ಈ ಐವರು ಟೀಂ ಇಂಡಿಯಾ ಆಟಗಾರರಿಗೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ

ಇದೇ ವರ್ಷ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಟಿ20 ವಿಶ್ವಕಪ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ಅಂತಿಮ ಹಂತದ ತಯಾರಿಯಲ್ಲಿದೆ. ಪ್ರಯೋಗಗಳು ಮುಂದುವರಿದಿದ್ದರೂ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರು ಅತ್ಯುತ್ತಮ ಆಟವಾಡುವ 11 ಅನ್ನು ನಿರ್ಧರಿಸುವ ಯೋಜನೆಯಲ್ಲಿದ್ದಾರೆ ಎಂಬುದು ಖಚಿತವಾಗಿದೆ.
ಹಿರಿಯ ಆಟಗಾರರ ಜೊತೆಗೆ ಭಾರತ ಅತ್ಯುತ್ತಮ ಯುವ ಆಟಗಾರರನ್ನು ಆಯ್ಕೆ ಮಾಡುವುದು ಇದ್ರಿಂದ ಸಾಧ್ಯವಾಗಿದೆ. ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯುವುದರಿಂದ ತಂಡದಲ್ಲಿ ಉತ್ತಮ ವೇಗಿಗಳು ಅತ್ಯಗತ್ಯ.
ವೇಗಿಗಳ ಸಾಲಿನಲ್ಲಿ ಅವೇಶ್ ಖಾನ್, ಹರ್ಷಲ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್ ಅವರಂತಹ ವೇಗಿಗಳನ್ನು ಬೆಳೆಸಲು ಭಾರತಕ್ಕೆ ಸಾಧ್ಯವಾಗಿದೆ ಎಂಬುದು ಸಕಾರಾತ್ಮಕ ಸಂಗತಿಯಾಗಿದೆ. ಆದರೆ ಭಾರತದ ವಿಶ್ವಕಪ್ ಯೋಜನೆಗಳಲ್ಲಿ ಸಕ್ರಿಯರಾಗಿದ್ದ ಕೆಲವು ಆಟಗಾರರು ಕಳೆದ ತಿಂಗಳ ತಮ್ಮ ಪ್ರದರ್ಶನದಿಂದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಆ ಐವರು ಭಾರತೀಯ ಆಟಗಾರರು ಯಾರು ಎಂದು ನೋಡೋಣ.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಭಾರತದ ಮಾಜಿ ನಾಯಕ ಮತ್ತು ಆಧುನಿಕ ಕ್ರಿಕೆಟ್‌ನ ಬ್ಯಾಟಿಂಗ್ ದಂತಕಥೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಕೊಹ್ಲಿ ಪ್ರದರ್ಶನ ಕಳಪೆಯಾಗಿದೆ. ಶತಕ ಪೂರೈಸಿ 1000ಕ್ಕೂ ಹೆಚ್ಚು ದಿನಗಳಾಗಿವೆ. ಕಳೆದ ಒಂದು ತಿಂಗಳಿನಲ್ಲಿ ಕೊಹ್ಲಿಯ ಪ್ರದರ್ಶನವನ್ನು ಹೆಚ್ಚು ಮೌಲ್ಯಮಾಪನ ಮಾಡುತ್ತಿರುವುದರಿಂದ ಕೊಹ್ಲಿಯ ವಿಶ್ವಕಪ್ ಭವಿಷ್ಯವನ್ನು ಸಹ ಪ್ರಶ್ನಿಸಲಾಗುತ್ತಿದೆ.
ನಾಯಕ ರೋಹಿತ್ ಶರ್ಮಾ ಕೊಹ್ಲಿಯನ್ನು ಬೆಂಬಲಿಸುತ್ತಿದ್ದಾರೆ. ಆದರೆ ದೀಪಕ್ ಹೂಡಾ ಅವರಂತಹ ಆಟಗಾರನ ಅಬ್ಬರದಿಂದಾಗಿ ಕೊಹ್ಲಿ ಸ್ಥಾನವು ಇನ್ನೂ ಅನುಮಾನದಲ್ಲಿದೆ. ಕೊಹ್ಲಿಯಂತಹ ಲೆಜೆಂಡ್ ಅನ್ನು ಬದಲಾಯಿಸುವುದು ಸುಲಭವಲ್ಲ, ಆದರೆ ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್ ಭಾರತದ ವಿಶ್ವಕಪ್ ಯೋಜನೆಗಳಲ್ಲಿ ಸಕ್ರಿಯ ಆಟಗಾರ. ಮಧ್ಯಮ ಕ್ರಮಾಂಕದಲ್ಲಿ ಮಿಂಚುವ ಸಾಮರ್ಥ್ಯ ಹೊಂದಿರುವ ಈ ತಾರೆ ಶ್ರೀಲಂಕಾ ಸರಣಿಯಲ್ಲಿ ಸತತ ಮೂರು ಅರ್ಧಶತಕಗಳನ್ನು ಬಾರಿಸಿ ಚಪ್ಪಾಳೆ ಗಿಟ್ಟಿಸಿದರಾದರೂ ನಂತರದ ಸರಣಿಯಲ್ಲಿ ನಿರಾಸೆ ಮೂಡಿಸಿದರು. ಕಳೆದ ತಿಂಗಳು ಅವಕಾಶ ಸಿಕ್ಕಾಗಲೆಲ್ಲಾ ನಿರಾಸೆ ಅನುಭವಿಸುತ್ತಿದ್ದ ಶ್ರೇಯಸ್ ಅವರನ್ನು ವಿಶ್ವಕಪ್ ಗೆ ಭಾರತ ಪರಿಗಣಿಸುವ ಸಾಧ್ಯತೆ ಕಡಿಮೆ. ಮಧ್ಯಮ ಕ್ರಮಾಂಕ ಮತ್ತು ಅಗ್ರ ಕ್ರಮಾಂಕಕ್ಕೆ ಪರಿಗಣಿಸಬಹುದಾದ ದೀಪಕ್ ಹೂಡಾ ಅವರಿಗೂ ಭಾರತ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.
ವಿರಾಟ್ ಕೊಹ್ಲಿಯ ಸ್ಥಾನವನ್ನು ಪ್ರಶ್ನಿಸುವ ಸಮಯ ಇದಲ್ಲ ಎಂದ ಮಾಜಿ ಕ್ರಿಕೆಟಿಗ ಸಬಾ ಕರೀಮ್

ಅಕ್ಷರ್ ಪಟೇಲ್
ಅಕ್ಷರ್ ಪಟೇಲ್ ರವೀಂದ್ರ ಜಡೇಜಾ ಬದಲಿಗೆ ಭಾರತ ತಂದ ಪ್ರಮುಖ ಸ್ಪಿನ್ ಆಲ್ ರೌಂಡರ್. ಅಕ್ಷರ್ ಅವರು ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ತಮ್ಮ ಅತ್ಯುತ್ತಮ ಪ್ರದರ್ಶನದೊಂದಿಗೆ ಭಾರತದ ವಿಶ್ವಕಪ್ ಯೋಜನೆಗಳ ಭಾಗವಾಗಿದ್ದರು. ಆದರೆ ಅಕ್ಷರ್ ಅವರ ಇತ್ತೀಚಿನ ಪ್ರದರ್ಶನ ನಿರಾಶಾದಾಯಕವಾಗಿದೆ. ಆಲ್ ರೌಂಡರ್ ಆಗಿರುವ ಅಕ್ಷರ್ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದ ಕಾರಣ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ.
IND vs ENG 3rd ODI: ನಿರ್ಣಾಯಕ ಪಂದ್ಯದ ಡ್ರೀಮ್ ಟೀಮ್ ಪ್ರೆಡಿಕ್ಷನ್, ಸಂಭಾವ್ಯ ತಂಡಗಳ ಮಾಹಿತಿ

ರುತುರಾಜ್ ಗಾಯಕ್ವಾಡ್
ರುತುರಾಜ್ ಗಾಯಕ್ವಾಡ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಮಿಂಚಿದ ನಂತರ ಭಾರತ ತಂಡಕ್ಕೆ ಬಂದ ಆರಂಭಿಕ ಆಟಗಾರ. ಭಾರತ ಟಿ20 ವಿಶ್ವಕಪ್‌ನಲ್ಲಿ ಬ್ಯಾಕ್‌ಅಪ್ ಓಪನರ್ ಆಗಿ ಪರಿಗಣಿಸಲ್ಪಟ್ಟಿದ್ದ ರುತುರಾಜ್, ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಯಲ್ಲಿ ಅವಕಾಶ ಸಿಕ್ಕಾಗಲೂ ಅವರು ದೊಡ್ಡ ಪ್ರದರ್ಶನ ನೀಡಲಿಲ್ಲ. ಐರ್ಲೆಂಡ್ ಪ್ರವಾಸಕ್ಕೂ ಮುನ್ನ ಅವರು ಗಾಯಗೊಂಡಿದ್ದರು. ಬ್ಯಾಕ್‌ಅಪ್ ಓಪನರ್ ಆಗಿ ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಮರಳಿರುವುದರಿಂದ ರುತುರಾಜ್‌ಗೆ ವಿಶ್ವಕಪ್ ಭರವಸೆ ಇಲ್ಲ ಎಂದೇ ಹೇಳಬಹುದು.
ನ್ಯೂಜಿಲೆಂಡ್ ವಿರುದ್ಧ ಆಘಾತಕಾರಿ ಸೋಲಿನ ಬಳಿಕ ಐಸಿಸಿ ಬಳಿ ವಿಶೇಷ ಮನವಿ ಮಾಡಿದ ಐರ್ಲೆಂಡ್ ನಾಯಕ

ಉಮ್ರಾನ್ ಮಲ್ಲಿಕ್
ಉಮ್ರಾನ್ ಮಲಿಕ್ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಬೆಳೆದ ವೇಗಿ. ಉಮ್ರಾನ್ ವೇಗಿಯಾಗಿ ಗಮನ ಸೆಳೆದರು. ಸತತ 150/kmph ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಉಮ್ರಾನ್ ವಿಶ್ವಕಪ್‌ನಲ್ಲಿ ತಂಡದಲ್ಲಿ ಅವಕಾಶ ಪಡೆಯಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಕಳೆದ ತಿಂಗಳು ಅವರ ಪ್ರದರ್ಶನದಿಂದ ಅವರ ಅವಕಾಶಗಳು ಕಡಿಮೆಯಾಗಿದೆ. ಅವಕಾಶ ಸಿಕ್ಕಾಗ ದುಬಾರಿ ರನ್ ನೀಡಲು ಹಿಂಜರಿಯದ ಉಮ್ರಾನ್ ಅವರನ್ನು ವಿಶ್ವಕಪ್ ಗೆ ಭಾರತ ಪರಿಗಣಿಸುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications