ಐಪಿಎಲ್: ಪವರ್‌ಪ್ಲೇನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು ಗೊತ್ತಾ?

ಏಪ್ರಿಲ್ 9ರಂದು ಆರಂಭವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಧ್ಯದಲ್ಲಿಯೇ ಮೊಟಕುಗೊಂಡಿದೆ. ಟೂರ್ನಿಯಲ್ಲಿ ಇದುವರೆಗೂ 29 ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದು ಕೆಲ ಆಟಗಾರರಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಕಾರಣ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಮುಂದೂಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಉಳಿದ 31 ಪಂದ್ಯಗಳು ಇಂಗ್ಲೆಂಡ್ ಅಥವಾ ಯುಎಇಯಲ್ಲಿ ನಡೆಯಲಿವೆ ಎಂಬ ಸುದ್ದಿ ಹರಿದಾಡುತ್ತಿದೆ.
ಐಪಿಎಲ್ ಇತಿಹಾಸದಲ್ಲಿ ಹಲವಾರು ದಾಖಲೆಗಳು ನಿರ್ಮಾಣವಾಗಿದ್ದು ಪವರ್‌ಪ್ಲೇ ಓವರ್‌ಗಳಲ್ಲಿ ಕೂಡ ಸಾಕಷ್ಟು ದಾಖಲೆ ನಿರ್ಮಾಣವಾಗಿವೆ. ಪವರ್‌ಪ್ಲೇ ಓವರ್‌ಗಳಲ್ಲಿ ಬೌಲರ್‌ಗಳು ವಿಕೆಟ್ ಪಡೆಯುವುದು ಕಷ್ಟ, ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್ ಕಲೆ ಹಾಕುವ ಆ ಓವರ್‌ಗಳಲ್ಲಿ ಬೌಲರ್ ಮೇಲೆ ಹೆಚ್ಚಿನ ಒತ್ತಡವಿರುತ್ತದೆ. ಅಂತಹ ಸಮಯದಲ್ಲಿಯೂ ಅತಿಹೆಚ್ಚು ವಿಕೆಟ್‍ಗಳನ್ನು ಪಡೆದು ಕೆಲ ಬೌಲರ್‌ಗಳು ದಾಖಲೆಯನ್ನು ಬರೆದಿದ್ದಾರೆ.
ಇದುವರೆಗೂ ನಡೆದಿರುವ ಎಲ್ಲಾ ಐಪಿಎಲ್ ಟೂರ್ನಿಗಳ ಪೈಕಿ ಪವರ್‌ಪ್ಲೇ ಓವರ್‌ಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳೆಂದರೆ : ಸಂದೀಪ್ ಶರ್ಮ 53, ಜಹೀರ್ ಖಾನ್ 52, ಭುವನೇಶ್ವರ್ ಕುಮಾರ್ 50, ಇಶಾಂತ್ ಶರ್ಮಾ 45 ಹಾಗೂ ಉಮೇಶ್ ಯಾದವ್ 45 ವಿಕೆಟ್‍ಗಳು. ವಿಶೇಷವೆಂದರೆ ಈ ದಾಖಲೆಯ ಪಟ್ಟಿಯಲ್ಲಿರುವ ಟಾಪ್ 5 ಬೌಲರ್‌ಗಳೆಲ್ಲರೂ ಭಾರತೀಯರೇ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications