ನನ್ನ ಪ್ರಕಾರ ಎಲ್ಲಾ ಮಾದರಿಯ ಕ್ರಿಕೆಟ್ ಒತ್ತಡ ಒಂದೇ ಆಗಿದೆ: ವೆಂಕಟೇಶ್ ಅಯ್ಯರ್

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇತ್ತೀಚೆಗಷ್ಟೇ 2022-23ನೇ ಸಾಲಿನ ದೇಶೀಯ ಟೂರ್ನಮೆಂಟ್ ವೇಳಾಪಟ್ಟಿಯನ್ನ ಘೋಷಣೆ ಮಾಡಿತು. ಕಳೆದ ಬಾರಿಯ ರಣಜಿ ಚಾಂಪಿಯನ್ ಮಧ್ಯಪ್ರದೇಶ ತನ್ನ ಪ್ರಶಸ್ತಿ ಉಳಿಸಿಕೊಳ್ಳುವ ಯೋಜನೆ ಹಾಕತೊಡಗಿದೆ. ಇದೇ ವೇಳೆಯಲ್ಲಿ ಮಧ್ಯಪ್ರದೇಶ ತಂಡದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಕುತೂಹಲಕಾರಿ ಹೇಳಿಕೆಯೊಂದನ್ನ ನೀಡಿದ್ದಾರೆ.
ವೆಂಕಟೇಶ್ ಅಯ್ಯರ್ ಪ್ರಕಾರ ಎಲ್ಲಾ ಮಾದರಿಯ ಕ್ರಿಕೆಟ್ ಒತ್ತಡವೂ ನನಗೆ ಒಂದೇ ರೀತಿಯಲ್ಲಿದೆ. ಅದು ದೇಶೀಯ ಕ್ರಿಕೆಟ್ ಆಗಿರಲಿ, ಐಪಿಎಲ್ ಇರಲಿ ಅಥವಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎದುರಿಸುವ ಒತ್ತಡ ಒಂದೇ ರೀತಿಯದ್ದು ಎನ್ನುವ ರೀತಿಯಲ್ಲಿ ಅಯ್ಯರ್ ಮಾತನಾಡಿದ್ದಾರೆ.

ಶ್ರೀಲಂಕಾ ವಿರುದ್ಧವೇ ಕೊನೆಯ ಪಂದ್ಯವನ್ನಾಡಿರುವ ಅಯ್ಯರ್
ಎಡಗೈ ಬ್ಯಾಟಿಂಗ್ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಪ್ರಸ್ತುತ ಟೀಂ ಇಂಡಿಯಾದಿಂದ ಹೊರಬಿದ್ದಿದ್ದು, ಯಾವುದೇ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿ ತಿಂಗಳುಗಳೇ ಉರುಳಿ ಹೋಗಿವೆ. ಶ್ರೀಲಂಕಾ ವಿರುದ್ಧ 2022ರ ಫೆಬ್ರವರಿಯಲ್ಲಿ ನಡೆದ ಟಿ20 ಅಂತರಾಷ್ಟ್ರೀಯ ಪಂದ್ಯವೇ ವೆಂಕಟೇಶ್ ಅಯ್ಯರ್ ಆಡಿದ ಕೊನೆಯ ಚುಟುಕು ಪಂದ್ಯವಾಗಿದೆ.
ರಿಷಭ್ ಪಂತ್ ಫಿನಿಶರ್ ಅಲ್ಲ; ಏಷ್ಯಾ ಕಪ್ 2022ಕ್ಕೂ ಮುನ್ನ ಮಾಜಿ ಕ್ರಿಕೆಟಿಗನಿಂದ ಶಾಕಿಂಗ್ ಹೇಳಿಕೆ!

ಐಪಿಎಲ್‌ನಲ್ಲಿ ಕೆಕೆಆರ್ ಪರ ಅಬ್ಬರಿಸಿದ್ದ ವೆಂಕಟೇಶ್ ಅಯ್ಯರ್
27 ವರ್ಷದ ಬೌಲಿಂಗ್ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ 2021ರ ಐಪಿಎಲ್ ಸೀಸನ್‌ನಲ್ಲಿ ಕೆಕೆಆರ್ ಪರ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ರು. ಆತನ ಬ್ಯಾಟಿಂಗ್ ವೈಭವದಿಂದಲೇ ಐಪಿಎಲ್ 2022ರ ಸೀಸನ್‌ನಲ್ಲಿ ಕೆಕೆಆರ್ ಆತನನ್ನು ರೀಟೈನ್ ಮಾಡಿಕೊಳ್ಳಲು ಸಾಧ್ಯವಾಯಿತು. ಜೊತೆಗೆ ಟೀಂ ಇಂಡಿಯಾಗೆ ಕೂಡ ಪದಾರ್ಪಣೆ ಮಾಡಲು ದಾರಿ ಮಾಡಿಕೊಟ್ಟಿತು.
ಇದುವರೆಗೂ ಅಯ್ಯರ್ 9 ಟಿ20 ಪಂದ್ಯಗಳಲ್ಲಿ ಮತ್ತು 2 ಏಕದಿನ ಪಂದ್ಯಗಳಲ್ಲಿ ಬ್ಲ್ಯೂ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದಾರೆ. ಆದ್ರೆ ಆತ ಇದುವರೆಗೂ ದೊಡ್ಡ ಮಟ್ಟದ ಪ್ರದರ್ಶನ ನೀಡುವಲ್ಲಿ ಸಾಧ್ಯವಾಗಿಲ್ಲ. ಇನ್ನು ಐಪಿಎಲ್ 2022ರ ಸೀಸನ್‌ನಲ್ಲಿ ಕೆಟ್ಟ ಪ್ರದರ್ಶನ ನೀಡಿದ್ದು 12 ಪಂದ್ಯಗಳಲ್ಲಿ ಯಾವುದೇ ವಿಕೆಟ್ ಪಡೆಯದೆ 182 ರನ್ ಕಲೆಹಾಕಿದ್ದಾರೆ.
''ತಂಡದಲ್ಲಿರುವ ಸ್ಪರ್ಧೆಗಳ ಪ್ರಮಾಣವನ್ನು ಗಮನಿಸಿದ್ರೆ, ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಒತ್ತಡ ಒಂದೇ ರೀತಿಯಲ್ಲಿ ಇದೆ. ಆದ್ರೆ ಪ್ರತಿ ಹಂತದ ಕ್ರಿಕೆಟ್‌ನಲ್ಲಿ ಈ ಒತ್ತಡವನ್ನ ಮೆಟ್ಟಿ ನಿಲ್ಲುವುದು ಮಾತ್ರ ವ್ಯತ್ಯಾಸವಿರುತ್ತದೆ. ಆದ್ರೆ ನಾನು ಎಲ್ಲಾ ಮಾದರಿಯ ಕ್ರಿಕೆಟ್ ಒಂದೇ ರೀತಿಯದ್ದು ಎಂದು ಭಾವಿಸಿದ್ದೇನೆ ಮತ್ತು ಮೈದಾನಕ್ಕಿಳಿದಾಗ ಅದನ್ನು ಹೇಗೆ ಎಕ್ಸಿಕ್ಯೂಟ್ ಮಾಡಬೇಕು ಎಂಬುದು ಕಳೆದ 10-15 ವರ್ಷದಲ್ಲಿ ಪ್ರಯತ್ನಿಸಿದ್ದೇನೆ'' ಎಂದು ಸ್ಪೋರ್ಟ್ಸ್ ಕ್ರೀಡಾ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಚಹಾಲ್ ದಾಂಪತ್ಯದಲ್ಲಿ ಬಿರುಕು ವದಂತಿ: 'ಬಹಳ ದ್ವೇಷಪೂರಿತ' ಎಂದು ಸ್ಪಷ್ಟೀಕರಣ ನೀಡಿದ ಧನಶ್ರೀ ವರ್ಮಾ

ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವುದೇ ಜಾಣತನ!
ದೇಶೀಯ ಕ್ರಿಕೆಟ್‌ನಲ್ಲಿ ವೆಂಕಟೇಶ್ ಅಯ್ಯರ್ ತನ್ನ ಸಾಮರ್ಥ್ಯ ಏನೆಂಬುದನ್ನ ಸಾಭೀತು ಪಡಿಸಿದ್ದಾರೆ. ಆದ್ರೆ ಇಂತಹದ್ದೇ ಪ್ರದರ್ಶನವನ್ನ ಟೀಂ ಇಂಡಿಯಾ ಪರ ಅಯ್ಯರ್ ಸ್ಥಿರ ಪ್ರದರ್ಶನದಿಂದ ಆಡಬೇಕಿದೆ. ಆದ್ರೆ ಅದಕ್ಕೂ ಮೊದಲು ಅಯ್ಯರ್‌ಗೆ ಹೆಚ್ಚಿನ ಅವಕಾಶ ದೊರೆಯಬೇಕಿದೆ.
ಹಾರ್ದಿಕ್ ಪಾಂಡ್ಯ ಅದ್ಭುತ ಕಂಬ್ಯಾಕ್ ಮಾಡಿದ ಬಳಿಕ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ. ವೆಂಕಟೇಶ್ ಅಯ್ಯರ್ ಪಾಂಡ್ಯರಿಂದ ಸ್ಫೂರ್ತಿ ಪಡೆದು ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ರೆ ಭಾರತೀಯ ಕ್ರಿಕೆಟ್ ತಂಡಕ್ಕೆ ಮರಳಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications