For Quick Alerts
ALLOW NOTIFICATIONS  
For Daily Alerts
 

ತಾನು ಯಾವುದೇ ಕ್ರಮಾಂಕದಲ್ಲಿ ಆಡಲು ಸಿದ್ಧ ಎಂದ ಸೂರ್ಯಕುಮಾರ್ ಯಾದವ್

Suryakumar yadav

ಟೀಂ ಇಂಡಿಯಾದಲ್ಲಿ ಯಾವುದೇ ಜವಾಬ್ದಾರಿ ನೀಡಿದರೂ, ಯಾವುದೇ ಕ್ರಮಾಂಕ ಕೊಟ್ಟರೂ ಆಡಲು ಸಿದ್ಧನಾಗಿದ್ದೇನೆ ಎಂದು ಯುವ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಸೂರ್ಯ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ತಮಗೆ ಹೊಸದೇನಲ್ಲ ಎಂದರು

ಅಹಮದಾಬಾದ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಐದನೇ ಬ್ಯಾಟಿಂಗ್ ಮಾಡಿದರು. ಅಗತ್ಯ ಬಿದ್ದರೆ ಬೌಲಿಂಗ್ ಕೂಡ ಮಾಡುತ್ತೇನೆ ಎಂದಿದ್ದಾರೆ. ಪ್ರತಿ ದಿನ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಅಭ್ಯಾಸ ಮಾಡುವುದಾಗಿ ಹೇಳಿದರು. ಅವರ ಅಗತ್ಯತೆ ಆಧರಿಸಿ ತಂಡ ಅವಕಾಶ ನೀಡಿದರೆ ಖಂಡಿತ ಬೌಲಿಂಗ್ ಮಾಡುತ್ತೇನೆ ಎಂದಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿಕೆಟ್ ರಕ್ಷಿಸುವ ವೇಳೆ ಸತತವಾಗಿ ಆಡಿದ್ದನ್ನು ನೆನಪಿಸಿಕೊಂಡ ಸೂರ್ಯಕುಮಾರ್ ಯಾದವ್, ಎರಡನೇ ಏಕದಿನ ಪಂದ್ಯದಲ್ಲೂ ಅದೇ ಶೈಲಿಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಸದ್ಯ ಐದನೇ ಕ್ರಮಾಂಕದಲ್ಲಿ ಆಡುತ್ತಿದ್ದು, ಆರಂಭಿಕರಾಗಿ ಕಣಕ್ಕಿಳಿದಂತೆಯೇ ಆಡುವುದಾಗಿ ಸೂರ್ಯ ಕುಮಾರ್ ಹೇಳಿದ್ದಾರೆ.

ಎರಡನೇ ಏಕದಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಲಭ್ಯತೆಯ ಬಗ್ಗೆ ಸೂರ್ಯಕುಮಾರ್ ಯಾದವ್ ತೃಪ್ತಿ ವ್ಯಕ್ತಪಡಿಸಿದ್ದಾರೆ. ಅವರ ಆಗಮನದಿಂದ ತಂಡ ಮತ್ತಷ್ಟು ಬಲಗೊಳ್ಳಲಿದೆ ಎಂದರು. ಆದರೆ ಎರಡನೇ ಏಕದಿನ ಪಂದ್ಯದಲ್ಲಿ ಅಂತಿಮ ತಂಡದಲ್ಲಿ ಯಾರಿಗೆ ಅವಕಾಶ ನೀಡಬೇಕು? ಯಾರನ್ನು ಬೆಂಚ್‌ಗೆ ಸೀಮಿತಗೊಳಿಸಬೇಕು ಎಂಬ ವಿಷಯವನ್ನು ತಂಡದ ಮ್ಯಾನೇಜ್‌ಮೆಂಟ್ ಪರಿಶೀಲಿಸುತ್ತದೆ ಎಂದು ಅವರು ಹೇಳಿದರು.

ಸೂರ್ಯಕುಮಾರ್ ಅವರಂತೆ ಇರಲು ಬಿಡಿ, ಇತರರಿಗೆ ಹೋಲಿಸಲು ಹೋಗದಿರಿ ಎಂದು ಅಭಿಮಾನಿಗಳನ್ನ ಕೋರಿದ್ದಾರೆ. ಈಗಾಗಲೇ ಹಲವು ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಸೂರ್ಯಕುಮಾರ್ ಯಾದವ್ 3, 4, 5 ಮತ್ತು 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದಾರೆ.

RCB ಮುಂದಿನ ನಾಯಕ ಇವರೇ ಆದರೆ ಚೆಂದ | Oneindia Kannada

Story first published: Tuesday, February 8, 2022, 23:05 [IST]
Other articles published on Feb 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+