ಭಾರತ vs ಶ್ರೀಲಂಕಾ ಟೆಸ್ಟ್ ಸರಣಿ: ಹೆಡ್ ಟು ಹೆಡ್ ರೆಕಾರ್ಡ್

ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಇದೇ ತಿಂಗಳ 4ರಂದು ಆರಂಭವಾಗಲಿದೆ. ಈಗಾಗಲೇ ಟಿ20 ಸರಣಿಯಲ್ಲಿ ಲಂಕಾ ಪಡೆಯನ್ನ ವೈಟ್‌ವಾಶ್ ಮಾಡಿರುವ ಭಾರತ ಟೆಸ್ಟ್ ಸರಣಿಗೂ ತಯಾರಿ ಮಾಡಿಕೊಂಡಿದೆ. ಅತ್ತ ಶ್ರೀಲಂಕಾ ಕೂಡ ಟೆಸ್ಟ್ ಸರಣಿಯಲ್ಲಿ ಹೇಗಾದರೂ ಮಾಡಿ ತಿರುಗೇಟು ನೀಡಬೇಕೆಂದು ಸಿದ್ಧತೆ ನಡೆಸಿವೆ.
ಈಗಿರುವ ಟಿ20 ಸರಣಿಯನ್ನು ವೈಟ್ ವಾಶ್ ಮಾಡಿದ ಫಲಿತಾಂಶವನ್ನು ಟೆಸ್ಟ್ ಸರಣಿಯಲ್ಲೂ ಪುನರಾವರ್ತಿಸುವ ಆಶಯವನ್ನು ಟೀಂ ಇಂಡಿಯಾ ಹೊಂದಿದೆ. ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ 100 ನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದು, ಟೀಂ ಇಂಡಿಯಾ ಗೆಲುವಿನ ಓಟ ಮುಂದುವರಿಸುತ್ತಾ ಕಾದುನೋಡಬೇಕಿದೆ. ಇದರ ನಡುವೆ ಈ ಸರಣಿಯಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಟೆಸ್ಟ್ ಸರಣಿಯ ದಾಖಲೆಗಳು, ಹೆಡ್ ಟು ಹೆಡ್ ರೆಕಾರ್ಡ್ ಈ ಕೆಳಗಿದೆ.

ಭಾರತದ ಮೇಲುಗೈ
ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಭಾರತ ಮೇಲುಗೈ ಸಾಧಿಸಿದೆ. ಭಾರತ ಇದುವರೆಗೆ ಗರಿಷ್ಠ 20 ಟೆಸ್ಟ್‌ಗಳಲ್ಲಿ ಗೆಲುವು ಸಾಧಿಸಿದ್ದು, ಉಭಯ ತಂಡಗಳು 44 ಟೆಸ್ಟ್‌ಗಳಲ್ಲಿ ಮುಖಾಮೂಖಿಯಾಗಿದೆ. ಶ್ರೀಲಂಕಾ 7 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಇನ್ನುಳಿದ 17 ಟೆಸ್ಟ್ ಪಂದ್ಯಗಳು ಫಲಿತಾಂಶವಿಲ್ಲದೆ ಡ್ರಾದಲ್ಲಿ ಅಂತ್ಯಗೊಂಡಿವೆ. ತವರಿನಲ್ಲಿ ಭಾರತ 11 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ ಮತ್ತು ಶ್ರೀಲಂಕಾದಲ್ಲಿ 9 ಪಂದ್ಯಗಳನ್ನು ಗೆದ್ದಿದೆ. ಶ್ರೀಲಂಕಾದ ವಿಚಾರದಲ್ಲಿ ತಂಡವು ತವರಿನಲ್ಲಿ 7 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ ಮತ್ತು ಭಾರತದಲ್ಲಿ ಇದುವರೆಗೆ ಒಂದು ಪಂದ್ಯವನ್ನು ಗೆದ್ದಿಲ್ಲ. ಶ್ರೀಲಂಕಾದಲ್ಲಿಯೂ ಟೀಂ ಇಂಡಿಯಾ ಆ ತಂಡಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಶ್ರೀಲಂಕಾ ತನ್ನ ತವರಲ್ಲೇ 7 ಗೆದ್ದಿದ್ದರೆ, ಭಾರತ 9 ಪಂದ್ಯ ಗೆದ್ದಿದೆ.

ಕೇವಲ ಮೂರು ಸರಣಿ ಗೆದ್ದಿರುವ ಲಂಕಾ
ಭಾರತ ಮತ್ತು ಶ್ರೀಲಂಕಾ ನಡುವಿನ 17 ಟೆಸ್ಟ್ ಸರಣಿಗಳಲ್ಲಿ ಭಾರತ ಗರಿಷ್ಠ 9 ಸರಣಿಗಳನ್ನು ಗೆದ್ದಿದೆ. ಶ್ರೀಲಂಕಾ ಕೇವಲ 3 ಸರಣಿಗಳನ್ನು ಗೆದ್ದಿದೆ. 4 ಟೆಸ್ಟ್ ಸರಣಿ ಡ್ರಾದಲ್ಲಿ ಅಂತ್ಯಗೊಂಡಿದೆ. ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ 1998-1999 ರ ಏಷ್ಯನ್ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿ ಟೆಸ್ಟ್ ಸರಣಿಯಲ್ಲಿ ಆಡಿದವು. ಪಾಕಿಸ್ತಾನ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು.
ಐಪಿಎಲ್: ಆಟಗಾರರ ಆಗಮನಕ್ಕೆ ದಿನಾಂಕ ಫಿಕ್ಸ್; ದೇಶಿ ಮತ್ತು ವಿದೇಶಿ ಆಟಗಾರರಿಗೆ ವಿಭಿನ್ನ ಕ್ವಾರಂಟೈನ್ ನಿಯಮ

ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತ-ಲಂಕಾ ಮುಖಾಮುಖಿ
ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯು ಈ ತಿಂಗಳು 4 ರಿಂದ ಪ್ರಾರಂಭಗೊಳ್ಳಲಿದ್ದು, 2 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಇದೇ ತಿಂಗಳ 4ರಿಂದ ಮೊಹಾಲಿ ಮೊದಲ ಪಂದ್ಯಕ್ಕೆ ವೇದಿಕೆಯಾಗಲಿದೆ. 4ರಿಂದ 8ರವರೆಗೆ ಮೊದಲ ಟೆಸ್ಟ್ ನಡೆಯಲಿದೆ. ಇದರ ನಂತರದಲ್ಲಿ ಮಾರ್ಚ್ 12ರಿಂದ 16ರವರೆಗೆ ಬೆಂಗಳೂರಿನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಪಂದ್ಯ ಹಗಲು ರಾತ್ರಿ ಟೆಸ್ಟ್ ಪಂದ್ಯವಾಗಿರಲಿದೆ. ಮೊದಲ ಟೆಸ್ಟ್ ಪಂದ್ಯದೊಂದಿಗೆ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ 100 ಟೆಸ್ಟ್ ಪಂದ್ಯಗಳ ಮೈಲುಗಲ್ಲು ತಲುಪಲಿದ್ದಾರೆ.

ಟೀಂ ಇಂಡಿಯಾ ಸ್ಕ್ವಾಡ್
ರೋಹಿತ್ ಶರ್ಮಾ (ನಾಯಕ), ಪ್ರಿಯಾಂಕ್ ಪಾಂಚಾಲ್, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭ್‌ಮನ್ ಗಿಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆ.ಎಸ್ ಭರತ್, ರವೀಂದ್ರ ಜಡೇಜಾ, ಜಯಂತ್ ಯಾದವ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಸೌರಭ್ ಕುಮಾರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ (ಉಪ ನಾಯಕ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications