ಉಮ್ರಾನ್ ಮಲ್ಲಿಕ್‌ನನ್ನು ವಕಾರ್ ಯೂನಿಸ್‌ಗೆ ಹೋಲಿಕೆ ಮಾಡಿದ ಬ್ರೆಟ್ ಲೀ

ಭಾರತದ ಉದಯೋನ್ಮುಕ ಪ್ರತಿಬೆ, ವೇಗದ ಬೌಲರ್ ಉಮ್ರಾನ್ ಮಲ್ಲಿಕ್ ಕುರಿತಾಗಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಪೀಡ್ ಸ್ಟಾರ್ ಬ್ರೆಟ್ ಲೀ ಹೊಗಳಿಕೆಯ ಮಾತನಾಡಿದ್ದಾರೆ. 23 ವರ್ಷದ ಉಮ್ರಾನ್ ಮಲ್ಲಿಕ್‌ರನ್ನು ನೋಡಿದ್ರೆ ಆತ ಪಾಕಿಸ್ತಾನದ ಮಾಜಿ ಬೌಲರ್ ವಕಾರ್ ಯೂನಿಸ್ ನೆನಪಿಗೆ ಬರುತ್ತಾರೆ ಎಂದಿದ್ದಾರೆ.
ಐಪಿಎಲ್ 2022ರಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಪರ ಎರಡನೇ ಸೀಸನ್ ಆಡಿದ ಉಮ್ರಾಣ್ ಮಲ್ಲಿಕ್ ಸತತ 150 kmph ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಅಲ್ಲದೆ 157 kmph ವೇಗದಲ್ಲಿ ಬೌಲಿಂಗ್ ಮಾಡಿ ದಾಖಲೆ ಕೂಡ ಮಾಡಿದ್ದರು. ಐಪಿಎಲ್ ಫೈನಲ್ ಪಂದ್ಯದವರೆಗೂ ಸಹ ಉಮ್ರಾನ್ ಮಲ್ಲಿಕ್ ಸೀಸನ್‌ನ ಅತಿ ವೇಗದ ಬೌಲರ್ ಆಗಿದ್ದರು. ಆದ್ರೆ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್‌ನ ಲ್ಯುಕಿ ಫರ್ಗುಸನ್ 157.3 kmph ವೇಗದಲ್ಲಿ ಬೌಲಿಂಗ್ ಮಾಡಿ ದಾಖಲೆ ಮುರಿದರು.

ಐಪಿಎಲ್‌ನಲ್ಲಿ ಬೊಂಬಾಟ್ ಬೌಲಿಂಗ್ ಮಾಡಿದ ಉಮ್ರಾನ್
ಐಪಿಎಲ್ 15ನೇ ಸೀಸನ್‌ನಲ್ಲಿ 20.18ರ ಸರಾಸರಿಯಲ್ಲಿ ಬೌಲಿಂಗ್ ಮಾಡಿದ ಉಮ್ರಾನ್ ಮಲ್ಲಿಕ್ 22 ವಿಕೆಟ್‌ಗಳನ್ನ ಕಬಳಿಸಿದರು. ಆದ್ರೆ ಆತ ಸಾಧಾರಣ ಎಕಾನಮಿ ದರವನ್ನು ಹೊಂದಿದ್ದು , ಬೌಲಿಂಗ್‌ನಲ್ಲಿ ಇನ್ನಷ್ಟು ಸುಧಾರಣೆ ಕಾಣಬೇಕಿದೆ.
IPL 2022ರಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ತಂಡದಿಂದ ಈ ಐವರು ಹೊರಬೀಳಬಹುದು!

ಉಮ್ರಾನ್ ಮಲ್ಲಿಕ್‌ನ ದೊಡ್ಡ ಅಭಿಮಾನಿ ಎಂದ ಬ್ರೆಟ್ ಲೀ
"ನಾನು ದೊಡ್ಡ ಅಭಿಮಾನಿ. ಉಮ್ರಾನ್ ಮಲಿಕ್ ಇನ್ನಷ್ಟು ಸಾಕಷ್ಟು ವೇಗವನ್ನು ಪಡೆದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಒಳ್ಳೆಯ ಸ್ಪರ್ಧಿ, ಉನ್ನತ ವ್ಯಕ್ತಿ, ಅವರು ಹಿಂದೆ ಕಂಡತಹ ಬಹಳಷ್ಟು ವೇಗದ ಬೌಲರ್‌ಗಳಂತೆ ಓಡುತ್ತಾರೆ. ಆತನನ್ನ ನೋಡಿದ್ರೆ ವಕಾರ್ ಯೂನಿಸ್ ನೆನಪಿಗೆ ಬರುತ್ತಾರೆರೆ" ಎಂದು ಬ್ರೆಟ್ ಲೀ ಎಎನ್‌ಐಗೆ ತಿಳಿಸಿದ್ದಾರೆ.
IPL 2022: ನಾನು ದ್ರಾವಿಡ್ ಮತ್ತು ಧೋನಿ ರೀತಿ ಅಲ್ಲ: ಸಂಜು ಸ್ಯಾಮ್ಸನ್

ಕಾಶ್ಮೀರಿ ಬೌಲರ್‌ಗೆ ಸಲಹೆ ನೀಡಿದ ಆಸಿಸ್ ಮಾಜಿ ವೇಗಿ
ಲೀ ಅವರು ಉಮ್ರಾನ್ ಅವರ ಬೌಲಿಂಗ್ ಆ್ಯಕ್ಷನ್‌ನಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಲು ಸಲಹೆ ನೀಡಿದರು. ಏಕೆಂದರೆ ಅದು ಎಂದಿಗೂ ಪರಿಪೂರ್ಣವಾಗುವುದಿಲ್ಲ, ಹೀಗಾಗಿ ಆತ ಅದನ್ನು ಮತ್ತಷ್ಟು ಸುಧಾರಿಸಲು ಮುಂದಾಗಬೇಕು ಎಂದಿದ್ದಾರೆ.
"ಅವನ ರನ್-ಅಪ್‌ನಲ್ಲಿ ಅವನು ಸುಧಾರಿಸಬಹುದಾದ ಏನಾದರೂ ಇದೆ, ಕ್ರಿಯೆ, ಮಣಿಕಟ್ಟಿನ ಸ್ಥಾನಗಳ ಗಟ್ಟಿಯಾದ ವಿವಿಧ ಭಾಗಗಳನ್ನು ಕೆಳಗೆ ಎಳೆಯುತ್ತದೆ. ಆದರೆ, ಒಬ್ಬರ ಕಾರ್ಯಗಳು ಎಂದಿಗೂ ಪರಿಪೂರ್ಣವಾಗುವುದಿಲ್ಲ ಎಂಬುದು ದೊಡ್ಡ ವಿಷಯ.
"ನನ್ನ ಆ್ಯಕ್ಷನ್ ಕೂಡ ಎಂದಿಗೂ ಪರಿಪೂರ್ಣವಾಗಿರಲಿಲ್ಲ. ಆದರೆ ನಾನು ಯಾವಾಗಲೂ ನನ್ನ ಅತ್ಯುತ್ತಮ ಆವೃತ್ತಿಯಾಗಲು ಪ್ರಯತ್ನಿಸಿದೆ. ಆದ್ದರಿಂದ ನಿವೃತ್ತಿಯಾಗುವ ಮೊದಲು ನಾನು ಬೌಲ್ ಮಾಡಿದ ಕೊನೆಯ ಎಸೆತದವರೆಗೂ ನಾನು ನನ್ನ ಆ್ಯಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಆದ್ದರಿಂದ, ಪ್ರತಿಯೊಬ್ಬರು ಪ್ರತಿದಿನ ಸುಧಾರಿಸಿಕೊಳ್ಳಬಹುದು'' ಎಂದು ಲೀ ಮತ್ತಷ್ಟು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications