Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಾನು ಕೂಡ ಕೊಹ್ಲಿಯ ಅಸಂಖ್ಯಾತ ಅಭಿಮಾನಿಗಳಲ್ಲಿ ಒಬ್ಬಾತ, ಆತ ಫಾರ್ಮ್‌ಗೆ ಮರಳುವುದು ಖಂಡಿತ: ಕಮ್ರಾನ್ ಅಕ್ಮಲ್

Kamran akhmal and kohli

ಭಾರತ ಕ್ರಿಕೆಟ್ ತಂಡವು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ಅವಲಂಬಿತವಾಗಿದೆ ಎಂದು ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕಮ್ರಾನ್ ಅಕ್ಮಲ್ ಹೇಳಿದ್ದಾರೆ. ಟೀಂ ಇಂಡಿಯಾ 33 ವರ್ಷದ ವಿರಾಟ್ ಕೊಹ್ಲಿ ಮೇಲೆ ಹೆಚ್ಚು ನಂಬಿಕೊಂಡಿರುವುದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ ಎಂದಿದ್ದಾರೆ.

ಆಧುನಿಕ ಕ್ರಿಕೆಟ್ ಯುಗದ ಲೆಜೆಂಡ್ ಆಗಿರುವ ವಿರಾಟ್ ಕೊಹ್ಲಿ 70 ಅಂತರಾಷ್ಟ್ರೀಯ ಶತಕಗಳನ್ನ ಸಿಡಿಸಿದ್ದರೂ ಸಹ, ಕಳೆದ ಎರಡೂವರೆ ವರ್ಷದಲ್ಲಿ ಒಂದೇ ಒಂದು ಶತಕ ಸಿಡಿಸಲಾಗದೆ ಫಾರ್ಮ್ ವೈಫಲ್ಯ ಅನುಭವಿಸಿದ್ದಾರೆ. ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್‌, ಟಿ20 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಐದು ಇನ್ನಿಂಗ್ಸ್‌ಗಳಲ್ಲಿ 11, 20, 1, 11, 16ರನ್ ಕಲೆಹಾಕಿದ್ದಾರೆ.

ಕೊಹ್ಲಿ ಅನೇಕ ಪಂದ್ಯಗಳನ್ನ ಒಬ್ಬರೇ ಗೆಲ್ಲಿಸಿಕೊಟ್ಟಿದ್ದಾರೆ!

ಕೊಹ್ಲಿ ಅನೇಕ ಪಂದ್ಯಗಳನ್ನ ಒಬ್ಬರೇ ಗೆಲ್ಲಿಸಿಕೊಟ್ಟಿದ್ದಾರೆ!

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ವಿಕೆಟ್ ಕೀಪರ್ ಬ್ಯಾಟರ್ ಕಮ್ರಾನ್ ಅಕ್ಮಲ್, ವಿರಾಟ್ ಕೊಹ್ಲಿ ಅದೆಷ್ಟೋ ಪಂದ್ಯಗಳನ್ನ ಏಕಾಂಗಿಯಾಗಿ ಭಾರತಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ. ಆತ ಕಂಬ್ಯಾಕ್ ಮಾಡಿದ ಮೇಲೆ ಟೀಂ ಇಂಡಿಯಾ ಪ್ರದರ್ಶನ ಭಾರೀ ಪ್ರಮಾಣದಲ್ಲಿ ಸುಧಾರಿಸಲಿದೆ ಎಂದಿದ್ದಾರೆ.

'' ಕೊಹ್ಲಿ ರನ್‌ಗಳ ಬರ ಎದುರಿಸುತ್ತಿರುವ ಕಾರಣ ಭಾರತ ತಂಡ ಸಂಕಷ್ಟದಲ್ಲಿದೆ ಎಂಬುದು ಸ್ಪಷ್ಟವಾಗಿದೆ. ತಂಡವು ಅವನ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅವರು ಭಾರತಕ್ಕಾಗಿ ಹಲವು ಪಂದ್ಯಗಳನ್ನು ಏಕಾಂಗಿಯಾಗಿ ಗೆದ್ದಿದ್ದಾರೆ'' ಎಂದು ಕಮ್ರಾನ್ ಅಕ್ಮಲ್ ಹೇಳಿದ್ದಾರೆ.

"ಅವರು ಕೊನೆಯ ಪಂದ್ಯದಲ್ಲಿ ಔಟಾಗುವ ಮೊದಲು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರ ಡೆಡಿಕೇಶನ್ ಅದ್ಭುತವಾಗಿದೆ ಮತ್ತು ಅವರು ಕೆಟ್ಟ ಫಾರ್ಮ್‌ನಿಂದ ಹೊರಬಂದಾಗ, ಭಾರತದ ಪ್ರದರ್ಶನವೂ ಸುಧಾರಿಸುತ್ತದೆ'' ಎಂದಿದ್ದಾರೆ.

ವಿರಾಟ್ ಕೊಹ್ಲಿಗೆ ಧೈರ್ಯ ತುಂಬಿದ ಆಸಿಸ್ ಮಾಜಿ ವೇಗದ ಬೌಲರ್

ನಾನು ಕೂಡ ಕೊಹ್ಲಿ ಫ್ಯಾನ್ ಎಂದ ಅಕ್ಮಲ್

ನಾನು ಕೂಡ ಕೊಹ್ಲಿ ಫ್ಯಾನ್ ಎಂದ ಅಕ್ಮಲ್

ಪಾಕಿಸ್ತಾನದ ಮಾಜಿ ಆಟಗಾರ ಕಮ್ರಾನ್ ಅಕ್ಮಲ್ ತಾನೂ ಕೂಡ ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಒಬ್ಬರು ಎಂದಿದ್ದಾರೆ.

"ಅಂತಹ ಆಟಗಾರರು ಫಾರ್ಮ್‌ನಲ್ಲಿರುವಾಗ, ಯುವ ಪೀಳಿಗೆಗೆ ದೊಡ್ಡ ಪ್ರೇರಕ ಅಂಶವಾಗಿದೆ. ಅವರ ಅನೇಕ ಅಭಿಮಾನಿಗಳಲ್ಲಿ ನಾನು ಕೂಡ ಒಬ್ಬ. ಎಷ್ಟು ಬೇಗ ಫಾರ್ಮ್‌ಗೆ ಮರಳುತ್ತಾರೋ ಅಷ್ಟು ಉತ್ತಮ. ಪ್ರಪಂಚದಾದ್ಯಂತದ ಅಭಿಮಾನಿಗಳು ಅವರನ್ನು ರನ್‌ ಕಲೆಹಾಕುವುದನ್ನ ನೋಡಲು ಬಯಸುತ್ತಾರೆ'' ಎಂದಿದ್ದಾರೆ.

ಈ ಐವರು ಟೀಂ ಇಂಡಿಯಾ ಆಟಗಾರರಿಗೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ rld-cup-chances-down-026046.html

ಕೊಹ್ಲಿಯಲ್ಲಿರುವ ಉತ್ಸಾಹವೇ ಆತನನ್ನು ಫಾರ್ಮ್‌ಗೆ ಮರಳಿಸುತ್ತದೆ

ಕೊಹ್ಲಿಯಲ್ಲಿರುವ ಉತ್ಸಾಹವೇ ಆತನನ್ನು ಫಾರ್ಮ್‌ಗೆ ಮರಳಿಸುತ್ತದೆ

ಕೊಹ್ಮಿ ತನ್ನ ತಂಡಕ್ಕೆ ಯಾವಾಗಲೂ ಉತ್ತಮ ಪ್ರದರ್ಶನ ನೀಡುವ ಉತ್ಸಾಹವನ್ನು ಹೊಂದಿದ್ದಾರೆ. ಹೀಗಾಗಿ ಅವರ ಉತ್ಸಾಹವು ಮತ್ತೆ ಫಾರ್ಮ್‌ಗೆ ಮರಳಲು ಸಹಾಯ ಮಾಡುತ್ತದೆ ಎಂದು ಅಕ್ಮಲ್ ಹೇಳಿದ್ದಾರೆ.

"ಪ್ರತಿಯೊಬ್ಬರೂ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತಿದ್ದಾರೆ, ಅವರು ಫಾರ್ಮ್‌ನಲ್ಲಿಲ್ಲ ಮತ್ತು ಪ್ರದರ್ಶನ ನೀಡುತ್ತಿಲ್ಲ ಎಂದೆಲ್ಲಾ ಹೇಳುತ್ತಾರೆ. ಅವರು ಆಡುವ ಮತ್ತು ಪ್ರದರ್ಶನ ನೀಡುವ ಉತ್ಸಾಹವನ್ನು ಹೊಂದಿದ್ದಾರೆ. ಅವನ ಉತ್ಸಾಹವು ಅವನಿಗೆ ಮರಳಲು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಅವನಿಗೆ ಆ ಸಾಮರ್ಥ್ಯವಿದೆ. ಅವರೊಬ್ಬ ಮಹಾನ್ ಆಟಗಾರ ಮತ್ತು ಪ್ರತಿಯೊಬ್ಬ ಕ್ರಿಕೆಟಿಗರು ಅಂತಹ ಹಂತವನ್ನು ಎದುರಿಸುತ್ತಾರೆ. ಅವರ ಕೆಟ್ಟ ಹಂತವು ಸ್ವಲ್ಪ ಸಮಯದವರೆಗೆ ಮುಂದುವರೆದಿದೆ, ಆದರೆ ಕೊಹ್ಲಿ ಅದರಿಂದ ಹೊರಬರುತ್ತಾರೆ'' ಎಂದು ಅಕ್ಮಲ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಬ್ಬರಿಸಲು ಸಜ್ಜಾಗಿದ್ದು, ಓಲ್ಡ್ ಟ್ರಾಫರ್ಡ್‌ನಲ್ಲಿ ಮಿಂಚುವ ಮೂಲಕ ಫಾರ್ಮ್ ಮರಳುವ ವಿಶ್ವಾಸ ಹೊಂದಿದ್ದಾರೆ.

Story first published: Sunday, July 17, 2022, 14:01 [IST]
Other articles published on Jul 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+