ಟೆಸ್ಟ್ ಚಾಂಪಿಯನ್‍ಶಿಪ್: ಅಶ್ವಿನ್ ಹಾಗೂ ಜೆಮಿಸನ್ ನಡುವಿನ ಪೈಪೋಟಿಯಲ್ಲಿ ಗೆಲ್ಲುವವರಾರು?

ಟೀಮ್ ಇಂಡಿಯಾ ಜೂನ್ 3ರಂದು ಇಂಗ್ಲೆಂಡ್‌ನ ಸೌತಾಂಪ್ಟನ್ ತಲುಪಲಿದ್ದು ಜೂನ್ 18ರಂದು ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣಸಾಡಲಿದೆ. ಈ ಪಂದ್ಯ ಮುಗಿದ ಬಳಿಕ ಇಂಗ್ಲೆಂಡ್‌ನಲ್ಲಿಯೇ ಉಳಿದುಕೊಳ್ಳಲಿರುವ ಟೀಮ್ ಇಂಡಿಯಾ ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.
ಯುಎಇಯಲ್ಲಿ ಐಪಿಎಲ್ ಮುಂದುವರೆದಾಗ ಈ 3 ತಂಡಗಳು ಕಂಗಾಲಾಗುವುದು ಖಚಿತ!
ಜೂನ್ 18ರಿಂದ ಜೂನ್ 22ರವರೆಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ನಡೆಯಲಿದ್ದು ಯಾವ ತಂಡ ಜಯವನ್ನು ಸಾಧಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ. ಒಂದೆಡೆ ಯಾವ ತಂಡ ಟ್ರೋಫಿಯನ್ನು ಗೆಲ್ಲಲಿದೆ ಎಂಬ ಕೌತುಕತೆ ಇದ್ದರೆ ಮತ್ತೊಂದೆಡೆ ಆಟಗಾರರ ನಡುವೆ ಪೈಪೋಟಿ ಏರ್ಪಟ್ಟಿದೆ. ಹೌದು ಟೀಮ್ ಇಂಡಿಯಾದ ರವಿಚಂದ್ರನ್ ಅಶ್ವಿನ್ ಹಾಗೂ ನ್ಯೂಜಿಲೆಂಡ್ ತಂಡದ ಕೈಲ್ ಜೆಮಿಸನ್ ನಡುವೆ ವಿಕೆಟ್ ವಿಚಾರವಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ.
ಐಪಿಎಲ್ 2022: ಹೊಸ ತಂಡಗಳಾಗಿ ಸೇರ್ಪಡೆಯಾಗಬಹುದಾದ 5 ನಗರಗಳು
ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ಇದುವರೆಗೂ ಅತಿಹೆಚ್ಚು ಬಾರಿ 5 ವಿಕೆಟ್‍ಗಳ ಗೊಂಚಲನ್ನು ಪಡೆದ ಆಟಗಾರರ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್, ಕೈಲ್ ಜೆಮಿಸನ್, ನಾಥನ್ ಲಿಯನ್ ಹಾಗೂ ಅಕ್ಷರ್ ಪಟೇಲ್ ಸಮಬಲವನ್ನು ಸಾಧಿಸಿದ್ದಾರೆ. ಈ ನಾಲ್ವರೂ ಆಟಗಾರರು ಒಟ್ಟು 4 ಬಾರಿ 5 ವಿಕೆಟ್‍ಗಳ ಗೊಂಚಲನ್ನು ಪಡೆದಿದ್ದಾರೆ. ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಕೈಲ್ ಜೆಮಿಸನ್ ಕಣಕ್ಕಿಳಿಯುವುದು ಖಚಿತ. ಹೀಗಾಗಿ ಇಬ್ಬರಲ್ಲಿ ಯಾವ ಆಟಗಾರ ಮತ್ತೊಮ್ಮೆ 5 ವಿಕೆಟ್‍ಗಳ ಗೊಂಚಲನ್ನು ಪಡೆದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications