ಭಾರತ-ನ್ಯೂಜಿಲೆಂಡ್ 2ನೇ ಟಿ20: ರೋಹಿತ್ ಹೆಸರಲ್ಲಿ ದಾಖಲಾಯ್ತು ಈ 3 ದಾಖಲೆ

ಟೀಮ್ ಇಂಡಿಯಾ ಟಿ20 ಫಾರ್ಮೆಟ್‌ನ ಹೊಸ ನಾಯಕ ರೋಹಿತ್ ಶರ್ಮಾ ಸತತ ಎರಡು ಪಂದ್ಯಗಳನ್ನ ಟೀಂ ಇಂಡಿಯಾಗೆ ಗೆಲ್ಲಿಸಿಕೊಟ್ಟಿದ್ದಲ್ಲದೆ, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಟಿ20 ಸರಣಿಯನ್ನು ಭಾರತ ಜಯಿಸಿದೆ.
ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮತ್ತು ಹೊಸ ಕೋಚ್ ರಾಹುಲ್ ದ್ರಾವಿಡ್ ಕಾಂಬಿನೇಷನ್‌ನಲ್ಲಿ ಭಾರತವು ಮೊದಲ ಟಿ20 ಸರಣಿಯನ್ನ ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಜೊತೆಗೂಡಿದ ರೋಹಿತ್ 36 ಎಸೆತಗಳಲ್ಲಿ 55 ರನ್ ಕಲೆಹಾಕುವ ಮೂಲಕ ಕಿವೀಸ್ ಬೌಲರ್‌ಗಳನ್ನ ಬೆಂಡೆತ್ತಿದ್ರು.
ರೋಹಿತ್ ಹಾಗೂ ಕೆ.ಎಲ್ ರಾಹುಲ್ ಅವರ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಭಾರತಕ್ಕೆ ಗೆಲುವು ದಾಖಲಿಸಲು ಸಹಾಯ ಮಾಡಿತು. ಇದರ ಜೊತೆಗೆ ರೋಹಿತ ಅನೇಕ ವೈಯಕ್ತಿಕ ಮೈಲಿಗಲ್ಲುಗಳನ್ನು ಸಾಧಿಸಿದ್ರು.

ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ
ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ 50 ಪ್ಲಸ್ ಸ್ಕೋರ್‌ಗಳನ್ನು ದಾಖಲಿಸಿದ್ದಾರೆ. ರೋಹಿತ್ ಶರ್ಮಾ ಟಿ20 ಇಂಟರ್‌ನ್ಯಾಷನಲ್ ಕ್ರಿಕೆಟ್‌ನಲ್ಲಿ 29 ಬಾರಿ ಅರ್ಧಶತಕಕ್ಕೂ ಹೆಚ್ಚು ಗಳಿಸಿದ್ದು, ಈ ಮೂಲಕ ವಿರಾಟ್ ಕೊಹ್ಲಿಯ ದಾಖಲೆಯನ್ನ ಸರಿಗಟ್ಟಿದ್ದಾರೆ. ವಿರಾಟ್ ಕೊಹ್ಲಿ ಕೂಡ ಟಿ20 ಕ್ರಿಕೆಟ್‌ನಲ್ಲಿ 29 ಬಾರಿ 50ಕ್ಕೂ ಹೆಚ್ಚು ಗಳಿಸಿದ್ದಾರೆ, ಆದರೆ ಒಂದೂ ಶತಕ ದಾಖಲಿಸಿಲ್ಲ.
ಆದರೆ ರೋಹಿತ್ ಶರ್ಮಾ 25 ಅರ್ಧಶತಕ ಮತ್ತು 4 ಭರ್ಜರಿ ಶತಕ ದಾಖಲಿಸುವ ಮೂಲಕ ಕೊಹ್ಲಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ.
ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚಿನ 50+ ಸ್ಕೋರ್‌ಗಳು:
29 ವಿರಾಟ್ ಕೊಹ್ಲಿ
29 ರೋಹಿತ್ ಶರ್ಮಾ
25 ಬಾಬರ್ ಅಜಂ
22 ಡೇವಿಡ್ ವಾರ್ನರ್
ಎಬಿ ಡಿವಿಲಿಯರ್ಸ್ ಹೇಳಿದ ಆ ಮಾತು ನನ್ನ ವೃತ್ತಿಜೀವನದುದ್ದಕ್ಕೂ ಹಾಗೆಯೇ ಉಳಿಯಲಿದೆ: ಹರ್ಷಲ್ ಪಟೇಲ್

ಅತಿ ಹೆಚ್ಚು ಶತಕದ ಜೊತೆಯಾಟದಲ್ಲಿ ಹಿಟ್‌ಮ್ಯಾನ್ ಭಾಗಿ
ರಾಂಚಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಟಿ20 ಕ್ರಿಕೆಟ್‌ನಲ್ಲಿ ಶತಕದ ಜೊತೆಯಾಟವಾಡಿದ್ರು. ಈ ಮೂಲಕ ರಾಹುಲ್ ರೋಹಿತ್ ಹೊಸ ದಾಖಲೆಯ ಹೆಜ್ಜೆಯನ್ನಿಟ್ಟಿದೆ. ಇದರ ಜೊತೆಗೆ ರೋಹಿತ್ ಶರ್ಮಾ ವೈಯಕ್ತಿಕ ಹೊಸ ಮೈಲಿಗಲ್ಲನ್ನು ತಲುಪಿದ್ದಾರೆ.
ರೋಹಿತ್ ಈ ರೀತಿಯಾಗಿ ಶತಕದ ಜೊತೆಯಾಟವಾಡಿರುವುದು 13ನೇ ಬಾರಿ. ಈ ಮೊದಲು ಶಿಖರ್ ಧವನ್ ಜೊತೆಗೂಡಿ ಟಿ20 ಕ್ರಿಕೆಟ್‌ನಲ್ಲಿ ಶತಕದ ಜೊತೆಯಾಟವಾಡಿದ್ದು, ಇದೀಗ ರಾಹುಲ್‌ನೊಂದಿಗೆ 100ರನ್‌ಗಳ ಗಡಿ ದಾಟಿದ್ದಾರೆ. ಈ ಮೂಲಕ ಪಾಕಿಸ್ತಾನದ ಬಾಬರ್ ಅಜಮ್ ಮತ್ತು ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಅವರನ್ನು ಹಿಂದಿಕ್ಕಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟದಲ್ಲಿ ಭಾಗಿಯಾದ ಪ್ಲೇಯರ್ಸ್
13 ರೋಹಿತ್ ಶರ್ಮಾ*
12 ಬಾಬರ್ ಆಜಂ/ಮಾರ್ಟಿನ್ ಗುಪ್ಟಿಲ್
11 ಡೇವಿಡ್ ವಾರ್ನರ್
ನಾನು ಯಾವಾಗಲೂ ನಿಮ್ಮ ನಂ.1 ಫ್ಯಾನ್: ABD ನಿವೃತ್ತಿ ಸುದ್ದಿ ಕೇಳಿ ತೀವ್ರ ನೊಂದುಕೊಂಡ ವಿರಾಟ್ ಕೊಹ್ಲಿ

ಟಿ20ಯಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟವಾಡಿದ ಜೋಡಿ
ಟೀಂ ಇಂಡಿಯಾದ ಆರಂಭಿಕ ಜೋಡಿ ಕೆ.ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಈಗ ಚುಟುಕು ಕ್ರಿಕೆಟ್‌ನಲ್ಲಿ ಜಂಟಿ ಶತಕದ ಜೊತೆಯಾಟವನ್ನು ಹೊಂದಿದ್ದಾರೆ. ಅವರು ಐದು ಬಾರಿ 100 ರನ್ ಗಳ ಜೊತೆಯಾಟದ ದಾಖಲೆ ಹೊಂದಿರುವ ಪಾಕಿಸ್ತಾನದ ಆರಂಭಿಕ ಜೋಡಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್‌ರನ್ನು ಸರಿಗಟ್ಟಿದ್ದಾರೆ.
ಆದರೆ, ಪಾಕಿಸ್ತಾನದ ಜೋಡಿ 22 ಇನ್ನಿಂಗ್ಸ್ ತೆಗೆದುಕೊಂಡಿದ್ದರೆ, ಭಾರತ ಜೋಡಿ 27 ಇನ್ನಿಂಗ್ಸ್ ತೆಗೆದುಕೊಂಡು ಈ ಸಾಧನೆ ಮಾಡಿದೆ.
ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟವಾಡಿದ ಜೋಡಿ
5 ಬಾಬರ್ - ರಿಜ್ವಾನ್ (22 ಇನ್ನಿಂಗ್ಸ್)
5 ರೋಹಿತ್ - ರಾಹುಲ್ (27)
4 ಗಪ್ಟಿಲ್ - ವಿಲಿಯಮ್ಸನ್ (30)
4 ರೋಹಿತ್ - ಧವನ್ (52)
ಸತತ 2ನೇ ಟಾಸ್ ಗೆದ್ದ ರೋಹಿತ್: ಕೊಹ್ಲಿ ಕಾಲೆಳೆದ ನೆಟ್ಟಿಗರು
ರೋಹಿತ್ ಶರ್ಮಾ ನಾಯಕನಾಗಿ ಸತತ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದಿರುವುದು ಅವರ ಯಶಸ್ಸಿಗೆ ಇನ್ನಷ್ಟು ಕೊಡುಗೆ ನೀಡಿದೆ ಎಂದು ನೆಟ್ಟಿಗರು ಪ್ರಶಂಸಿದ್ದಾರೆ. ವಿರಾಟ್ ಕೊಹ್ಲಿ ಅತಿ ಹೆಚ್ಚು ಬಾರಿ ಟಾಸ್ ಸೋತಿರುವುದನ್ನು ಕಾಣಬಹುದು. ಆದ್ರೆ ರೋಹಿತ್ ಈ ರೀತಿಯಾಗಿ ಟಾಸ್ ಗೆಲ್ಲುತ್ತಾರೆ ಎಂದೇ ಅವರನ್ನ ಬಿಸಿಸಿಐ ನಾಯಕನನ್ನಾಗಿ ಮಾಡಿದೆ ಎಂದು ತಮಾಷೆ ಮಾಡುತ್ತಾ, ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಕಾಲೆಳೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications