ಊರ್ವಶಿ ರೌಟೇಲಾ ಯಾರೆಂದೇ ನನಗೆ ಗೊತ್ತಿಲ್ಲ: ವಿಡಿಯೋ ಬಗ್ಗೆ ನಸೀಂ ಶಾ ಪ್ರತಿಕ್ರಿಯೆ
ನಸೀಮ್ ಶಾ ಸದ್ಯ ಪಾಕಿಸ್ತಾನದ ಹೊಸ ಸೆನ್ಸೇಷನ್ ಕ್ರಿಕೆಟರ್. 2019ರಲ್ಲಿ ತಮ್ಮ16ನೇ ವರ್ಷದಲ್ಲೇ ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಪರವಾಗಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
2022ರ ಆಗಸ್ಟ್‌ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಸೀಂ ಶಾ, ಆಗಸ್ಟ್ 28ರಂದು ಏಷ್ಯಾಕಪ್‌ನ ಭಾರತದ ವಿರುದ್ಧದ ಪಂದ್ಯದಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದರ್ಪಾಣೆ ಮಾಡಿದರು. ಮಾತ್ರವಲ್ಲದೆ ಭಾರತದ ವಿರುದ್ಧದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದರು.
ಅಫ್ಘಾನಿಸ್ತಾನದ ವಿರುದ್ಧದ ಸೂಪರ್ 4 ಹಂತದ ಪಂದ್ಯದಲ್ಲಿ ಎರಡು ಬಾಲ್‌ನಲ್ಲಿ ಎರಡು ಸಿಕ್ಸರ್ ಬಾರಿಸಿ ಪಂದ್ಯ ಗೆಲ್ಲಿಸಿದ್ದ ನಸೀಂ ಶಾ ಪಾಕಿಸ್ತಾನ ಕ್ರಿಕೆಟ್‌ನ ಹೊಸ ಹೀರೋ ಆಗಿ ಮಿಂಚಿದ್ದರು. ಅದೇ ನಸೀಂ ಶಾ ಈಗ ಭಾರತದ ನಟಿಯ ಬಗ್ಗೆ ಮಾತನಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
ಬಾಲಿವುಡ್ ನಟಿ ಊರ್ವಶಿ ರೌಟೇಲಾ ನಸೀಂ ಶಾ ಅವರ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ಭಾರಿ ವೈರಲ್ ಆಗಿತ್ತು, ಈ ವಿಡಿಯೋ ಬಗ್ಗೆ ನಸೀಂ ಶಾರನ್ನು ಪ್ರಶ್ನಿಸಿದಾಗ ನೀಡಿರುವ ಉತ್ತರ ಈಗ ವೈರಲ್ ಆಗಿದೆ.

ಊರ್ವಶಿ ರೌಟೇಲಾ ಯಾರು ಎಂದು ಗೊತ್ತಿಲ್ಲ
ಊರ್ವಶಿ ರೌಟೇಲಾ ವೀಡಿಯೊಗೆ ತಿರುಗೇಟು ನೀಡಿರುವ ನಸೀಮ್ ಶಾ, "ಊರ್ವಶಿ ರೌಟೇಲಾ ಯಾರು ಎಂದು ನನಗೆ ತಿಳಿದಿಲ್ಲ. ನಾನು ನನ್ನ ಪಂದ್ಯದ ಮೇಲೆ ಮಾತ್ರ ಗಮನ ಹರಿಸುತ್ತೇನೆ." ಎಂದು ಹೇಳಿದ್ದಾರೆ.
ಪತ್ರಕರ್ತರು ಪಾಕಿಸ್ತಾನದ ಯುವ ವೇಗಿಯನ್ನು ಭಾರತೀಯ ನಟಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದ ಬಗ್ಗೆ ಪ್ರಶ್ನಿಸಿದಾಗ. ಅದಕ್ಕೆ ಉತ್ತರಿಸಿದ ಶಾ, "ನನಗೆ ಅದರ ಬಗ್ಗೆ ಗೊತ್ತಿಲ್ಲ. ನಾನು ಆಟದ ಕಡೆ ಮಾತ್ರ ಗಮನ ನೀಡುತ್ತೇನೆ" ಎಂದು ಹೇಳಿದ್ದಾರೆ".
ಏಷ್ಯಾ ಕಪ್ ಫೈನಲ್: ಟ್ರೋಫಿಗಾಗಿ ಸೆಣೆಸಾಡಲು ಸಜ್ಜಾದ ಶ್ರೀಲಂಕಾ ಹಾಗೂ ಪಾಕಿಸ್ತಾನ

ಕ್ರಿಕೆಟ್ ನೋಡಲು ಬಂದಿದ್ದಕ್ಕೆ ಧನ್ಯವಾದ
ನಾನು ನನ್ನ ಪಂದ್ಯದ ಮೇಲೆ ಮಾತ್ರ ಗಮನ ಹರಿಸುತ್ತೇನೆ. ಜನರು ಸಾಮಾನ್ಯವಾಗಿ ನನಗೆ ವೀಡಿಯೊಗಳನ್ನು ಕಳುಹಿಸುತ್ತಾರೆ ಆದರೆ ನನಗೆ ತಿಳಿದಿಲ್ಲ. ನನ್ನಲ್ಲಿ ವಿಶೇಷವಾದದ್ದೇನೂ ಇಲ್ಲ ಆದರೆ ಕ್ರಿಕೆಟ್ ನೋಡಲು ಬರುವ ಜನರಿಗೆ ಮತ್ತು ಗೌರವವನ್ನು ನೀಡುವ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ನಸೀಂ ಶಾ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ವೀಡಿಯೊದ ಬಗ್ಗೆ ಏನನ್ನೂ ಪ್ರತಿಕ್ರಿಯಿಸಲು ನಿರಾಕರಿಸಿದ ನಸೀಂ ಶಾ ಭಾರತೀಯ ನಟಿಯ ಬಗ್ಗೆ ತಿಳಿದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

ರಿಷಬ್ ಪಂತ್ ಜೊತೆ ನಟಿಯ ವಿವಾದ
ಈ ಮೊದಲು ರಿಷಬ್ ಪಂತ್ ಜೊತೆಗಿನ ಸ್ನೇಹದ ಕುರಿತಂತೆ ಊರ್ವಶಿ ರೌಟೇಲಾ ಹಲವು ಬಾರಿ ಸುದ್ದಿಯಾಗಿದ್ದರು. ಸಾಮಾಜಿಕ ತಾಣದಲ್ಲಿ ತನ್ನನ್ನು ಕೆಣಕುತ್ತಿದ್ದ ಊರ್ವಶಿ ರೌಟೇಲಾಗೆ ರಿಷಬ್ ಪಂತ್ ತಿರುಗೇಟು ಕೊಟ್ಟಿದ್ದರು. ಭಾರತ ಪಾಕಿಸ್ತಾನದ ನಡುವಣ ಪಂದ್ಯವನ್ನು ನೋಡಲು ದುಬೈಗೆ ತೆರಳಿದ್ದ ಊರ್ವಶಿ ರೌಟೇಲಾ ಈಗ ಸಸೀಂ ಶಾ ವಿಡಿಯೋವನ್ನು ಹಂಚಿಕೊಂಡಿದ್ದರು. ಮಾತ್ರವಲ್ಲದೆ ನಸೀಮ್ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುವ ಮೂಲಕ ಮತ್ತೆ ವಿವಾದ ಸೃಷ್ಟಿಸಿದ್ದಾರೆ.
28 ವರ್ಷದ ಊರ್ವಶಿ ರೌಟೇಲಾ 19 ವರ್ಷದ ನಸೀಂ ಶಾ ಮೇಲೆ ಕಣ್ಣಾಕಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಮಾಡಲಾಗಿದೆ.

ಉತ್ತಮ ಪ್ರದರ್ಶನ ನೀಡುತ್ತಿರುವ ನಸೀಂ ಶಾ
ನಸೀಮ್ ಶಾ ಇಲ್ಲಿಯವರೆಗೆ ಏಷ್ಯಾ ಕಪ್ 2022 ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ 16.33 ಸರಾಸರಿಯಲ್ಲಿ 6 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದಾರೆ. ಅದರಲ್ಲೂ ಭಾರತದ ವಿರುದ್ಧದ ತಮ್ಮ ಮೊದಲನೇ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್‌ರನ್ನು ಡಕ್‌ಔಟ್ ಮಾಡಿದ್ದರು.
ಅಫ್ಘಾನಿಸ್ತಾನ ವಿರುದ್ಧದ ಸೂಪರ್ 4 ಘರ್ಷಣೆಯಲ್ಲಿ ಅವರು ಸತತ ಸಿಕ್ಸರ್‌ಗಳನ್ನು ಹೊಡೆದು ತಮ್ಮ ತಂಡವನ್ನು ಒಂದು ವಿಕೆಟ್‌ನಲ್ಲಿ ರೋಚಕವಾಗಿ ಜಯ ಸಾಧಿಸಲು ಕಾರಣವಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications