ಒಂದೇ ವಾರದಲ್ಲಿ ಎರಡು ಸ್ವರ್ಣ ಪದಕಕ್ಕೆ ಮುತ್ತಿಟ್ಟ ಹಿಮಾ ದಾಸ್

ಕುಂತೊ (ಪೋಲೆಂಡ್), ಜುಲೈ 08: ಭಾರತದ ಭವಿಷ್ಯದ ತಾರೆ ಚಾಂಪಿಯನ್ ಸ್ಪ್ರಿಂಟರ್ ಹಿಮಾ ದಾಸ್, ಕಳೆದ ಒಂದು ವಾರ ಅವಧಿಯಲ್ಲಿ ತಮ್ಮ ಎರಡನೇ ಅಂತಾರಾಷ್ಟ್ರೀಯ ಸ್ವರ್ಣ ಪದಕಕ್ಕೆ ಮುತ್ತಿಟ್ಟಿದ್ದಾರೆ
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
19 ವರ್ಷದ ಯುವ ಪ್ರತಿಭೆ ಹಿಮಾ ದಾಸ್, ಭಾನುವಾರ ನಡೆದ ಕುಂತೊ ಅಥ್ಲೆಟಿಕ್ಸ್ ಕೂಟದಲ್ಲಿನ ಮಹಿಳೆಯರ 200 ಮೀ. ಓಟದಲ್ಲಿ ಮೊದಲಿಗರಾಗಿ ಗುರಿ ಮುಟ್ಟಿ ಬಂಗಾರಕ್ಕೆ ಕೊರಳೊಡ್ಡಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಚೇತರಿಸಿರುವ ದಾಸ್, 23.97 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿ ಚಿನ್ನ ಗೆದ್ದರೆ, ಭಾರತದ ಮತ್ತೊಬ್ಬ ಓಟಗಾರ್ತಿ ವಿಕೆ ವಿಸ್ಮಯಾ (24.06) ಬೆಳ್ಳಿ ತಮ್ಮದಾಗಿಸಿಕೊಂಡಿದ್ದಾರೆ.
ಹಿಮಾ ದಾಸ್ ಪ್ರಸಕ್ತ ಸಾಲಿನಲ್ಲಿ ಸ್ಪರ್ಧಿಸಿದ ಎರಡನೇ ಚಿನ್ನದ ಪದಕ ಇದಾಗಿದೆ. ಕಳೆದ ವರ್ಷ 200 ಮೀ. ಓಟದಲ್ಲಿ ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿ 23.10 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ್ದರು. ಕಳೆದ ಮಂಗಳವಾರ ಪೋಲೆಂಡ್‌ನ ಪೊನ್ಝಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಹಿಮಾ, 23.65 ಸೆಕೆಂಡ್‌ಗಳಲ್ಲಿ ರೇಸ್ ಪೂರೈಸಿ ಚಿನ್ನ ಗೆದ್ದಿದ್ದರು. ಇದೇ ರೇಸ್‌ನಲ್ಲಿ ಭಾರತದ ವಿಸ್ಮಯಾ (23.75 ಸೆ.) ಮೂರನೇ ಸ್ಥಾನದೊಂದಿಗೆ ಕಂಚು ಗೆದ್ದಿದ್ದರು.
ಏಕದಿನ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ಸ್ ಪಂದ್ಯ ಎಲ್ಲಿ? ಯಾವಾಗ?
ಇದೇ ವೇಳೆ ರಾಷ್ಟ್ರೀಯ ದಾಖಲೆಯ ವೀರ ಮುಹಮ್ಮದ್ ಅನಾಸ್ ಇದೇ ಕೂಟದ ಪುರುಷರ 200 ಮೀ. ಓಟದಲ್ಲಿ 21.18 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿ ಚಿನ್ನ ಗೆದ್ದಿದ್ದಾರೆ. ಎಂ.ಜಿ ಬಬೀರ್ 400 ಮೀ. ಹರ್ಡಲ್ಸ್‌ನಲ್ಲಿ 50.21 ಸೆಕೆಂಡ್‌ಗಳ ಸಾಧನೆಯೊಂದಿಗೆ ಬಂಗಾರದ ಸಾಧನೆ ಮಾಡಿದ್ದಾರೆ, ಇದೇ ರೇಸ್‌ನಲ್ಲಿ ಜಿತಿನ್ ಪಾಲ್ 3ನೇ (52.26 ಸೆ.) ಸ್ಥಾನ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications