For Quick Alerts
ALLOW NOTIFICATIONS  
For Daily Alerts
 

ಮೊಹಮ್ಮದ್ ಶಮಿಗೆ ಟೀಂ ಇಂಡಿಯಾ ಟೆಸ್ಟ್ ನಾಯಕತ್ವ? ಏನಂತಾರೆ ಭಾರತದ ವೇಗಿ

Mohammed shami
ಮೊಹಮ್ಮದ್ ಶಮಿಗೆ ಟೆಸ್ಟ್ ತಂಡದ ನಾಯಕನಾಗುವ ಆಸೆ | Oneindia Kannada

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ನಂತರ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದು ನಿಮಗೆಲ್ಲಾ ತಿಳಿದೇ ಇದೆ. ಈ ಮೊದಲು ವಿರಾಟ್ ಟಿ20 ನಾಯಕತ್ವ ಬಿಟ್ಟು ಕೊಟ್ಟ ಬಳಿಕ ಏಕದಿನ ಕ್ರಿಕೆಟ್ ನಾಯಕತ್ವವನ್ನೂ ಕಳೆದುಕೊಂಡಿದ್ರು.

ರೋಹಿತ್ ಶರ್ಮಾ ಈಗ ಫಿಟ್ ಅಂಡ್ ಫೈನ್ ಆಗಿದ್ದು ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಗೆ ನಾಯಕತ್ವ ವಹಿಸಲು ರೆಡಿಯಾಗಿದ್ದಾರೆ. ಆದ್ರೆ ಟೀಂ ಇಂಡಿಯಾದ ಟೆಸ್ಟ್ ನಾಯಕ ಯಾರು? ವಿರಾಟ್ ಕೊಹ್ಲಿಯಿಂದ ತೆರವಾದ ಸ್ಥಾನದಲ್ಲಿ ಯಾರು ಕೂರಲಿದ್ದಾರೆ ಎಂಬ ಪ್ರಶ್ನೆಗೆ ಮಾತ್ರ ಇನ್ನೂ ಉತ್ತರ ದೊರಕ್ಕಿಲ್ಲ.

ಈಗಾಗಲೇ ಸೀಮಿತ ಓವರ್ ಗಳ ತಂಡದ ನಾಯಕರಾಗಿರುವ ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ನೇಮಿಸುವ ಸಾಧ್ಯತೆ ಇದ್ದರೂ ಸಹ ಕೆ.ಎಲ್ ರಾಹುಲ್, ಜಸ್ ಪ್ರೀತ್ ಬುಮ್ರಾ, ರಿಷಬ್ ಪಂತ್ ಅವರಂಥ ಆಟಗಾರರ ಹೆಸರುಗಳೂ ಕೇಳಿಬರುತ್ತಿವೆ. ಟೀಂ ಇಂಡಿಯಾಗೆ ಟೆಸ್ಟ್ ನಾಯಕ ಯಾರು ಎಂಬ ವಿಚಾರದಲ್ಲಿ ಅಭಿಮಾನಿಗಳು ಹಾಗೂ ಮಾಜಿ ಆಟಗಾರರು ಚರ್ಚೆ ನಡೆಸುತ್ತಿದ್ದಾರೆ.

ಇದೇ ಬೆನ್ನಲ್ಲೇ ಈಗ ಅನುಭವಿ ವೇಗಿ ಮೊಹಮ್ಮದ್ ಶಮಿ ಟೀಂ ಇಂಡಿಯಾ ಟೆಸ್ಟ್ ನಾಯಕತ್ವದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ನಾಯಕತ್ವದ ಅವಕಾಶ ಸಿಕ್ಕರೆ ಖಂಡಿತ ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ. ಪ್ರಸ್ತುತ ಭಾರತ ತಂಡಕ್ಕೆ ಎಲ್ಲಾ ಮಾದರಿಯಲ್ಲಿ ಶಮಿ ಲಭ್ಯವಿದ್ದು, ನಾಯಕತ್ವದ ಅವಕಾಶ ಸಿಕ್ಕರೆ ತನ್ನನ್ನು ತಾನು ಸಾಬೀತುಪಡಿಸಲು ಬಯಸುತ್ತೇನೆ ಎಂದಿದ್ದಾರೆ. ಆದರೆ, ಸದ್ಯಕ್ಕೆ ನಾಯಕತ್ವದ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ ಎಂದಿದ್ದಾರೆ.

ವಾಸ್ತವವಾಗಿ, ಟೀಂ ಇಂಡಿಯಾಗೆ ನಾಯಕತ್ವ ವಹಿಸಲು ಅವಕಾಶ ಸಿಕ್ಕರೆ ಯಾರು ಬಿಟ್ಟಾರು ಎಂದು ಶಮಿ ಹೇಳಿದರು. ಆದರೆ, ನಾಯಕನಷ್ಟೇ ಅಲ್ಲ ತಂಡಕ್ಕೆ ಯಾವುದೇ ರೀತಿಯ ಸೇವೆ ಸಲ್ಲಿಸಲು ಸಿದ್ಧ ಎಂದು ಬಹಿರಂಗಪಡಿಸಿದ್ದಾರೆ. ಟೀಮ್ ಇಂಡಿಯಾದ ಹಿರಿಯ ವೇಗಿ ಅವರು ತಂಡಕ್ಕಾಗಿ ನೀಡಿದ ಯಾವುದೇ ಟಾಸ್ಕ್‌ಗೆ 100 ಪ್ರತಿಶತ ನ್ಯಾಯ ಸಲ್ಲಿಸುವುದಾಗಿ ಹೇಳಿದ್ದಾರೆ.

ಇದೇ ವೇಳೆ ಮೊಹಮ್ಮದ್ ಶಮಿ ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಟೆಸ್ಟ್ ಸರಣಿಯಲ್ಲಿದ್ದರು. ಅವರು ಮೂರು ಟೆಸ್ಟ್ ಪಂದ್ಯಗಳಲ್ಲಿ 14 ವಿಕೆಟ್ಗಳನ್ನು ಪಡೆದರು. ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ನಡೆದ ಏಕದಿನ ಸರಣಿಗೆ ಆಯ್ಕೆಗಾರರು ಶಮಿಗೆ ವಿಶ್ರಾಂತಿ ನೀಡಿದ್ದರು. ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಆಯ್ಕೆಗಾರರು ಶಮಿಗೆ ವಿಶ್ರಾಂತಿ ನೀಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಶಮಿ ಇದುವರೆಗೆ 209, ಏಕದಿನ ಕ್ರಿಕೆಟ್‌ನಲ್ಲಿ 148 ಮತ್ತು ಟಿ20ಯಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ 79 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಶಮಿ ಪ್ರಸ್ತುತ ಭಾರತ ತಂಡದ ಪ್ರಮುಖ ಬೌಲರ್ ಆಗಿದ್ದು, ಭವಿಷ್ಯದಲ್ಲಿ ಈ ವೇಗಿ ಮೇಲೆ ಭಾರೀ ನಿರೀಕ್ಷೆಗಳಿವೆ.

Story first published: Friday, January 28, 2022, 10:24 [IST]
Other articles published on Jan 28, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+