Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್ ಮತ್ತು ದ್ರಾವಿಡ್‌ ದಾಖಲೆಯನ್ನ ಬ್ರೇಕ್ ಮಾಡಿದ ಶ್ರೇಯಸ್-ಕಿಶನ್ ಜೋಡಿ

Shreyas iyer and ishan kishan

ರಾಂಚಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುವ ಮೂಲಕ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ಟಾಸ್‌ ಸೋತರು ತನ್ನ ಇಷ್ಟದ ಆಯ್ಕೆಯನ್ನು ಎದುರಾಳಿ ದಕ್ಷಿಣ ಆಫ್ರಿಕಾ ಬಿಟ್ಟುಕೊಟ್ಟ ಹಿನ್ನಲೆಯಲ್ಲಿ ಟೀಂ ಇಂಡಿಯಾ ಸುಲಭವಾಗಿ ಗೆಲುವಿನ ಗೆರೆ ದಾಟಿದೆ.

ಟಾಸ್ ಸೋತ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ಶಿಖರ್ ಧವನ್ ತಮ್ಮ ಆಯ್ಕೆಯು ಬೌಲಿಂಗ್ ಮಾಡುವುದೇ ಆಗಿತ್ತು ಎಂದು ತಿಳಿಸಿದ್ದರು. ಹೀಗಾಗಿಯೇ ಪಂದ್ಯ ಮುಗಿದ ಬಳಿಕ ಶಿಖರ್ ಧವನ್ ದಕ್ಷಿಣ ಆಫ್ರಿಕಾ ನಾಯಕ ಕೇಶವ್ ಮಹಾರಾಜ್‌ಗೆ ಧನ್ಯವಾದ ಕೂಡ ತಿಳಿಸಿದ್ರು.

278ರನ್‌ಗಳಿಗೆ ದಕ್ಷಿಣ ಆಫ್ರಿಕಾವನ್ನ ಕಟ್ಟಿ ಹಾಕಿದ ಭಾರತ

278ರನ್‌ಗಳಿಗೆ ದಕ್ಷಿಣ ಆಫ್ರಿಕಾವನ್ನ ಕಟ್ಟಿ ಹಾಕಿದ ಭಾರತ

ಉತ್ತಮ ಆರಂಭ ಪಡೆಯದ ದಕ್ಷಿಣ ಆಫ್ರಿಕಾ 40ರನ್‌ಗೆ ಎರಡು ವಿಕೆಟ್ ಕಳೆದುಕೊಂಡಿತು. ಈ ವೇಳೆ ದಕ್ಷಿಣ ಆಫ್ರಿಕಾಗೆ ಆಧಾರವಾಗಿದ್ದು ರೀಜಾ ಹೆಂಡ್ರಿಕ್ಸ್ ಮತ್ತು ಏಡೆನ್ ಮಕ್ರಾಮ್. ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಈ ಜೋಡಿ ವೈಯಕ್ತಿಕ ಅರ್ಧಶತಕ ದಾಖಲಿಸಿ ತಂಡದ ಸ್ಕೋರನ್ನು 150ರ ಗಡಿದಾಟಿಸಿದ್ರು. ಒಂದೆಡೆ ಉತ್ತಮವಾಗಿ ಆಡ್ತಿದ್ದ ರೀಜಾ ಹೆಂಡ್ರಿಕ್ಸ್‌ 76 ಎಸೆತಗಳಲ್ಲಿ 74ರನ್‌ಗಳಿಸಿದ್ದಾಗ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದ್ರು.

ಹೆಂಡ್ರಿಕ್ಸ್ ಔಟಾದ ಬಳಿಕ ಹೆನ್ರಿಚ್ ಕ್ಲಾಸ್ (30) ಉತ್ತಮವಾಗೇ ಆಡುತ್ತಿದ್ದ ವೇಳೆ ಕುಲ್‌ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದ್ರು. 89 ಎಸೆತಗಳಲ್ಲಿ 79ರನ್ ಕಲೆಹಾಕಿದ್ದ ಏಡೆನ್ ಮಕ್ರಾಮ್ ಇನ್ನಿಂಗ್ಸ್‌ಗೆ ವಾಷಿಂಗ್ಟನ್ ಸುಂದರ್ ತೆರೆ ಎಳೆದರು. ವೇಯ್ನೆ ಪರ್ನೆಲ್ 16ರನ್‌ಗಳಿಸಿ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಔಟಾದರು. ಅಂತಿಮ ಓವರ್‌ನಲ್ಲಿ ಕೇವಲ 3 ರನ್ ನೀಡಿ ಕೇಶವ್ ಮಹಾರಾಜ್(5) ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್ ಭಾರತದ ಪರ ಹೀರೋ ಆಗಿ ಮಿಂಚಿದ್ರು.

ಶ್ರೇಯಸ್ ಅಯ್ಯರ್ ಶತಕ, 93ರನ್‌ಗೆ ಔಟಾದ ಇಶಾನ್ ಕಿಶನ್

ಶ್ರೇಯಸ್ ಅಯ್ಯರ್ ಶತಕ, 93ರನ್‌ಗೆ ಔಟಾದ ಇಶಾನ್ ಕಿಶನ್

279ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಪರ ಆರಂಭಿಕರಿಬ್ಬರು ವಿಫಲರಾದ ಬಳಿಕ ಮೂರನೇ ವಿಕೆಟ್‌ಗೆ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಬೊಂಬಾಟ್ ಆಟವಾಡಿದ್ರು. ಶತಕದ ಜೊತೆಯಾಟವಾಡಿದ ಈ ಜೋಡಿ ಭಾರತದ ಗೆಲುವನ್ನ ಸುಲಭವಾಗಿಸಿತು.

ಒಂದೆಡೆ ಶ್ರೇಯಸ್ ಅಯ್ಯರ್ ತನ್ನ ಎರಡನೇ ಏಕದಿನ ಶತಕ ದಾಖಲಿಸಿ ಅಜೇಯ 113ರನ್ ಕಲೆಹಾಕಿದರು. ಮತ್ತೊಂದೆಡೆ ಇಶಾನ್ ಕಿಶನ್ 84 ಎಸೆತಗಳಲ್ಲಿ 93ರನ್ ಸಿಡಿಸಿ ವಿಕೆಟ್ ಒಪ್ಪಿಸಿ ಶತಕವಂಚಿತರಾದ್ರು. ಇವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡಿತ್ತು.

ಶ್ರೇಯಸ್, ಇಶಾನ್ ಅಮೋಘ ಆಟಕ್ಕೆ ಗೆಲುವಿನ ಸಿಹಿ: ಆದರೆ ನಾಯಕ ಧವನ್ ಹೊಗಳಿದ್ದು ಯಾರನ್ನು ಗೊತ್ತಾ!?

3ನೇ ವಿಕೆಟ್‌ಗೆ ದಾಖಲೆಯ ಜೊತೆಯಾಟವಾಡಿದ ಜೋಡಿ, ಸಚಿನ್ -ದ್ರಾವಿಡ್ ದಾಖಲೆ ಬ್ರೇಕ್

3ನೇ ವಿಕೆಟ್‌ಗೆ ದಾಖಲೆಯ ಜೊತೆಯಾಟವಾಡಿದ ಜೋಡಿ, ಸಚಿನ್ -ದ್ರಾವಿಡ್ ದಾಖಲೆ ಬ್ರೇಕ್

ಮೂರನೇ ವಿಕೆಟ್‌ಗೆ 161ರನ್‌ಗಳ ಅಮೋಘ ಜೊತೆಯಾಟವಾಡಿದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಟೀಂ ಇಂಡಿಯಾ ಗೆಲುವಿಗೆ ಮುನ್ನುಡೆ ಬರೆದಿದ್ದರ ಜೊತೆಗೆ ಹಿಂದಿನ ದಾಖಲೆಯನ್ನು ಸಹ ಮುರಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ವಿಕೆಟ್‌ಗೆ ಎರಡನೇ ಗರಿಷ್ಟ ಜೊತೆಯಾಟ ದಾಖಲಿಸಿದ ಭಾರತದ ಜೋಡಿ ಎಂಬ ಸಾಧನೆ ಮಾಡುವ ಮೂಲಕ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ದಾಖಲೆಯನ್ನ ಮುರಿದಿದ್ದಾರೆ.

ಕೊಹ್ಲಿ ಮತ್ತು ರಹಾನೆ ಹೆಸರಿನಲ್ಲಿ ಅತಿ ದೊಡ್ಡ ಜೊತೆಯಾಟ

ಕೊಹ್ಲಿ ಮತ್ತು ರಹಾನೆ ಹೆಸರಿನಲ್ಲಿ ಅತಿ ದೊಡ್ಡ ಜೊತೆಯಾಟ

ಇನ್ನು ದ.ಆಫ್ರಿಕಾ ವಿರುದ್ಧ ಮೂರನೇ ವಿಕೆಟ್‌ಗೆ ಟಾಪ್ ಜೊತೆಯಾಟವು ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಹೆಸರಿನಲ್ಲಿದೆ ಈ ಜೋಡಿ 189ರನ್‌ಗಳ ಜೊತೆಯಾಟದ ದಾಖಲೆ ಹೊಂದಿದ್ದು, ಟಾಪ್‌ 3 ಜೊತೆಯಾಟವನ್ನು ಈ ಕೆಳಗೆ ಕಾಣಬಹುದಾಗಿದೆ.

189: ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ
161: ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್
158: ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್

Story first published: Monday, October 10, 2022, 12:08 [IST]
Other articles published on Oct 10, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+