿಮಾನಿಗಳನ್ನ ಹೊಂದಿರುವಂತಹ ವಿಂಡೀಸ್ ದಿಗ್ಗಜ ಕಿರಾನ್ ಪೊಲಾರ್ಡ್‌ ಕೆರಿಬಿಯನ್ ಕ್ರಿಕೆಟಿಗರಲ್ಲಿ ಹೆಸರು ಮಾಡಿದ ಪ್ರಮುಖ ಆಲ್‌ರೌಂಡರ್ ಆಗಿದ್ದಾರೆ. ಅದ್ರಲ್ಲೂ ಈತ ವಿಶ್ವದ ಅತಿದೊಡ್ಡ ಟಿ20 ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪ್ರಾಂಚೈಸಿಯನ್ನ ಪ್ರತಿನಿಧಿಸಿದ್ದಾರೆ.

ತನ್ನ ಮಾಜಿ ಸಹ ಆಟಗಾರನ ಕುರಿತು ಪೊಲಾರ್ಡ್ ಮೆಚ್ಚುಗೆ

ತನ್ನ ಮಾಜಿ ಸಹ ಆಟಗಾರನ ಕುರಿತು ಪೊಲಾರ್ಡ್ ಮೆಚ್ಚುಗೆ

ಐಪಿಎಲ್‌ 2021ರ ಸೀಸನ್‌ವರೆಗೆ ಮುಂಬೈ ಇಂಡಿಯನ್ಸ್ ಪರ ಒಟ್ಟಾಗಿಯೇ ಆಡಿದ್ದ ಹಾರ್ದಿಕ್ ಪಾಂಡ್ಯ ಮತ್ತು ಕಿರಾನ್ ಪೊಲಾರ್ಡ್ ಕೇವಲ ಸಹ ಆಟಗಾರರಷ್ಟೇ ಅಲ್ಲದೆ ಉತ್ತಮ ಸ್ನೇಹಿತರಾಗಿದ್ರು. ಮುಂಬೈಗೆ ಬಂದಾಗಲೆಲ್ಲಾ ಪೊಲಾರ್ಡ್ ಹಾರ್ದಿಕ್ ಪಾಂಡ್ಯ ಮನೆಗೆ ಭೇಟಿ ನೀಡಿದ್ರೆ, ವೆಸ್ಟ್‌ ಇಂಡೀಸ್‌ಗೆ ತೆರಳಿದ್ದಾಗಲೆಲ್ಲಾ ಪೊಲಾರ್ಡ್ ಮನೆಗೆ ಸಾಕಷ್ಟು ಬಾರಿ ಹಾರ್ದಿಕ್ ತೆರಳಿ ಒಟ್ಟಾಗಿ ಭೋಜನ ಸವಿದಿದ್ದಾರೆ.

ಇಂಜ್ಯುರಿ ಬಳಿಕ ಅದ್ಭುತವಾಗಿ ಕಂಬ್ಯಾಕ್ ಮಾಡಿರುವ ಹಾರ್ದಿಕ್ ಪಾಂಡ್ಯ ಕುರಿತಾಗಿ ಆಲ್‌ರೌಂಡರ್ ಕಿರಾನ್ ಪೊಲಾರ್ಡ್‌ ಆಶ್ಚರ್ಯದ ಜೊತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದುವರಿದ ಶ್ರೇಯಸ್ ಐಯ್ಯರ್ ಅಬ್ಬರ: ವಿರಾಟ್ ಕೊಹ್ಲಿ ಇರುವ ವಿಶೇಷ ಪಟ್ಟಿಗೆ ಸೇರ್ಪಡೆ

ಮೊದಲ ಸೀಸನ್‌ನಲ್ಲೇ ಗುಜರಾತ್ ಟೈಟನ್ಸ್‌ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ ಪಾಂಡ್ಯ

ಮೊದಲ ಸೀಸನ್‌ನಲ್ಲೇ ಗುಜರಾತ್ ಟೈಟನ್ಸ್‌ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ ಪಾಂಡ್ಯ

ಇಂಡಿಯನ್ ಪ್ರೀಮಿಯರ್ ಹದಿನೈದನೇ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಿದ್ದು, ಗುಜರಾತ್ ಟೈಟನ್ಸ್ ತಂಡವನ್ನ ಮುನ್ನಡೆಸಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂಡವನ್ನ ಚೊಚ್ಚಲ ಸೀಸನ್‌ನಲ್ಲೇ ಚಾಂಪಿಯನ್ ಆಗಿ ಮಾಡಿದ್ರು. ನಾಯಕತ್ವದಲ್ಲಿ ಅಷ್ಟೇ ಅಲ್ಲದೆ ಆಟಗಾರನಾಗಿ ತಂಡದ ಪರ ಮಿಂಚಿದ ಪಾಂಡ್ಯ ತಂಡದ ಪರ ಗರಿಷ್ಠ ರನ್ ಸ್ಕೋರರ್ ಆಗಿಯೂ ಗುರುತಿಸಿಕೊಂಡರು.

ಇದೀಗ ಟೀಂ ಇಂಡಿಯಾ ಪರ ಪ್ರಮುಖ ಆಟಗಾರನಾಗಿ ಹೊರಹೊಮ್ಮಿರುವ ಹಾರ್ದಿಕ್, ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ತಂಡವನ್ನ ಬ್ಯಾಲೆನ್ಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾರ್ದಿಕ್ ಬೌಲಿಂಗ್‌ನಿಂದಾಗಿ ರೋಹಿತ್‌ಗೆ ನಾಯಕತ್ವ ಸುಲಭವಾಗಿದೆ. ಬ್ಯಾಟಿಂಗ್‌ನಲ್ಲೂ ಪಾಂಡ್ಯ ಸೂಪರ್ ಫಿನಿಷರ್ ಆಗಿ ಗುರುತಿಸಿಕೊಂಡಿದ್ದಾರೆ.

ಸಚಿನ್ ಮತ್ತು ದ್ರಾವಿಡ್‌ ದಾಖಲೆಯನ್ನ ಬ್ರೇಕ್ ಮಾಡಿದ ಶ್ರೇಯಸ್-ಕಿಶನ್ ಜೋಡಿ

ಹಾರ್ದಿಕ್ ಪಾಂಡ್ಯ ರೀತಿಯ ಪ್ಲೇಯರ್‌ ಅನೇಕ ವರ್ಷಗಳಿಗೊಮ್ಮೆ ಬರುತ್ತಾರೆ!

ಹಾರ್ದಿಕ್ ಪಾಂಡ್ಯ ರೀತಿಯ ಪ್ಲೇಯರ್‌ ಅನೇಕ ವರ್ಷಗಳಿಗೊಮ್ಮೆ ಬರುತ್ತಾರೆ!

ವಿಮಲ್ ಕುಮಾರ್‌ರ ಯೂಟ್ಯೂಬ್‌ ಚಾನೆಲ್‌ನಲ್ಲಿ ಸಂದರ್ಶನದಲ್ಲಿ ಮಾತನಾಡಿದ ವಿಂಡೀಸ್ ಆಲ್‌ರೌಂಡರ್ ಕಿರಾನ್ ಪೊಲಾರ್ಡ್‌ '' ಹಾರ್ದಿಕ್ ಕೆಲಸ ಪ್ರಗತಿಯಲ್ಲಿದೆ. ಕಳೆದೆರಡು ತಿಂಗಳಿನಲ್ಲಿ ಅವರು ಕಠಿಣ ಸಮಯವನ್ನ ಎದುರಿಸಿದ್ದಾರೆ. ಆದ್ರೆ ಇದೀಗ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆದಿದ್ದಾರೆ'' ಎಂದು ಪೊಲಾರ್ಡ್ ಹೇಳಿದ್ದಾರೆ.

ಇದರ ಜೊತೆಗೆ ''ಹಾರ್ದಿಕ್ ಪಾಂಡ್ಯ ರೀತಿಯ ಪ್ಲೇಯರ್ ಹಲವು ವರ್ಷಗಳಿಗೊಮ್ಮೆ ಬರುತ್ತಾರೆ, ಆತನ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ'' ಎಂದು ಪೊಲಾರ್ಡ್ ತಿಳಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ಜೊತೆಗೆ ಅಭ್ಯಾಸ ಪಂದ್ಯಗಳಲ್ಲಿ ಭಾಗಿಯಾಗಿದ್ದಾರೆ. ಅಕ್ಟೋಬರ್ 16ರಿಂದ ಪ್ರಾರಂಭಗೊಳ್ಳಲಿರುವ ವಿಶ್ವಕಪ್‌ಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 23ರಂದು ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನ ಆರಂಭಿಸಲಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಅಕ್ಟೋಬರ್ 17, 19ರಂದು ಅಭ್ಯಾಸ ಪಂದ್ಯವನ್ನಾಡಲಿದೆ.

ಇದರ ಜೊತೆಗೆ ವೆಸ್ಟ್ರನ್ ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 10, 13ರಂದು ಅಭ್ಯಾಸ ಪಂದ್ಯವನ್ನಾಡುತ್ತಿದೆ. ಎಲ್ಲಾ ಪಂದ್ಯಗಳೂ ಪರ್ತ್‌ನಲ್ಲಿ ಸ್ಥಳೀಯ ಕಾಲಮಾನ ಸಂಜೆ 4ಗಂಟೆಗೆ ನಡೆಯಲಿದೆ.

Story first published: Monday, October 10, 2022, 16:03 [IST]
Other articles published on Oct 10, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+