ವಿಶ್ವಕಪ್ ನಲ್ಲಿ ಸಿಕ್ಸರ್ ಸುರಿಮಳೆಗೈಯುವ ಪಣ ತೊಟ್ಟ ರಸೆಲ್

ಕೋಲ್ಕತ್ತಾ, ಏಪ್ರಿಲ್ 28: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ಬಲ ಎನಿಸಿರುವ ಸ್ಫೋಟಕ ಬ್ಯಾಟ್ಸಮನ್ ಆಂಡ್ರೆ ರಸೆಲ್ ಅವರು ತಮ್ಮ ವಿಶ್ವಕಪ್ ಕನಸು ಬಿಚ್ಚಿಟ್ಟಿದ್ದಾರೆ. ವಿಶ್ವಕಪ್ ನಲ್ಲಿ ಸಿಕ್ಸರ್ ಸುರಿಮಳೆ ಹರಿಸುವ ಹಸಿವಿದೆ ಎಂದು ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ತಮ್ಮ ಆಸೆ ಹಂಚಿಕೊಂಡಿದ್ದಾರೆ.
ಯುಕೆಯಲ್ಲಿ ಮೇ 30ರಿಂದ ಆರಂಭವಾಗಲಿರುವ ವಿಶ್ವಕಪ್ 2019ರಲ್ಲಿ ಆಡಲಿರುವ ವೆಸ್ಟ್ ಇಂಡೀಸ್ ತಂಡದ 15 ಮಂದಿ ಪ್ರಾಥಮಿಕ ತಂಡದಲ್ಲಿ ರಸೆಲ್ ಅವರಿಗೂ ಸ್ಥಾನ ಸಿಕ್ಕಿದೆ. ಜುಲೈ 2018ರಲ್ಲಿ ಕಳೆದ ಬಾರಿಗೆ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿದ್ದ ರಸೆಲ್ ಅವರ ಇತ್ತೀಚಿನ ಫಾರ್ಮ್ ನಿಂದಾಗಿ ತಂಡದಲ್ಲಿ ಸ್ಥಾನ ಸಿಕ್ಕಿದೆ.
ಸದ್ಯ ಐಪಿಎಲ್ 12ರಲ್ಲಿ ಕೆಕೆಆರ್ ಪರ ಆಡುತ್ತಿರುವ ರಸೆಲ್ 10 ಇನ್ನಿಂಗ್ಸ್ ಗಳಲ್ಲಿ 209.27 ಸ್ಟ್ರೈಕ್ ರೇಟ್ ನಂತೀ 406 ರನ್ ಚೆಚ್ಚಿದ್ದಾರೆ. ವೆಸ್ಟ್ ಇಂಡೀಸ್ ಪರ ಕೂಡಾ ಸಿಕ್ಸ್ ಸಿಡಿಸಲು ನಾನು ಕಾದಿದ್ದೇನೆ ಎಂದಿದ್ದಾರೆ. ವಿಂಡೀಸ್ ಪರ 52 ಏಕದಿನ ಪಂದ್ಯಗಳಿಂದ 28ರನ್ ಸರಾಸರಿ ಹೊಂದಿದ್ದು, 65 ವಿಕೆಟ್ ಪಡೆದಿದ್ದಾರೆ.
ಕೆರಿಬಿಯನ್ ನಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಒಂದು ಪಂದ್ಯವಾಡಿ ನಂತರ ಮೊಣಕಾಲಿನ ನೋವಿನಿಂದ ಸರಣಿಯಿಂದ ಹೊರಗುಳಿದಿದ್ದರು. ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಕ್ಕೆ ಆಯ್ಕೆಯಾದರೂ ಗಾಯದ ಸಮಸ್ಯೆಯಿಂದ ಕಣಕ್ಕಿಳಿದಿರಲಿಲ್ಲ.
'ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದರ ಬಗ್ಗೆ ನನಗೆ ಯಾವುದೇ ರೀತಿ ಅಚ್ಚರಿಯಾಗಿಲ್ಲ. ನಾನು ಉತ್ತಮ ಲಯದಲ್ಲಿದ್ದೇನೆ. ಸದ್ಯ ಕೆಕೆಆರ್ ಪರ ಉತ್ತಮವಾಗಿ ಆಡುವುದು ನನ್ನ ಗುರಿ, ಪ್ರತಿ ಪಂದ್ಯದಲ್ಲೂ ನನ್ನ ಶ್ರೇಷ್ಠ ಪ್ರದರ್ಶನ ನೀಡಲು ಯತ್ನಿಸುವೆ' ಎಂದಿದ್ದಾರೆ.
ಆಂಡ್ರೆ ರಸೆಲ್ ಸೇರಿದಂತೆ ಕೆಕೆಆರ್ ಆಟಗಾರರ ಅಂಕಿ ಅಂಶ
ಕೆರಬಿಯನ್ ತಂಡದ ಭಾಗವಾಗಿ ಇರಲು ಹೆಚ್ಚು ಇಷ್ಟಪಡುತ್ತೇನೆ. ಟಿ20, ಫ್ರಾಂಚೈಸಿ ಕ್ರಿಕೆಟ್ ಖುಷಿ, ದುಡ್ಡು ತರುತ್ತದೆ. ಆದರೆ, ವಿಂಡೀಸ್ ತಂಡದ ಪರ ಆಡುವುದು ಹೆಮ್ಮೆಯ ವಿಚಾರ, ನಾನು ನಾನಾಗಿ ಉಳಿಯಬಹುದು, ಉತ್ತಮ ಪ್ರದರ್ಶನ ನೀಡಿದರೆ ಎಲ್ಲಾ ಗೊಂದಲಗಳು ಮರೆಯಾಗಲಿವೆ ಎಂದರು.
ಮೇ 31ರಂದು ಪಾಕಿಸ್ತಾನದ ವಿರುದ್ಧ ವೆಸ್ಟ್ ಇಂಡೀಸ್ ತನ್ನ ಮೊದಲ ಪಂದ್ಯವನ್ನಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications