For Quick Alerts
ALLOW NOTIFICATIONS  
For Daily Alerts
 

ಧೋನಿ,ಕೊಹ್ಲಿ ಮತ್ತು ರೋಹಿತ್ ಈ ಮೂವರನ್ನೂ ಅತಿಹೆಚ್ಚು ಕಾಡಿದ ಏಕೈಕ ಬೌಲರ್ ಈತ!

 Here is the List of bowlers who dismissed MS Dhoni- Virat Kohli-Rohit Sharma most times in IPL
Virat , Rohit ಹಾಗು Dhoniಗೆ ಕಂಟಕವಾಗಿರುವ ಬೌಲರ್ ಯಾರು? | Oneindia Kannada

ಏಪ್ರಿಲ್ 9ರಂದು ಆರಂಭವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಧ್ಯದಲ್ಲಿಯೇ ಮೊಟಕುಗೊಂಡಿದೆ. ಟೂರ್ನಿಯಲ್ಲಿ ಇದುವರೆಗೂ 29 ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದು ಕೆಲ ಆಟಗಾರರಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಕಾರಣ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಮುಂದೂಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಉಳಿದ 31 ಪಂದ್ಯಗಳನ್ನು ಮುಂದುವರಿಸುವ ಯೋಜನೆಯಲ್ಲಿದೆ ಬಿಸಿಸಿಐ.

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ ಇತಿಹಾಸದಲ್ಲಿ ಸೃಷ್ಟಿಯಾಗಿರುವ ಕೆಲವು ದಾಖಲೆಗಳು ಮತ್ತು ಮೈಲಿಗಲ್ಲುಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ವಿಶೇಷ ದಾಖಲೆ ಮತ್ತು ಮೈಲಿಗಲ್ಲುಗಳ ಪೈಕಿ ಬೌಲರ್ ಸಂದೀಪ್ ಶರ್ಮಾ ಕೂಡ ತನ್ನದೇ ಆದ ವಿಶೇಷ ದಾಖಲೆಯೊಂದನ್ನು ಹೊಂದಿದ್ದಾರೆ. ಹೌದು ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಸಂದೀಪ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ ಎಂ ಎಸ್ ಧೋನಿ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಕೆಟ್‍ಗಳನ್ನು ಅತಿಹೆಚ್ಚು ಬಾರಿ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಧೋನಿ, ಕೊಹ್ಲಿ ಹಾಗೂ ರೋಹಿತ್ ಈ ಮೂವರು ಆಟಗಾರರನ್ನೊಳಗೊಂಡಂತೆ ಒಟ್ಟು 11 ವಿಕೆಟ್‍ಗಳನ್ನು ಪಡೆಯುವುದರ ಮೂಲಕ ಸಂದೀಪ್ ಶರ್ಮಾ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಇನ್ನು ಸಂದೀಪ್ ಶರ್ಮಾ ಹೊರತುಪಡಿಸಿದಂತೆ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಈ ಮೂವರು ಆಟಗಾರರನ್ನೊಳಗೊಂಡಂತೆ ಅತಿಹೆಚ್ಚು ವಿಕೆಟ್‍ಗಳನ್ನು ಪಡೆದವರೆಂದರೆ: ಅಮಿತ್ ಮಿಶ್ರಾ 10, ಜಹೀರ್ ಖಾನ್ 10, ಆಶೀಶ್ ನೆಹ್ರಾ 9, ಸುನಿಲ್ ನರೇನ್ 9 ವಿಕೆಟ್‍ಗಳು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಸಂದೀಪ್ ಶರ್ಮಾ ಹೊರತುಪಡಿಸಿ ಉಳಿದೆಲ್ಲಾ ಬೌಲರ್‌ಗಳೂ ದೊಡ್ಡ ಮಟ್ಟದ ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವವುಳ್ಳವರಾಗಿದ್ದರೆ ಸಂದೀಪ್ ಶರ್ಮಾ ಮಾತ್ರ ಕೇವಲ ಒಂದೇ ಒಂದು ಅಂತಾರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯವನ್ನು ಆಡಿರುವ ಅನುಭವ ಹೊಂದಿದ್ದಾರೆ. ಆದರೆ ಐಪಿಎಲ್ ವಿಷಯದಲ್ಲಿ ಸಂದೀಪ್ ಶರ್ಮಾ ತುಂಬಾ ಪರಿಣಾಮಕಾರಿ ಬೌಲರ್.

Story first published: Thursday, May 20, 2021, 19:45 [IST]
Other articles published on May 20, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+