ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: RCB ಅಭಿಮಾನಿಗಳಿಗೆ ಗುಡ್‌ನ್ಯೂಸ್: ಮೊದಲ ಪಂದ್ಯದಲ್ಲಿ ಕ್ರಿಸ್‌ಗೇಲ್‌ ಜೊತೆಗೆ ಚಿನ್ನಸ್ವಾಮಿ ಮೈದಾನದಲ್ಲಿ ಎಬಿಡಿ!

ABD and Chris gayle

ಮುಂಬರುವ 16ನೇ ಐಪಿಎಲ್ ಸೀಸನ್‌ಗೆ ಈಗಾಗಲೇ ತೆರೆಮರೆಯ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದ್ದು, ಡಿಸೆಂಬರ್‌ ತಿಂಗಳಿನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಯೋಜಿಸಿರುವಂತೆ ಐಪಿಎಲ್ 2022ರ ಸೀಸನ್‌ ಮಾರ್ಚ್‌ ತಿಂಗಳಿನಲ್ಲಿ ನಡೆಯಲಿದ್ದು, ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಇಲ್ಲಿದೆ.

ಕೋವಿಡ್‌ ಕಾರಣಗಳಿಂದಾಗಿ ಕಳೆದೆರಡು ಐಪಿಎಲ್ ಸೀಸನ್‌ಗಳನ್ನು ತಟಸ್ಥ ಸ್ಥಳಗಳಲ್ಲಿ ಆಯೋಜಿಸಲಾಗಿತ್ತು. ಆದ್ರೆ ಈ ಬಾರಿ ಆರ್‌ಸಿಬಿ ಅಭಿಮಾನಿಗಳು ಚಿನ್ನಸ್ವಾಮಿ ಮೈದಾನದಲ್ಲಿ ಎರಡು ವರ್ಷಗಳ ಬಳಿಕ ಪಂದ್ಯಗಳನ್ನ ನೇರವಾಗಿ ವೀಕ್ಷಿಸುವ ಅವಕಾಶ ಲಭಿಸಿದೆ. ಇದ್ರ ಜೊತೆಗೆ ಆರ್‌ಸಿಬಿ ಆಲ್ ಟೈಂ ಫೇವರಿಟ್ ಆಟಗಾರರಾದ ಕ್ರಿಸ್‌ಗೇಲ್ ಮತ್ತು ಎಬಿ ಡಿವಿಲಿಯರ್ಸ್‌ ಮೊದಲ ಪಂದ್ಯದಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಗುಡ್‌ ನ್ಯೂಸ್ ಕೊಟ್ಟ ಎಬಿಡಿ, ಕ್ರಿಸ್‌ಗೇಲ್‌ ಜೊತೆಗೆ ಮೈದಾನಕ್ಕಿಳಿಯಲಿದ್ದಾರೆ ಎಬಿಡಿ

ಗುಡ್‌ ನ್ಯೂಸ್ ಕೊಟ್ಟ ಎಬಿಡಿ, ಕ್ರಿಸ್‌ಗೇಲ್‌ ಜೊತೆಗೆ ಮೈದಾನಕ್ಕಿಳಿಯಲಿದ್ದಾರೆ ಎಬಿಡಿ

ಇತ್ತೀಚೆಗಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದ ಆರ್‌ಸಿಬಿ ಮಾಜಿ ಆಟಗಾರ ಮಿಸ್ಟರ್ 360 ಎಬಿ ಡಿವಿಲಿಯರ್ಸ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಮುಂಬರುವ ಐಪಿಎಲ್ ಸೀಸನ್‌ನಲ್ಲಿ ಆರ್‌ಸಿಬಿಯ ಮೊದಲ ಪಂದ್ಯದಲ್ಲಿ ಚಿನ್ನಸ್ವಾಮಿ ಮೈದಾನಕ್ಕೆ ಬರಲಿದ್ದೇನೆ ಎಂದು ತಿಳಿಸಿದ್ದಾರೆ. ಇದ್ರ ಜೊತೆಗೆ ಮತ್ತೊಂದು ಸಿಹಿ ಸುದ್ದಿ ಅಭಿಮಾನಿಗಳಿಗೆ ನೀಡಿದ್ದಾರೆ.

ಟಿ20 ಕ್ರಿಕೆಟ್‌ನ ಸ್ಪೋಟಕ ಬ್ಯಾಟರ್, ಯೂನಿವರ್ಸಲ್ ಬಾಸ್ ಕ್ರಿಸ್‌ಗೇಲ್ ಸಹ ಎಬಿಡಿ ಜೊತೆಗೆ ಚಿನ್ನಸ್ವಾಮಿ ಮೈದಾನಕ್ಕೆ ಬರಲಿದ್ದಾರೆ ಎಂದು ಸ್ವತಃ ಎಬಿಡಿ ಖಚಿತಪಡಿಸಲಿದ್ದಾರೆ.

'' ಐಪಿಎಲ್ 2023ರ ಸೀಸನ್‌ನಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಆರ್‌ಸಿಬಿ ಮೊದಲ ಪಂದ್ಯಕ್ಕೆ ನಾನು ಮತ್ತು ಕ್ರಿಸ್‌ ಗೇಲ್‌ ಬರಲಿದ್ದೇವೆ'' ಎಂದು ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.

ಎಬಿಡಿ ಮತ್ತು ಕ್ರಿಸ್‌ಗೇಲ್‌ ಇಬ್ಬರೂ ಚಿನ್ನಸ್ವಾಮಿ ಮೈದಾನದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಆರ್‌ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ಸೂಪರ್‌ಸ್ಟಾರ್‌ಗಳನ್ನ ಮತ್ತೆ ಒಟ್ಟಾಗಿ ನೋಡಲು ಸಾಧ್ಯವಾಗಿದೆ.

''ಗುರುವಾರ ಮಾತ್ರ ಸೈಲೆಂಟಾಗಿರು ವಿರಾಟ್'' : ಇಂಗ್ಲೆಂಡ್ ಮಾಜಿ ಆಟಗಾರನ ಅಚ್ಚರಿಯ ಕಾಮೆಂಟ್!

ಕೆಕೆಆರ್ ವಿರುದ್ಧ ಕೊನೆಯ ಐಪಿಎಲ್ ಪಂದ್ಯವನ್ನಾಡಿದ ಎಬಿಡಿ

ಕೆಕೆಆರ್ ವಿರುದ್ಧ ಕೊನೆಯ ಐಪಿಎಲ್ ಪಂದ್ಯವನ್ನಾಡಿದ ಎಬಿಡಿ

2021ರ ಐಪಿಎಲ್‌ ಸೀಸನ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್‌ ವಿರುದ್ಧ ಎಬಿಡಿ ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನಾಡುವ ಮೂಲಕ ಸ್ಪರ್ಧಾತ್ಮಕ ಟಿ20 ಲೀಗ್‌ನಿಂದ ಹೊರಗುಳಿದರು. ಆದ್ರೆ ಇದಕ್ಕೂ ಮೊದಲೇ ಎಬಿಡಿ 2018ರಲ್ಲಿ ಎಲ್ಲರಿಗೂ ಶಾಕ್ ಆಗುವ ರೀತಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ರು. ಎಬಿಡಿ ಇಷ್ಟು ವರ್ಷಗಳಿಂದ ದೂರ ಉಳಿದ್ರೂ ಅವರ ಫೇಮ್ ಮಾತ್ರ ಸ್ವಲ್ಪವೂ ಕಮ್ಮಿ ಆಗಿಲ್ಲ.

ಎಬಿಡಿ ಮತ್ತೆ ಕ್ರಿಕೆಟ್ ಆಡದೇ ಇರಲು ಪ್ರಮುಖ ಕಾರಣ ಕಣ್ಣಿಗೆ ಆಗಿರುವ ಶಸ್ತ್ರಚಿಕಿತ್ಸೆ. "ಬಲಭಾಗದ ಕಣ್ಣಿನ ಶಸ್ತ್ರಚಿಕಿತ್ಸೆಯಿಂದಾಗಿ ನಾನು ಮತ್ತೆ ಕ್ರಿಕೆಟ್ ಆಡುತ್ತಿಲ್ಲ" ಎಂದು ಸ್ವತಃ ಎಬಿಡಿ ತಿಳಿಸಿದ್ದಾರೆ.

ಐಪಿಎಲ್‌ ಕೋವಿಡ್ ಪೂರ್ವ ಸೀಸನ್‌ಗಳಂತೆ ವಾಪಸ್ಸಾಗಲಿದ್ದು, ಹೋಮ್ ಮತ್ತು ಅವೇಗಳಲ್ಲಿ ಪಂದ್ಯಗಳು ನಡೆಯಲಿದೆ. ಈ ಕುರಿತಾಗಿ ಈಗಾಗಲೇ ಬಿಸಿಸಿಐ ದೃಢಪಡಿಸಿದೆ.

ಜಾಕೆಟ್ ವಾಸನೆ ನೋಡಿ ಫುಲ್ ಟ್ರೋಲ್ ಆದ ರವಿಚಂದ್ರನ್ ಅಶ್ವಿನ್‌: ಕಾಲೆಳೆದ ಹರ್ಭಜನ್ ಸಿಂಗ್

ಭಾರತದಲ್ಲಿಯೇ ನಡೆಯಲಿದೆ IPL 2023ರ ಆಟಗಾರರ ಹರಾಜು

ಭಾರತದಲ್ಲಿಯೇ ನಡೆಯಲಿದೆ IPL 2023ರ ಆಟಗಾರರ ಹರಾಜು

ಇನ್ನು ಮುಂಬರುವ ಐಪಿಎಲ್ ಸೀಸನ್‌ ಕುರಿತಾದ ಆಟಗಾರರ ಹರಾಜು ಪ್ರಕ್ರಿಯೆಯು ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆಯುವುದಿಲ್ಲ, ಭಾರತದಲ್ಲಿಯೇ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ.

ಈ ಬಾರಿ ಆಟಗಾರರ ಹರಾಜು ಪ್ರಕ್ರಿಯೆಯು ಬೆಂಗಳೂರು ಇಲ್ಲವೆ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆಯಲು ಬಿಸಿಸಿಐ ತೀರ್ಮಾನಿಸಿದೆ ಎಂದು ವರದಿಯಾಗಿತ್ತು. ಆದ್ರೆ ಈ ಕುರಿತಾಗಿ ಭಾರೀ ವಿರೋಧ ಹಾಗೂ ಟೀಕೆಗಳು ಎದುರಾದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಅಥವಾ ದೇಶದ ಇನ್ಯಾವುದೇ ಪ್ರಮುಖ ನಗರದಲ್ಲಿ ನಡೆಸಲು ಬಿಸಿಸಿಐ ನಿರ್ಧಾರ ಬದಲಿಸಿದೆ.

Story first published: Wednesday, November 9, 2022, 15:00 [IST]
Other articles published on Nov 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X