For Quick Alerts
ALLOW NOTIFICATIONS  
For Daily Alerts
 

6 ಸಿಕ್ಸರ್‌ಗಳನ್ನು ಬಾರಿಸಿದ್ರೂ ಪರವಾಗಿಲ್ಲ, ನನಗೆ ವಿಕೆಟ್ ಸಿಗುವುದೇ ಮುಖ್ಯ: ಹಾರ್ದಿಕ್ ಪಾಂಡ್ಯ

Hardik pandya

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೊಂಬಾಟ್ ಜೊತೆಯಾಟದಿಂದಾಗಿ ಟೀಂ ಇಂಡಿಯಾ ಪಂದ್ಯ ಹಾಗೂ ಸರಣಿಯನ್ನ ಜಯಿಸಿತು. ಈ ಮೂಲಕ ಭಾರತದ ತೆಕ್ಕೆಗೆ 8 ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ ಏಕದಿನ ಸರಣಿ ಒಲಿದುಬಂದಿದೆ.

ಇಂಗ್ಲೆಂಡ್ ನೀಡಿದ್ದ 260ರನ್‌ಗಳ ಗುರಿಯನ್ನ ಬೆನ್ನತ್ತಿದ್ದ ಟೀಂ ಇಂಡಿಯಾ ಟಾಪ್‌ ಆರ್ಡರ್ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಒತ್ತಡಕ್ಕೆ ಸಿಲುಕಿತ್ತು. ಆದ್ರೆ ಐದನೇ ವಿಕೆಟ್‌ಗೆ ಜೊತೆಯಾದ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಶತಕದ ಜೊತೆಯಾಟದ ಮೂಲಕ ಕುಸಿದ ತಂಡವನ್ನ ಮೇಲೆತ್ತಿದರು.

ಬೊಂಬಾಟ್ ಶತಕ ಸಿಡಿಸಿದ ಪಂತ್

ಬೊಂಬಾಟ್ ಶತಕ ಸಿಡಿಸಿದ ಪಂತ್

72 ರನ್‌ಗಳಿಗೆ 4 ವಿಕೆಟ್ ಕಳೆದುಕೊಡಿದ್ದ ಟೀಂ ಇಂಡಿಯಾಗೆ ಆಧಾರವಾಗಿದ್ದೇ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು. ಅದ್ರಲ್ಲೂ ರಿಷಭ್ ಪಂತ್ ಅತ್ಯದ್ಭುತವಾದ ಬ್ಯಾಟಿಂಗ್ ಪ್ರದರ್ಶಿಸಿದರು. 113 ಎಸೆತಗಳಲ್ಲಿ ಅಜೇಯ 125 ರನ್ ಕಲೆಹಾಕಿದ ರಿಷಭ್ ಇನ್ನಿಂಗ್ಸ್‌ನಲ್ಲಿ 16 ಬೌಂಡರಿ, 2 ಸಿಕ್ಸರ್ ಒಳಗೊಂಡಿದ್ದವು. ಇಂಗ್ಲೆಂಡ್ ಬೌಲರ್‌ಗಳಿಗೆ ಎಲ್ಲಿಯೂ ಅವಕಾಶ ನೀಡದ ಪಂತ್ ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದು ತಂಡಕ್ಕೆ ಗೆಲುವು ತಂದಿಟ್ಟರು.

ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಟ , ಸರಣಿ ಶ್ರೇಷ್ಟ

ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಟ , ಸರಣಿ ಶ್ರೇಷ್ಟ

ಇನ್ನು ಪಂತ್ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ಕೂಡ ಜವಾಬ್ದಾರಿಯುತ ಆಟವಾಡಿದರು. 55 ಎಸೆತಗಳಲ್ಲಿ 71ರನ್ ಕಲೆಹಾಕಿದ ಪಾಂಡ್ಯ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳಿದ್ದವು. ಐದನೇ ವಿಕೆಟ್‌ಗೆ 133ರನ್‌ಗಳ ಜೊತೆಯಾಟವಾಡಿದ ಈ ಜೋಡಿ ಭರ್ಜರಿ ಪ್ರದರ್ಶನ ನೀಡಿತು.

ಇದಕ್ಕೂ ಮೊದಲು ಬೌಲಿಂಗ್‌ನಲ್ಲೂ ಮಿಂಚಿದ್ದ ಹಾರ್ದಿಕ್ ಏಕದಿನ ವೃತ್ತಿಜೀವನದಲ್ಲಿ ಬೆಸ್ಟ್ ಬೌಲಿಂಗ್ ಪ್ರದರ್ಶನ ನೀಡಿದರು. 7 ಓವರ್‌ಗಳಲ್ಲಿ 3 ಮೇಡನ್ ಓವರ್ ಸಹಿತ 24ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸಿದರು. ಜೇಸನ್ ರಾಯ್, ಬೆನ್‌ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಜೋಸ್ ಬಟ್ಲರ್‌ರಂತಹ ಅಪಾಯಕಾರಿ ಇಂಗ್ಲೆಂಡ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡುವಲ್ಲಿ ಸಮರ್ಥರಾದರು. ಜೊತೆಗೆ ಇಂಗ್ಲೆಂಡ್ ಸ್ಕೋರ್‌ಬೋರ್ಡ್ ಅನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ್ರು.

ಈ ಏಕದಿನ ಸರಣಿಯಲ್ಲಿ 100 ರನ್ ಹಾಗೂ 6 ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠರಾದರು. ಪಂದ್ಯ ಮುಗಿದ ಬಳಿಕ ಪಾಂಡ್ಯ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡರು.

ಭಾರತ ವಿರುದ್ಧದ ಏಕದಿನ ಸರಣಿಗೆ ಬಲಿಷ್ಟ ತಂಡವನ್ನು ಘೋಷಿಸಿದ ವೆಸ್ಟ್ ಇಂಡೀಸ್

ನನಗೆ ಆರು ಸಿಕ್ಸರ್ ಬಾರಿಸಿದ್ರೂ ಪರ್ವಾಗಿಲ್ಲ, ಒಂದು ಪ್ರಮುಖ ವಿಕೆಟ್ ಮುಖ್ಯ!

ನನಗೆ ಆರು ಸಿಕ್ಸರ್ ಬಾರಿಸಿದ್ರೂ ಪರ್ವಾಗಿಲ್ಲ, ಒಂದು ಪ್ರಮುಖ ವಿಕೆಟ್ ಮುಖ್ಯ!

ಸರಣಿ ಪುರುಷೋತ್ತಮ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಹಾರ್ದಿಕ್ ''ವೈಟ್ ಬಾಲ್ ಕ್ರಿಕೆಟ್ ನನ್ನ ವೈಯಕ್ತಿಕ ನೆಚ್ಚಿನ ಆಟ. ಇಂಗ್ಲೆಂಡ್ ತಂಡ ಎಷ್ಟು ಬಲಿಷ್ಠವಾಗಿದೆ ಎಂಬುದು ನಮಗೆಲ್ಲರಿಗೂ ಗೊತ್ತು. ನಮ್ಮ ಯೋಜನೆಗಳನ್ನು ತಂಡವಾಗಿ ರಚಿಸುವುದು ಮತ್ತು ಅವುಗಳನ್ನು ಕಾರ್ಯಗತಗೊಳಿಸುವುದು ನಮಗೆ ಪ್ರಮುಖವಾಗಿದೆ. ನನ್ನ ವಿಷಯದಲ್ಲಿ, ರನ್ ನೀಡದಂತೆ ನೋಡಿಕೊಳ್ಳುವುದರ ಜೊತೆಗೆ, ನಾನು ಸಾಧ್ಯವಾದಷ್ಟು ಡಾಟ್ ಬಾಲ್‌ಗಳನ್ನು ಹೊಡೆಯಲು ಪ್ರಯತ್ನಿಸುತ್ತೇನೆ. ನಾನು ಶಾರ್ಟ್ ಬಾಲ್‌ಗಳನ್ನು ಬೌಲ್ ಮಾಡಲು ಇಷ್ಟಪಡುತ್ತೇನೆ.

ಬ್ಯಾಟರ್ಸ್ ನನ್ನನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ನಾನು ಬದಲಾವಣೆಯೊಂದಿಗೆ(ವೇರಿಯೇಶನ್) ಬೌಲಿಂಗ್ ಮಾಡಬಲ್ಲೆ. ಆರು ಸಿಕ್ಸರ್‌ಗಳನ್ನು ಬಾರಿಸಿದರೂ ಪರವಾಗಿಲ್ಲ.. ನನಗೆ ವಿಕೆಟ್ ಸಿಗುತ್ತದೋ ಇಲ್ಲವೋ ಎಂಬುದು ಮುಖ್ಯ. ಇಲ್ಲದಿದ್ದರೆ, ಲಿವಿಂಗ್‌ಸ್ಟೋನ್ ನನ್ನ ಬೌಲಿಂಗ್‌ನಲ್ಲಿ ಹೊಡೆಯುತ್ತಿರುವಂತೆ ತೋರುತ್ತಿತ್ತು. ನನಗೆ ಅವಕಾಶವಿದೆ ಎಂದು ನನಗೆ ತಿಳಿದಿತ್ತು. ಹಾಗಾಗಿ ಅವನನ್ನು ಹಾಗೆ ಔಟ್‌ ಮಾಡಿದೆ. ನಾನು ಬೌಲರ್ ಆಗಿ ಎಂದಿಗೂ ನಾಚಿಕೆಪಡುವುದಿಲ್ಲ. ನನ್ನ ಬೌಲಿಂಗ್‌ನಲ್ಲಿ ಬ್ಯಾಟರ್ ಎಷ್ಟೇ ಹೊಡೆತಗಳನ್ನು ಹೊಡೆದರೂ ನಾನು ಆತ್ಮವಿಶ್ವಾಸದಿಂದ ಮುಂದುವರಿಯುತ್ತೇನೆ. ಮತ್ತು ರಿಷಬ್ ಪಂತ್ ಎಷ್ಟು ಪ್ರತಿಭಾವಂತ ಎಂದು ನಮಗೆ ತಿಳಿದಿದೆ. ಇಂದು ಅವರು ಪರಿಸ್ಥಿತಿಯನ್ನು ಚೆನ್ನಾಗಿ ನಿರ್ಣಯಿಸಿದರು ಮತ್ತು ಉತ್ತಮವಾಗಿ ಆಡಿದರು. ನಮ್ಮ ಜೊತೆಯಾಟವು ಪಂದ್ಯದ ಗತಿಯನ್ನೇ ಬದಲಿಸಿತು ಎಂದು ನಾನು ಭಾವಿಸುತ್ತೇನೆ. ಪಂತ್ ಆಟ ಮುಗಿಸಿದ ರೀತಿ ವಿಶೇಷವಾಗಿತ್ತು'' ಎಂದು ಹಾರ್ದಿಕ್ ಹೇಳಿದರು.

ಈ ಗೆಲುವಿನ ಮೂಲಕ ಭಾರತವು ಮೂರು ಪಂದ್ಯಗಳ ಏಕದಿನ ಸರಣಿಯನ್ನ 2-1ರಿಂದ ವಶಪಡಿಸಿಕೊಂಡಿದೆ. ರೋಹಿತ್ ಶರ್ಮಾ ನಾಯಕನಾದ ಬಳಿಕ ಸತತ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 2018ರಲ್ಲಿ ಇಂಗ್ಲೆಂಡ್ ಅನುಭವಿಸಿದ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದೆ.

Story first published: Monday, July 18, 2022, 10:13 [IST]
Other articles published on Jul 18, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+